ಯು ಟರ್ನ್ ಹೊಡೆದು ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್ ನೀಡಿದ ಎ ಮಂಜು ! ಮಾಡಿದ್ದೇನು ಗೊತ್ತಾ??

ಯು ಟರ್ನ್ ಹೊಡೆದು ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್ ನೀಡಿದ ಎ ಮಂಜು ! ಮಾಡಿದ್ದೇನು ಗೊತ್ತಾ??

ದೋಸ್ತಿಗಳು ಚುನಾವಣಾ ಮೈತ್ರಿಯನ್ನು ಮಾಡಿಕೊಂಡು ಕಣಕ್ಕೆ ಇಳಿಯುತ್ತಿರುವ ಕಾರಣ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಹೆಸರು ಕೇಳಿದ ತಕ್ಷಣ ಎ ಮಂಜುರವರು ಧ್ವನಿಯೆತ್ತಿ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಗೆ ನನ್ನ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದರು ಹಾಗೂ ರಾಜಕೀಯ ನಿಂತ ನೀರಲ್ಲ ಬಿಜೆಪಿ ಪಕ್ಷಕ್ಕೆ ಸೇರಲು ಸಿದ್ಧನಿದ್ದೇನೆ ಎಂಬ ಮಾತನ್ನು ನೇರವಾಗಿ ಆಡಿದರು.

ಅದಕ್ಕೆ ಪೂರಕ ಎಂಬಂತೆ ಕಳೆದ ಮೂರು ದಿನಗಳಿಂದ ಹಲವಾರು ಬಿಜೆಪಿ ಮುಖಂಡರ ಜೊತೆ ಹಲವಾರು ಚರ್ಚೆಗಳಲ್ಲಿ ಭಾಗವಹಿಸಿದ ಎ ಮಂಜುರವರು ಬಿಜೆಪಿ ಪಕ್ಷದಿಂದ ಟಿಕೆಟ್ ಗಾಗಿ ಕಾಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು ಹಾಗೂ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಇಂದು ಬೆಳಗ್ಗೆ ಬಿಜೆಪಿಯ ಯುವ ನಾಯಕ ಪ್ರೀತಂ ಗೌಡರ ಮನೆಗೆ ತೆರಳಿ ಉಪಹಾರ ಸೇವಿಸಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲು ಮುಂದಾಗಿದ್ದರು.

ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಎ ಮಂಜುರವರು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಅಭಿಪ್ರಾಯ ಎಲ್ಲರಲ್ಲೂ ಮನೆ ಮಾಡಿತ್ತು ಆದರೆ, ಎ ಮಂಜುರವರು ಇದ್ದಕ್ಕಿದ್ದ ಹಾಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹೌದು ಕೆಲವೇ ಕೆಲವು ಗಂಟೆಗಳ ಹಿಂದೆ ಮಾಧ್ಯಮಗಳ ಮುಂದೆ ಮಾತನಾಡಿದ ಎ ಮಂಜುರವರು, ಬಿಜೆಪಿ ಪಕ್ಷ ಸೇರುವ ಹಾಗೆ ಮಾತನಾಡಿದರು ಆದರೆ ಕೆಲವೇ ಕೆಲವು ನಿಮಿಷಗಳನಂತರ ಎ ಮಂಜು ಅವರ ಹೇಳಿಕೆ ಬದಲಾಗಿದೆ.

ಹೌದು ಇದ್ದಕ್ಕಿದ್ದ ಹಾಗೆ ಸಿದ್ದರಾಮಯ್ಯರವರ ಕರೆ ಬಂದ ನಂತರ ಎ ಮಂಜುರವರು ಯು ಟರ್ನ್ ಹೊಡೆದಿದ್ದು, ತಾವು ಇಂದು ರಾಜೀನಾಮೆ ನೀಡುವುದಿಲ್ಲ ಹಾಗೂ ಮುಂದಿನ ನಿರ್ಧಾರ ಏನೆಂಬುದು ಇನ್ನೂ ಖಚಿತವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕೆಲವೇ ಕೆಲವು ಗಂಟೆಗಳ ನಂತರ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ, ಎ ಮಂಜುರವರು ನಾಳೆ ಸಂಜೆ ಅಥವಾ ಸೋಮವಾರ ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದ್ದಕ್ಕಿದ್ದ ಹಾಗೆ ಈ ನಿರ್ಧಾರ ತೆಗೆದುಕೊಳ್ಳಲು ಸಿದ್ದರಾಮಯ್ಯರವರ ಕರೆ ಕಾರಣ ಎಂದು ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿದೆ ಮುಂದೇನು ಆಗಬಹುದು ಎಂದು ಎಲ್ಲರೂ ಕಾದು ಕುಳಿತಿದ್ದಾರೆ.