ಬಿಗ್ ನ್ಯೂಸ್: ಪ್ರೀತಮ್ ಗೌಡ ಎಂಟ್ರಿ,ಸಿದ್ದು ಆಪ್ತ ಬಿಜೆಪಿ ತೆಕ್ಕೆಗೆ

ಮುಂದಿನ ಲೋಕಸಭಾ ಚುನಾವಣೆಯ ದಿನ ದಿನವೂ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಗಳು ಹೆಚ್ಚಾಗುತ್ತಿವೆ. ದೋಸ್ತಿ ಮಾಡಿಕೊಂಡು ಚುನಾವಣಾಪೂರ್ವ ಮೈತ್ರಿಯನ್ನು ರಚಿಸಿಕೊಂಡು ಸೀಟುಗಳ ಹಂಚಿಕೆ ನಡೆಸಿಕೊಂಡಿರುವ ದೋಸ್ತಿಗಳು ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತ ವನ್ನು ಹತ್ತಿಕ್ಕಲು ವಿಫಲವಾಗುತ್ತಿದ್ದಾರೆ. ಮಂಡ್ಯದಲ್ಲಿ ಸುಮಲತಾ ರವರ ಸ್ಪರ್ಧೆ ಈಗಾಗಲೇ ಖಚಿತವಾಗಿದ್ದು ಹಲವಾರು ನಾಯಕರು ಸುಮಲತಾ ಅವರ ಬೆಂಬಲಕ್ಕೆ ನಿಂತು ಬಿಜೆಪಿ ಪಕ್ಷದ ಬೆಂಬಲದೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಎದುರಿಸಲು ಸಿದ್ಧವಾಗಿದ್ದಾರೆ.

ಇನ್ನು ಮೊದಲಿನಿಂದಲೂ ಪಕ್ಕಾ ರಾಜಕೀಯ ಶತ್ರುಗಳು ಎನಿಸಿಕೊಂಡಿದ್ದ ರೇವಣ್ಣ ರವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಹಾಸನ ಜಿಲ್ಲೆಯಿಂದ ಕಣಕ್ಕೆ ಇಳಿಯುತ್ತಿರುವ ಸುದ್ದಿ ಕೇಳಿದ ತಕ್ಷಣ ಮೊದಲು ಎ ಮಂಜುರವರು ಧ್ವನಿಯೆತ್ತಿದ್ದರು. ಮೈತ್ರಿ ಧರ್ಮಕ್ಕಾಗಿ ನಾನು ದೇವೇಗೌಡರು ಕಣಕ್ಕೆ ಇಳಿದರೆ ಸಂಪೂರ್ಣ ಬೆಂಬಲ ನೀಡುತ್ತೇನೆ ಆದರೆ ನನ್ನ ರಾಜಕೀಯ ಶತ್ರು ಎನಿಸಿಕೊಂಡಿರುವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಕಣಕ್ಕಿಳಿದರೆ ರಾಜಕೀಯ ನಡೆ ಇಡುತ್ತೇನೆ ಎಂದು ಬಿಜೆಪಿ ಪಕ್ಷಕ್ಕೆ ಸೇರುವ ಮುನ್ಸೂಚನೆ ನೀಡಿದ್ದರು.

ಈಗಾಗಲೇ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಖಚಿತವಾಗಿರುವ ಕಾರಣ ಎರಡು ಮೂರು ದಿನಗಳಿಂದ ಎ ಮಂಜುರವರು ಬಹಳ ಹುಮ್ಮಸ್ಸಿನಲ್ಲಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಬಿಜೆಪಿ ಪಕ್ಷಕ್ಕೆ ಸೇರುವ ಬಗ್ಗೆ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಹಲವಾರು ಬಿಜೆಪಿ ನಾಯಕರನ್ನು ಎ ಮಂಜುರವರು ಭೇಟಿ ಮಾಡಿ ಮುಂದಿನ ಲೋಕಸಭಾ ಚುನಾವಣೆಗೆ ಹಾಸನದಿಂದ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದಾರೆ. ಇದೀಗ ಎ ಮಂಜುರವರು ಬಿಜೆಪಿ ಪಕ್ಷ ಸೇರುವುದು ಖಚಿತವಾಗಿದೆ.

ಇನ್ನು ಈಗ ಯುವ ನಾಯಕ ದೇವೇಗೌಡರ ಭದ್ರಕೋಟೆ ಹಾಸನವನ್ನು ವಿಧಾನಸಭಾ ಚುನಾವಣೆಯಲ್ಲಿ ಛಿದ್ರ ಛಿದ್ರ ಮಾಡಿ ಗೆದ್ದು ಬಂದ ಪ್ರೀತಂ ಗೌಡ ರವರ ಮನೆಗೆ ಎ ಮಂಜುರವರು ಬೆಂಬಲ ಕೋರಲು ಹೋಗಿದ್ದಾರೆ ಎನ್ನಲಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಪ್ರೀತಂ ಗೌಡ ರವರ ಮನೆಗೆ ಭೇಟಿ ನೀಡಿರುವ ಎ ಮಂಜುರವರು ಬಿಜೆಪಿ ಪಕ್ಷಕ್ಕೆ ಸೇರುವುದು ಖಚಿತವಾಗಿದೆ. ಪ್ರೀತಮ್ ಗೌಡ ರವರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆಯಿಡಲು ಎ ಮಂಜುರವರು ಖುದ್ದು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಅಧಿಕೃತ ಘೋಷಣೆ ಹೊರ ಬರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಹಾಸನ ಲೋಕಸಭಾ ಕ್ಷೇತ್ರವು ಮತ್ತಷ್ಟು ರಂಗೇರಿದೆ.

Post Author: Ravi Yadav