ಕರ್ನಾಟಕ ರಾಜಕೀಯಕ್ಕೆ ಅಮಿತ್ ಶಾ ಎಂಟ್ರಿ: ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಬಿಜೆಪಿ, ಸುಮಲತಾ

ಕರ್ನಾಟಕ ರಾಜಕೀಯಕ್ಕೆ ಅಮಿತ್ ಶಾ ಎಂಟ್ರಿ: ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಬಿಜೆಪಿ, ಸುಮಲತಾ

ಮಂಡ್ಯ ಜಿಲ್ಲೆಯು ಇನ್ನಿಲ್ಲದ ಕುತೂಹಲವನ್ನು ದಿನೇ ದಿನೇ ಕೆರಳಿಸುತ್ತಿದೆ, ಸುಮಲತಾ ರವರ ಪ್ರತಿಯೊಂದು ಹೆಜ್ಜೆಯು ಬಾರಿ ಸದ್ದುಮಾಡುತ್ತಿದೆ. ನಿಖಿಲ್ ಕುಮಾರಸ್ವಾಮಿ ರವರನ್ನು ಸುಲಭವಾಗಿ ಜಯಿಸಬಲ್ಲ ಸುಮಲತಾ ರವರಿಗೆ ದಿನೇ ದಿನೇ ಬೆಂಬಲಗಳು ಜಾಸ್ತಿ ಆಗುತ್ತಿವೆ. ಇತ್ತ ಕುಮಾರಸ್ವಾಮಿ ರವರಿಗೆ ಮಗನ ಮೊದಲ ಚುನಾವಣೆಯಾದ್ದರಿಂದ ತುಸು ಟೆನ್ಶನ್ ಹೆಚ್ಚಾಗಿದೆ. ಅದರಲ್ಲಿಯೂ ಕುಮಾರಸ್ವಾಮಿ ರವರ ಹಾಗೂ ಜೆಡಿಎಸ್ ಪಕ್ಷದ ನಾಯಕರ ಹೇಳಿಕೆಗಳು ಸುಮಲತಾ ರವರಿಗೆ ಪ್ಲಸ್ ಪಾಯಿಂಟ್ ಆಗಿವೆ. ಹೀಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಲ್ಲದ ಕಾರಣ, ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ನೋಟಿಸ್ ಗು ತಲೆಕೆಡಿಸಿಕೊಳ್ಳದೆ ಸುಮಲತಾರವರನ್ನು ಬೆಂಬಲಿಸಿ ಗೆಲ್ಲಿಸುವುದಾಗಿ ಹೇಳಿದ್ದಾರೆ .

ಇಷ್ಟೆಲ್ಲ ವಿದ್ಯಮಾನಗಳಿಂದ ಸುಮಲತಾರವರು ನಿಖಿಲ್ ಕುಮಾರಸ್ವಾಮಿ ರವರನ್ನು ಬಹಳ ಸುಲಭವಾಗಿ ಸೋಲಿಸುತ್ತಾರೆ ಎಂದು ಕೆಲವು ಸಮೀಕ್ಷೆಗಳು ಸಹ ಹೇಳಿದ್ದವು, ಆದರೆ ಈದೀಗ ಈಗಾಗಲೇ ಬಾರಿ ಜನ ಬೆಂಬಲವನ್ನು ಹೊಂದಿರುವ ಸುಮಲತಾ ರವರಿಗೆ ಬಿಜೆಪಿ ಪಕ್ಷ ಬೆಂಬಲ ಸೂಚಿಸಿದೆ. ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇನೆ ಎಂದ ತಕ್ಷಣ ಸುಮಲತಾ ರವರು ಬಿಜೆಪಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಬಿಜೆಪಿ ಪಕ್ಷವು ಸುಮಲತಾ ರವರಿಗೆ ಬೆಂಬಲ ನೀಡಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆಯಿರಲು ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಸುಮಲತಾ ರವರ ಗೆಲುವೂ ಮತ್ತಷ್ಟು ಸುಲಭವಾಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ . ಬಿಜೆಪಿ ಪಕ್ಷದ ಹೈ ಕಮಾಂಡ್ ನ ಅಧ್ಯಕ್ಷ ಅಮಿತ್ ಶಾ ರವರು ಇದಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಕಾರಣ ರಾಜ್ಯದ ನಾಯಕರು ಸಹ ಒಪ್ಪಿಕೊಂಡಿದ್ದಾರೆ