2019 ಲೋಕಸಭಾ ಚುನಾವಣೆ: ಅನಂತಕುಮಾರ್ ಅವಿರೋಧ ಆಯ್ಕೆ !

2019 ಲೋಕಸಭಾ ಚುನಾವಣೆ: ಅನಂತಕುಮಾರ್ ಅವಿರೋಧ ಆಯ್ಕೆ !

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಈಗಾಗಲೇ ಸೀಟು ಹಂಚಿಕೆ ನಡೆಸಿವೆ. ಪ್ರತಿಯೊಂದು ಕ್ಷೇತ್ರಗಳು ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಡುತ್ತಿವೆ. ಪ್ರತಿಯೊಂದು ಕ್ಷೇತ್ರಗಳ ಮುಖ್ಯ ವನ್ನು ಈಗಾಗಲೇ ಬಿಜೆಪಿ ಹಾಗೂ ಇತರ ಪಕ್ಷಗಳು ಸಹ ಅರ್ಥ ಮಾಡಿಕೊಂಡಿವೆ. ಯಾಕೆಂದರೆ ಇದೀಗ ನರೇಂದ್ರ ಮೋದಿ ಅವರನ್ನು ಎದುರಿಸಲು ಬರೋಬ್ಬರಿ 20 ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳು ಹಾಗೂ ಒಂದು ರಾಷ್ಟ್ರೀಯ ಪಕ್ಷ ಒಟ್ಟಾಗಿ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯುತ್ತಿವೆ.

ಇಂತಹ ಸಂದಿಗ್ಧ ಸಮಯದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು ದಿನೇದಿನೇ ಏರತೊಡಗಿದೆ. ಇನ್ನು ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿಯುತ್ತಿದ್ದರೂ ಸಹ ನರೇಂದ್ರ ಮೋದಿ ರವರ ಅಲೆಯನ್ನು ತಡೆಯಲಾರದೆ ವಿಪಕ್ಷಗಳು ಒದ್ದಾಡುತ್ತೀವೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಅಕಾಡಕ್ಕೆ ಇಳಿಯುತ್ತಿದ್ದರೂ ಸಹ ದೋಸ್ತಿ ಗಳಿಗೆ ಎದುರಾಗಿರುವ ಸಂಕಟವನ್ನು ನೋಡಿದರೆ ಬಿಜೆಪಿ ಬೆಂಬಲಿಗರಲ್ಲಿ ಹರ್ಷೋದ್ಗಾರ ಮೂಡುತ್ತದೆ. ಇಷ್ಟೇ ಅಲ್ಲದೆ ಒಂದು ವೇಳೆ ಇದೆ ಮುಂದುವರೆದಲ್ಲಿ ಅನಂತ್ ಕುಮಾರ್ ಹೆಗಡೆ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಮೈತ್ರಿ ಧರ್ಮದ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಿಂದ ಕೇವಲ ಜೆಡಿಎಸ್ ಅಭ್ಯರ್ಥಿ ಮಾತ್ರ ಸ್ಪರ್ಧಿಸಬೇಕು ಇದುವರೆಗೂ ಅನಂತ್ ಕುಮಾರ್ ಹೆಗಡೆ ಅವರನ್ನು ತಡೆಯಲು ಜಿಲ್ಲೆಯಲ್ಲಿ ಅಲ್ಪಸ್ವಲ್ಪ ನೆಲೆಯೂರಿರುವ ಕಾಂಗ್ರೆಸ್ ಪಕ್ಷದ ಕೈಯಲ್ಲಿ ಸಾಧ್ಯವಾಗಿಲ್ಲ. ಇನ್ನು ಈ ಬಾರಿಯೂ ಅನಂತ್ ಕುಮಾರ್ ಹೆಗಡೆ ಅವರಿಗೆ ಈಗಾಗಲೇ ಟಿಕೆಟ್ ಖಚಿತವಾಗಿದೆ, ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಅನಂತ್ ಕುಮಾರ್ ಹೆಗಡೆ ಅವರನ್ನು ಸೋಲಿಸುವುದು ಸುಲಭದ ಮಾತಲ್ಲ. ಇದನ್ನೆಲ್ಲಾ ಅರಿತಿದ್ದರು ಸಹ ಜೆಡಿಎಸ್ ಪಕ್ಷವು ಸಿಕ್ಕಷ್ಟು ಬಾಚಿಕೊಳ್ಳುವ ಎಂಬಂತೆ ಉತ್ತರ ಕನ್ನಡ ಜಿಲ್ಲೆಯನ್ನು ತನ್ನ ಪಾಲಿಗೆ ಕಾಂಗ್ರೆಸ್ ಬಳಿ ಮೈತ್ರಿ ಮಾಡಿಕೊಂಡು ವಿಂಗಡನೆ ಮಾಡಿಕೊಂಡಿತ್ತು.

ಆದರೆ ಜೆಡಿಎಸ್ ಪಕ್ಷದ ಅಸ್ತಿತ್ವವೇ ಇಲ್ಲದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತ್ ಕುಮಾರ್ ಹೆಗಡೆ ರವರ ವರ್ಚಸ್ಸನ್ನು ಕಂಡಿರುವ ಕೆಲವೇ ಕೆಲವು ಜೆಡಿಎಸ್ ನಾಯಕರು ಯಾರೊಬ್ಬರು ಅನಂತ್ ಕುಮಾರ್ ಹೆಗಡೆ ರವರನ್ನು ಚುನಾವಣೆಯಲ್ಲಿ ಎದುರಿಸಲು ಮುಂದೆ ಬರುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಇಷ್ಟು ದಿನ ಸೀಟುಗಳಿಗಾಗಿ ಹೊಡೆದಾಡುತ್ತಿದ್ದ ಜನಪ್ರತಿನಿಧಿಗಳು ಇದೀಗ ಅನಂತ್ ಕುಮಾರ್ ಹೆಗಡೆ ಅವರನ್ನು ಎದುರಿಸಲು ಮುಂದೆ ಬರುತ್ತಿಲ್ಲ, ಜೆಡಿಎಸ್ ಪಕ್ಷವು ಟಿಕೆಟ್ ನೀಡಲು ಸಿದ್ಧರಾಗಿದ್ದರು ಸಹ ಯಾವೊಬ್ಬ ನಾಯಕನೂ ಟಿಕೆಟ್ ತೆಗೆದು ಕೊಳ್ಳಲು ಮುಂದೆ ಬರುತ್ತಿಲ್ಲ. ಇದನ್ನು ಕಂಡ ಜೆಡಿಎಸ್ ಪಕ್ಷವು ಶಾಕ್ ಆಗಿದ್ದು ಅನಂತ್ ಕುಮಾರ್ ಹೆಗಡೆ ಅವರ ವರ್ಚಸ್ಸು ಏನೆಂಬುದು ಎಲ್ಲರಿಗೂ ಮತ್ತೊಮ್ಮೆ ಸಾರಿ ದಂತಾಗಿದೆ.