ಬಿಗ್ ನ್ಯೂಸ್: ಮತ್ತಷ್ಟು ಕೇಸರಿಮಯ ವಾದ ಬಂಗಾಳ, ಮೋದಿ ಅಲೆಯಲ್ಲ ಸುನಾಮಿ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಪಕ್ಷಕ್ಕೆ ಬಾರಿ ಸಿಹಿ ಸುದ್ದಿ ಗಳು ಸಿಗುತ್ತವೆ. ಈಗಾಗಲೇ ಹಲವಾರು ಪಕ್ಷಗಳು ಮಹಾ ಘಟಕ ಬಂಧನ ಸೇರಿಕೊಂಡಿದ್ದರು ಸಹ, ಬಲಿಷ್ಠ ಪ್ರಾದೇಶಿಕ ಪಕ್ಷಗಳು ಬಿಜೆಪಿ ಪಕ್ಷದ ಜೊತೆ ಕೈ ಜೋಡಿಸಿವೆ ಹಾಗೂ ಎಂತಹ ಸಂದಿಗ್ಧ ಸಮಯದಲ್ಲಿ ನರೇಂದ್ರ ಮೋದಿರವರ ಕೈ ಹಿಡಿಯುತ್ತೇವೆ ಎಂದು ಹೀಗಾಗಲೇ ಹತ್ತು ಹಲವಾರು ದೊಡ್ಡ ಪಕ್ಷಗಳು ಘೋಷಿಸಿವೆ. ಇಂತಹ ಸಮಯದಲ್ಲಿ ತನ್ನ ಅಸ್ತಿತ್ವವೇ ಇಲ್ಲದ ಬಂಗಾಳದಲ್ಲಿ ನರೇಂದ್ರ ಮೋದಿರವರ ಅಲೆ ಕಂಡು ಸ್ವತಹ ಅಧಿಕಾರದಲ್ಲಿ ಬೀಗುತ್ತಿರುವ ಮಮತಾ ರವರು ನಡುಗಿ ಹೋಗಿದ್ದಾರೆ.

ಹೌದು ಪಕ್ಷಿಮ ಬಂಗಾಳ ದಲ್ಲಿ ಈಗ ಎಲ್ಲಿ ನೋಡಿದರೂ ನರೇಂದ್ರ ಮೋದಿ ರವರ ಹವಾ ಜೋರಾಗಿ ಕೇಳಿ ಬರುತ್ತಿದೆ. ಅದರಲ್ಲಿಯೂ ಅಮಿತ್ ಶಾ ರವರು ಪಶ್ಚಿಮ ಬಂಗಾಳಕ್ಕೆ ವಿಶೇಷ ಕಾಳಜಿಯನ್ನು ನೀಡಿದ ಕಾರಣ ಮಮತಾ ರವರ ಭದ್ರಕೋಟೆ ಎನಿಸಿಕೊಂಡಿದ್ದ ಪಶ್ಚಿಮ ಬಂಗಾಳದ ಈಗ ನರೇಂದ್ರ ಮೋದಿ ಅವರ ಅಲೆಗೆ ಅಕ್ಷರ ಸಹ ಕೊಚ್ಚಿಕೊಂಡು ಹೋಗಿದೆ. ಈ ಮಾತಿಗೆ ಪೂರಕ ಎಂಬಂತೆ ಇಂದು ಬಂಗಾಳದ ರಾಜ್ಯ ರಾಜಕಾರಣ ಮತ್ತಷ್ಟು ರಂಗೇರಿದೆ. ಟಿಎಂಸಿ ಪಕ್ಷದ ಅತಿ ಹೆಚ್ಚು ಬಲಾಡ್ಯ ನಾಯಕರಲ್ಲಿ ಒಬ್ಬರಾಗಿರುವ ಈ ನಾಯಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಬಿಜೆಪಿ ಪಕ್ಷದಲ್ಲಿ ಇನ್ನಿಲ್ಲದ ಹುಮ್ಮಸ್ಸನ್ನು ಮೂಡಿಸಿದೆ.

ಮೊದಲಿನಿಂದಲೂ ಮಮತಾ ಬ್ಯಾನರ್ಜಿ ರವರ ಆಪ್ತ ಸಹಾಯಕನಾಗಿ ಗುರುತಿಸಿಕೊಂಡು ಬಂದಿರುವ ಅರ್ಜುನ್ ಸಿಂಗ್ ರವರು ಕಳೆದ ನಾಲ್ಕು ಬಾರಿ ಟಿಎಂಸಿ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉತ್ತರ ಕೋಲ್ಕತಾದಿಂದ ನಾಡಿಯವರಿಗೆ ಅತಿ ಹೆಚ್ಚು ಪ್ರಭಾವವನ್ನು ಹೊಂದಿರುವ ಈ ನಾಯಕ ಉತ್ತರ ಕೋಲ್ಕತಾದಲ್ಲಿ ಟಿಎಂಸಿ ಪಕ್ಷದ ಬೆನ್ನೆಲುಬಾಗಿ ನಿಂತಿದ್ದರು. ಅಷ್ಟೇ ಅಲ್ಲದೆ ಇಡೀ ರಾಜ್ಯಾದ್ಯಂತ ತಮ್ಮ ಸಂಪರ್ಕ ಬಲದಿಂದ ಅನೇಕ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಚಿಟಿಕೆ ಹೊಡೆಯುವಷ್ಟು ಸುಲಭವಾಗಿ ಗೆಲ್ಲಿಸಿ ಕೊಟ್ಟಿದ್ದರು.

ತಳಮಟ್ಟದಿಂದ ಕೆಲಸ ನಿರ್ವಹಿಸುವುದರಲ್ಲಿ ಬಹಳ ಸಕ್ರಿಯವಾಗಿದ್ದ ಇವರು ಪಂಚಾಯತಿ ಚುನಾವಣೆ ಯಿಂದ ಹಿಡಿದು ಸಂಸತ್ ಚುನಾವಣೆಯ ವರೆಗೂ ಬೂತ್ ಮಟ್ಟದಲ್ಲಿ ಕೆಲಸ ನಿರ್ವಹಿಸಿ ಟಿಎಂಸಿ ಪಕ್ಷವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ನಾಯಕ ಮಮತಾ ರವರ ದೇಶದ್ರೋಹಿ ಹೇಳಿಕೆಗಳಿಗೆ ಬೇಸತ್ತು, ಸೇನಿ ಯನ್ನು ಸಾವಿನ ಲೆಕ್ಕಾಚಾರ ಕೇಳಿದ್ದಕ್ಕೆ ಬೇಸತ್ತಿದ್ದೇನೆ ಹಾಗೂ ನರೇಂದ್ರ ಮೋದಿ ರವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಮಮತಾ ಬ್ಯಾನರ್ಜಿ ರವರಿಗೆ ಬಹುದೊಡ್ಡ ಆಘಾತ ಎದುರಾಗಿದೆ. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಇರುವುದರಿಂದ ಚುನಾವಣೆಯ ಮೇಲೆ ಇದರ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ.

Post Author: Ravi Yadav