ತುರ್ತಾಗಿ ಗಡಿ ತಲುಪಿದ ಹತ್ತು ಸಾವಿರ ಸೈನಿಕರು ಕಾರಣವೇನು ಗೊತ್ತಾ??

ತುರ್ತಾಗಿ ಗಡಿ ತಲುಪಿದ ಹತ್ತು ಸಾವಿರ ಸೈನಿಕರು ಕಾರಣವೇನು ಗೊತ್ತಾ??

ಪುಲ್ವಾಮ ದಾಳಿಯ ನಂತರ ಭಾರತ ಹಾಗು ಪಾಕಿಸ್ತಾನದ ನಡುವಿನ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸುತ್ತಾ ಬಂದಿದೆ. ಮೊದಲು ಗಡಿಯಲ್ಲಿ ಭಾರತೀಯ ಕೇಂದ್ರ ಸರ್ಕಾರವು 400ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್ ಗಳು ಹಾಗೂ 140ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಜಮಾ ವಣೆ ಮಾಡಿ ಪಾಕಿಸ್ತಾನದಲ್ಲಿ ನಡುಕ ಹುಟ್ಟಿಸಿದ್ದರು. ಅಂದಿನಿಂದ ಇಲ್ಲಿವರೆಗೆ ಪಾಕಿಸ್ತಾನವು ಬಹಳ ಭಯದಲ್ಲಿ ಬದುಕುತ್ತಿದೆ.ಅಷ್ಟೇ ಅಲ್ಲದೆ ಈಗಾಗಲೇ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರತಿ ಕ್ಷಣದ ಮಾಹಿತಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾದ ಇಮ್ರಾನ್ ಖಾನ್ ರವರಿಗೆ ರವಾನೆಯಾಗುತ್ತಿದೆ. ಯುದ್ಧಕ್ಕೆ ಈಗಾಗಲೇ ಪಾಕಿಸ್ತಾನವು ಸಜ್ಜಾಗಿದೆ, ತನ್ನ ಆಸ್ಪತ್ರೆಗಳಿಗೆ ಯುದ್ಧದ ಸಂದರ್ಭಕ್ಕೆ ಸಜ್ಜಾಗುವಂತೆ ಸೂಚಿಸಲಾಗಿದೆ. ಇಷ್ಟೇ ಅಲ್ಲದೆ ಇನ್ನೂ ಹತ್ತು ಹಲವಾರು ತಯಾರಿಗಳನ್ನು ಮಾಡಿಕೊಂಡು ಪಾಕಿಸ್ತಾನವು ಭಾರತದ ದಾಳಿಯನ್ನು ಎದುರಿಸುವ ಹುಚ್ಚು ಕನಸು ಕಾಣುತ್ತಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಭಾರತದ ವಿಮಾನ ಎಂದು ಭಯ ಬಿದ್ದು ತನ್ನ ವಿಮಾನವನ್ನು ತಾನೇ ರಾಕೆಟ್ ಲಾಂಚರ್ ಗಳ ಮೂಲಕ ಉಡಾಯಿಸಿ ವಿಶ್ವದ ಮುಂದೆ ನಗೆಪಾಟಲಿಗೆ ಈಡಾಗಿದ್ದಾರು.

ನಾವು ಯುದ್ಧಕ್ಕೆ ಸಿದ್ಧ ಎಂದು ಇಮ್ರಾನ್ ಖಾನ್ ರವರು ಹೇಳಿಕೆ ನೀಡಿದ 24 ಗಂಟೆಗಳಲ್ಲಿಯೆ ವಿಶ್ವಸಂಸ್ಥೆಯ ಕದ ತಟ್ಟಿ ಭಾರತದಿಂದ ಯುದ್ಧ ನಡೆಯದಂತೆ ನೋಡಿಕೊಳ್ಳಲು ಕೋರಿಕೊಂಡಿದ್ದರು.  ಒಂದು ಕಡೆ ಪಾಕಿಸ್ತಾನ ಭಯಬೀತ ಗೊಂಡಿದ್ದರೇ ಮತ್ತೊಂದು ಕಡೆ ಭಾರತ ದೇಶವು ಪ್ರತಿಕಾರಕ್ಕಾಗಿ ಹೊಂಚು ಹಾಕಿ ಕುಳಿತಿದೆ. ಸರಿಯಾದ ಸಮಯ ನೋಡಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದು ಭಾರತದ ಉದ್ದೇಶವಿರಬಹುದು.

ಆದ ಕಾರಣ ಕ್ಕಾಗಿಯೇ ಗಡಿಯಲ್ಲಿ ಯುದ್ಧದ ವಾತಾವರಣ ಈಗಾಗಲೇ ನಿರ್ಮಾಣಗೊಂಡಿದೆ. ಎಲ್ಲಾ ವಿದ್ಯಮಾನಗಳ ನಡುವೆ ಕೇಂದ್ರ ಸರ್ಕಾರವು ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡು ಈಗಾಗಲೇ ಪಾಕಿಸ್ತಾನಕ್ಕೆ ಹೊಡೆತಗಳ ಮೇಲೆ ಹೊಡೆತಗಳನ್ನು ನೀಡಿದೆ. ಸಂಪೂರ್ಣ ವ್ಯಾಪಾರ ವಹಿವಾಟು ಬಂದ್ ಆಗಿರುವ ಕಾರಣ ಪಾಕಿಸ್ತಾನಕ್ಕೆ ಬೇರೆ ದಾರಿ ಕಾಣಿಸುತ್ತಿಲ್ಲ. ಮತ್ತೊಂದು ಕಡೆ ಕಾಶ್ಮೀರವನ್ನು ಪ್ರತ್ಯೇಕ ಮಾಡಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದ ಹೋರಾಟಗಾರರ ರಕ್ಷಣೆಯನ್ನು ಸಹ ಸೈನಿಕರು ವಾಪಸ್ ಪಡೆದಿದ್ದಾರೆ.

ಇನ್ನು ನೆನ್ನೆಯಷ್ಟೇ ಪ್ರತ್ಯೇಕವಾದಿಗಳ ನಾಯಕರಾಗಿದ್ದ ಯಾಸಿನ್ ಮಲಿಕ್ ರವರನ್ನು ಕೇಂದ್ರ ಸರ್ಕಾರ ಬಂಧಿಸಿದೆ. ಇದರಿಂದ ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತಷ್ಟು ಹತೋಟಿ ಕಳೆದುಕೊಳ್ಳುವಂತಾಗಿದೆ. ಈಗಾಗಲೇ ಹಿಂಸಾಚಾರ ಭುಗಿಲೆದ್ದಿದ್ದು ಸೇನೆಯ ಮೇಲೆ ದಾಳಿಗಳು ನಡೆಯುತ್ತಿವೆ, ಆದರೆ ಸಂಪೂರ್ಣ ಸ್ವಾತಂತ್ರ ವಿರುವ ಕಾರಣ ಕಲ್ಲು ಹೊಡೆದರೆ ಗುಂಡಿಕ್ಕಿ ಕೊಲ್ಲುತ್ತಾರೆ ಎಂದು ಯಾರ ಮುಂದೆ ಬರುತ್ತಿಲ್ಲ.

ಇನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಆರ್ಟಿಕಲ್ 370 ರದ್ದು ಪಡಿಸಲು ಕೇಸ್ ದಾಖಲಿಸಿರುವ ಕಾರಣ ತುರ್ತಾಗಿ ತೀರ್ಪನ್ನು ಪ್ರಕಟಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇದೇ ಹಿನ್ನೆಲೆಯಲ್ಲಿ ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಭಾರತೀಯ ಸೇನೆಯು ಸಿದ್ಧವಾಗಿ ನಿಂತಿದೆ ಆದ ಕಾರಣ ಕ್ಕಾಗಿಯೇ ಬರೋಬ್ಬರಿ ಹತ್ತು ಸಾವಿರ ಸೈನಿಕರು ಈಗಾಗಲೇ ಗಡಿ ತಲುಪಿದ್ದಾರೆ.

ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿ ರುವ ಕಾರಣ ಎಲ್ಲಾ ಪರಿಸ್ಥಿತಿಗಳಿಗೆ ಸಿದ್ಧರಾಗುವಂತೆ ಈಗಾಗಲೇ ಸೇನೆಗೆ ಸೂಚಿಸಲಾಗಿದೆ. ಇನ್ನು ಹತ್ತು ಸಾವಿರ ಸೈನಿಕರು ಶ್ರೀನಗರಕ್ಕೆ ತಲುಪಿದ್ದು, ದೇಶದೊಳಗಿರುವ ದೇಶದ್ರೋಹಿಗಳು ಅಥವಾ ದೇಶದ ಗಡಿಯಾಚೆ ಇಂದ ದಾಳಿ ಮಾಡುವ ವಿರೋಧಿಗಳಿಗೆ ತಕ್ಕ ಉತ್ತರ ನೀಡಲು 45 ತುಕಡಿ ಸಿಆರ್ಪಿಎಫ್ ಯೋಧರು, 35 ಬಿ ಎಸ್ ಎಫ್ ಯೋಧರು, ಹಾಗೂ ಎಸ್ಎಸ್ಬಿ, ಐಟಿಬಿಪಿ ತಲ ಹತ್ತು ತುಕಡಿಗಳನ್ನು ಜಮಾವಣೆ ಮಾಡಲಾಗಿದೆ. ಅರೆಸೇನಾ ಪಡೆಗಳನ್ನು ಕಡೆಗಳಿಂದ ಸುಮಾರು ಹತ್ತು ಸಾವಿರ ಸೈನಿಕರು ಈಗಾಗಲೇ ಶ್ರೀನಗರ ತಲುಪಿದ್ದಾರೆ.

ಈ ರೀತಿಯ ವಿದ್ಯಮಾನಗಳನ್ನು ಗಮನಿಸಿದರೆ ಭಾರತ ದೇಶವು ಎರಡು ಕಡೆಯಿಂದ ಯುದ್ಧವನ್ನು ತಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಮೊದಲನೆಯದು ಗಡಿಯಾಚೆ ಯಿಂದ ಬರುವ ವೈರಿಗಳು ಎರಡನೆಯದು ಕಾಶ್ಮೀರದಲ್ಲಿ ಅಡಗಿ ಕುಳಿತುಕೊಂಡಿರುವ ದೇಶದ್ರೋಹಿಗಳು ಇಬ್ಬರನ್ನು ಹೊಡೆದುರುಳಿಸಲು ಭಾರತೀಯ ಸೇನೆಯನ್ನು ಜಮಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ..ಗಡಿಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ.