ಮಮತಾ ರವರ ಕರಾಳ ಆಡಳಿತದ ಕುರಿತು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಐಪಿಎಸ್ ಅಧಿಕಾರಿ

ಮಮತಾ ರವರ ಕರಾಳ ಆಡಳಿತದ ಕುರಿತು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಐಪಿಎಸ್ ಅಧಿಕಾರಿ

ಪಕ್ಷಿಮ ಬಂಗಾಳದ ಮುಖ್ಯಮಂತ್ರಿ ಗಳಾಗಿರುವ ಮಮತಾ ಬ್ಯಾನರ್ಜಿ ಅವರು ಮೊದಲಿನಿಂದಲೂ ತಮ್ಮ ಸರ್ವಾಧಿಕಾರದ ಮೂಲಕ ದೇಶದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಸಿಬಿಐ ಅಧಿಕಾರಿ ಗಳನ್ನು ಬಂಧಿಸಿ ಉದ್ಧಟತನ ಮೆರೆದಿದ್ದ ಮಮತಾ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್ ನ ಮುಂದೆ ಕುರ್ಚಿ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದಾಗ ಯು ಟರ್ನ್ ಹೊಡೆದು ವಿಚಾರಣೆಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು.

ಇದೇ ರೀತಿಯ ಹಲವಾರು ವಿದ್ಯಮಾನಗಳಿಂದ ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರ ನಡೆಸುತ್ತಿದ್ದಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ದೂಷಿಸುವ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರ ನಡೆಸುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದ್ದು ಈ ಬಾರಿ ಅವರ ಸರ್ವಾಧಿಕಾರ ಹಾಗೂ ದ್ವೇಷ ರಾಜಕಾರಣ ಐಪಿಎಸ್ ಅಧಿಕಾರಿಯನ್ನು ಬಲಿತೆಗೆದುಕೊಂಡಿದೆ. ಪತ್ರದ ಸಂಪೂರ್ಣ ವಿವರ ಹಾಗೂ ಕರಾಳ ಆಡಳಿತದ ಬಗ್ಗೆ ತಿಳಿಯಲು ದಯವಿಟ್ಟು ಸಂಪೂರ್ಣ ಓದಿ

ಅಷ್ಟಕ್ಕೂ ನಡೆದಿದ್ದೇನು??

ಗೌರವ್ ದತ್ ಎಂಬ 1986ರ ಬ್ಯಾಚಿನ ಐಎಎಸ್ ಅಧಿಕಾರಿಯೊಬ್ಬರನ್ನು, ಪುರುಷ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 2010ರಲ್ಲಿ ಕೆಲಸದಿಂದ ಅಮಾನತು ಗೊಳಿಸಿ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು. ತದನಂತರ ಐಪಿಎಸ್ ಅಧಿಕಾರಿಯ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಮತ್ತೆ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳದ ಹಾಗೆ ಮಮತಾ ಬ್ಯಾನರ್ಜಿ ಅವರು ನೋಡಿಕೊಂಡಿದ್ದರು.

ಕೋರ್ಟಿನಲ್ಲಿ ಮಮತಾ ಬ್ಯಾನರ್ಜಿ ರವರ ಸರ್ಕಾರ ಗೌರವ್ ದತ್ ಮೇಲಿನ ಭ್ರಷ್ಟಾಚಾರ ಪ್ರಕರಣವನ್ನು ನಿರೂಪಿಸಲಾಗಲಿಲ್ಲ ಇದರಿಂದ ಮಮತಾ ಬ್ಯಾನರ್ಜಿ ಅವರಿಗೆ ಮತ್ತಷ್ಟು ಮುಖಭಂಗವಾಯಿತು. ಇಷ್ಟು ಸಾಲದು ಎಂಬಂತೆ ಪುರುಷ ಸಿಬ್ಬಂದಿಯ ಮೇಲೆ ಲೈಂಗಿಕ ಪ್ರಕರಣದ ಸಂಪೂರ್ಣ ಕಡತಗಳನ್ನು ಸರ್ಕಾರ ಕಳೆದು ಹಾಕಿತ್ತು ಇದರ ಹಿಂದೆ ಮಮತಾ ಬ್ಯಾನರ್ಜಿ ರವರ ನೇರ ಕೈವಾಡ ಇದೆ ಎಂಬುದು ಎಲ್ಲರಿಗೂ ತಿಳಿದಿತ್ತು.

ಈ ಎರಡು ಪ್ರಕರಣಗಳನ್ನು ನಿರೂಪಿಸಲಾದ ಕಾರಣ ಗೌರವ್ ದತ್ ಅವರು ತಮ್ಮ ಪ್ರಕರಣಗಳನ್ನು ತೆರವುಗೊಳಿಸಲು ಹಲವಾರು ಬಾರಿ ಮಮತಾ ಬ್ಯಾನರ್ಜಿ ರವರ ಕದ ತಟ್ಟಿದ್ದರು ಆದರೆ ಹಗೆ ಸಾಧಿಸಲು ನಿಂತಿದ್ದ ಮಮತಾ ಬ್ಯಾನರ್ಜಿ ಅವರು ಯಾವುದೇ ಉತ್ತರವನ್ನು ನೀಡದೆ ಸುಮ್ಮನಾಗಿದ್ದರು. ಈ ಕುರಿತು ಸ್ವತಹ ಪೊಲೀಸ್ ಮಹಾ ನಿರ್ದೇಶಕರು ಸಹ ಐಪಿಎಸ್ ಅಧಿಕಾರಿ ಬೆಂಬಲಕ್ಕೆ ನಿಂತಿದ್ದರು ಆದರೆ ಮಮತಾ ಬ್ಯಾನರ್ಜಿ ಅವರು ಇದಕ್ಕೂ ಸೊಪ್ಪು ಹಾಕಲಿಲ್ಲ.

ಇದರಿಂದ ಮನನೊಂದ ಗೌರವ್ ದತ್ ಅವರು ನಿವೃತ್ತಿಯ ನಂತರ ಉಳಿತಾಯದ ಹಣವನ್ನು ಸಹ ಪಡೆಯಲು ಸಾಧ್ಯವಾಗದೆ ಇದ್ದಾಗ ಬೇರೆ ದಾರಿಯಿಲ್ಲದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿರುವ ಐಪಿಎಸ್ ಅಧಿಕಾರಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪಕ್ಷಿಮ ಬಂಗಾಳದ ಈಗಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವರೆ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮುಖ್ಯಮಂತ್ರಿಗಳ ಕರಾಳ ಆಡಳಿತವನ್ನು ತಮ್ಮ ಆತ್ಮಹತ್ಯೆ ಪತ್ರದಲ್ಲಿ ತೆರೆದು ಇಟ್ಟಿರುವ ಐಪಿಎಸ್ ಅಧಿಕಾರಿ ಆತ್ಮಹತ್ಯೆ ನಂತರವಾದರೂ ಸಹ ನನ್ನ ಮೇಲಿನ ಪ್ರಕರಣಗಳನ್ನು ಕೈಬಿಟ್ಟು ನನ್ನ ಉಳಿತಾಯದ ಹಣವನ್ನು ಕುಟುಂಬದವರಿಗೆ ನೀಡಿದರೆ ಅವರ ಆದರೂ ಗೌರವಯುತವಾಗಿ ಬದುಕುತ್ತಾರೆ. ನನ್ನ ಮೇಲಿನ ದ್ವೇಷದಿಂದ ನನಗೆ ಪಾಠ ಕಲಿಸಬೇಕು ಎನ್ನುವ ಒಂದೇ ಉದ್ದೇಶದಿಂದ ನನ್ನ ನಿವೃತ್ತಿಯ ಹಣ ಸಹ ನನಗೆ ನೀಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಮತಾ ರವರ ಈ ರೀತಿಯ ಸೇಡಿನ ಮನೋಭಾವ ರಾಜ್ಯದಲ್ಲಿ ಯಾರೊಬ್ಬರೂ ಅವರ ವಿರುದ್ಧ ಮಾತನಾಡಲು ಧೈರ್ಯದಿಂದ ಮುಂದೆ ಬರುತ್ತಿಲ್ಲ ಎಲ್ಲರೂ ಇಲ್ಲಿ ಬಂದಿ ಗಳಾಗಿ ಬಿಟ್ಟಿದ್ದಾರೆ. ಇನ್ನೊಂದು ರೀತಿ ಕಾಫ್ಕಾ ಸ್ಥಿತಿ ನಿರ್ಮಾಣವಾಗಿದೆ ಮುಖ್ಯಮಂತ್ರಿಗಳಾಗಿ ಮಮತಾ ಬ್ಯಾನರ್ಜಿ ಅವರು ಬಂಗಾಳವನ್ನು ನರಕವನ್ನಾಗಿ ಮಾರ್ಪಡಿಸಿದ್ದಾರೆ  ಎಂದೆನಿಸುತ್ತದೆ ಎಂದು ಕರಾಳ ಆಡಳಿತದ ಕುರಿತು ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನನ್ನ ಈ ಪತ್ರ ಪ್ರಾಮಾಣಿಕ ಅಧಿಕಾರಿಗಳ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಇದೆ ಇನ್ನು ಮುಂದಾದರೂ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡುವ ಮುನ್ನ ಸರ್ಕಾರ ಎರಡು ಬಾರಿ ಯೋಚಿಸುತ್ತದೆ ಎಂದು ಭಾವಿಸುತ್ತೇನೆ  ಎಂದು ಪತ್ರದಲ್ಲಿ ಬರೆದಿದ್ದಾರೆ.ಈ ರೀತಿಯ ನರಕವನ್ನು ಸೃಷ್ಟಿಸಿರುವ ಮಮತಾ ಬ್ಯಾನರ್ಜಿ ರವರು ಇಂದಿಗೂ ಪಕ್ಷಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಮೆರೆಯುತ್ತಿದ್ದಾರೆ.

ಜನರು ತಮ್ಮ ಮತವನ್ನು ಯಾವುದೇ ಬೆದರಿಕೆಗೂ ಅಥವಾ ಹಣಕ್ಕೋ ಮಾರಿಕೊಂಡರೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ, ನಿಮ್ಮ ಒಂದು ಮತ ದೇಶದ ಮುಂದಿನ ದಿಕ್ಸೂಚಿಯಂತೆ, ದಯವಿಟ್ಟು ಯಾವುದೇ ಆಮಿಷಗಳಿಗೆ ಒಳಗಾಗಿ ಮತ ನೀಡಬೇಡಿ. ದೇಶವನ್ನು ಮುನ್ನಡೆಸುವ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಹಕ್ಕು ನಿಮ್ಮದು. ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ ಹಾಗೂ ಶೇರ್ ಮಾಡುವ ಮೂಲಕ ಎಲ್ಲರಿಗೂ ಸತ್ಯದ ಅರಿವು ಮೂಡಿಸಿ.