ಬಿ ಸ್ ವೈ ಮಾಸ್ಟರ್ ಪ್ಲಾನ್ ಅಖಾಡಕ್ಕೆ ಶ್ರೀರಾಮುಲು: ಬಿಜೆಪಿ ಹೈಕಮಾಂಡ್ ನಿಂದ ತುರ್ತು ಬುಲಾವ್ ಯಾಕೆ ಗೊತ್ತಾ?

2019 ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಹೈಕಮಾಂಡ್ ಪಕ್ಷ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ ಅವರು ಚುನಾವಣಾ ರಣ ಕಹಳೆಯನ್ನು ಮತ್ತೊಮ್ಮೆ ಊದಿ ವಾಪಸಾಗಿದ್ದರು. ತದನಂತರ ಈಗ ಅಖಾಡಕ್ಕೆ ಬಳ್ಳಾರಿಯ ಶ್ರೀರಾಮುಲು ರವರು ಇಳಿದಿದ್ದಾರೆ. ಶ್ರೀರಾಮುಲು ರವರಿಗೆ ತುರ್ತು ಬುಲಾವು ನೀಡಿರುವ ಪಕ್ಷದ ಹೈಕಮಾಂಡ್ ಬಹು ದೊಡ್ಡ ಜವಾಬ್ದಾರಿಯನ್ನು ಶ್ರೀರಾಮುಲುರವರ ಹೆಗಲಿಗೇರಿಸಿದೆ.

ಶ್ರೀರಾಮುಲುರವರ ಬೆಂಬಲಕ್ಕೆ ನಿಂತಿರುವ ಬಿಎಸ್ವೈ ರವರು ಶ್ರೀರಾಮುಲು ರವರಿಗೆ ಜವಾಬ್ದಾರಿ ನೀಡುವಂತೆ ಬಿಜೆಪಿ ಪಕ್ಷದ ಹೈಕಮಾಂಡ್ ಬಳಿ ಮನವಿ ಮಾಡಿದ್ದರು. ಶ್ರೀಯುತ ಯಡಿಯೂರಪ್ಪನವರ ಮಾತನ್ನು ಬಿಜೆಪಿ ಪಕ್ಷದ ಹೈಕಮಾಂಡ್ ಸ್ವೀಕರಿಸಿದ್ದು ಬಹು ದೊಡ್ಡ ಜವಾಬ್ದಾರಿಯನ್ನು ಶ್ರೀರಾಮುಲುರವರ ಹೆಗಲಿಗೇರಿಸಿದೆ. ಅಷ್ಟಕ್ಕೂ ಆ ಜವಾಬ್ದಾರಿ ಯಾವುದು ಗೊತ್ತಾ??

ಮುಂದಿನ ಲೋಕಸಭಾ ಚುನಾವಣೆಯ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಕ್ಷೇತ್ರಗಳ ಉಸ್ತುವಾರಿಯನ್ನು ಶ್ರೀರಾಮುಲುರವರ ಹೆಗಲಿಕೆ ಬಿಎಸ್ವೈ ರವರ ಮನವಿಯಂತೆ ಬಿಜೆಪಿ ಪಕ್ಷದ ಹೈಕಮಾಂಡ್ ಹೆಗಲಿಗೇರಿಸಿದೆ. ಸಂಪೂರ್ಣ ದಲಿತರ ಮತಗಳನ್ನು ಸೆಳೆಯುವ ಯೋಜನೆಯನ್ನು ರೂಪಿಸಿರುವ ಬಿಜೆಪಿ ಪಕ್ಷದ ಹೈಕಮಾಂಡ್ ಎಲ್ಲಾ ಮೀಸಲಾತಿ ಕ್ಷೇತ್ರಗಳನ್ನು ಶ್ರೀರಾಮುಲುರವರ ಕೈಗೆ ನೀಡಿದೆ.

ಕರ್ನಾಟಕದಲ್ಲಿ ಮೀಸಲು ಕ್ಷೇತ್ರಗಳಾಗಿರುವ ವಿಜಯಪುರ, ಬಳ್ಳಾರಿ, ಕಲ್ಬುರ್ಗಿ, ರಾಯಚೂರು, ಚಿತ್ರದುರ್ಗ, ಚಾಮರಾಜನಗರ ಹಾಗೂ ಕೋಲಾರ ಕ್ಷೇತ್ರಗಳನ್ನು ಶ್ರೀರಾಮುಲುರವರ ಹೆಗಲಿಗೆ ಏರಿಸಿರುವ ಹೈಕಮಾಂಡ್ ಕನಿಷ್ಠ ಐದು ಕ್ಷೇತ್ರಗಳನ್ನು ಗೆಲ್ಲಿಸುವಂತೆ ಆದೇಶಿಸಿದೆ. ಒಂದು ವೇಳೆ ಶ್ರೀರಾಮುಲು ರವರು 5 ಕ್ಷೇತ್ರಗಳನ್ನು ಗೆಲ್ಲಿಸಿದಲ್ಲಿ ಖಂಡಿತ ಬಿಜೆಪಿ ಪಕ್ಷದಲ್ಲಿ ಶ್ರೀರಾಮುಲುರವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಲಿದೆ. ಇನ್ನು ಶ್ರೀರಾಮುಲುರವರ ಈ ಕಾರ್ಯಕ್ಕೆ ಗೋವಿಂದ ಕಾರಜೋಳ ಹಾಗೂ ರಮೇಶ್ ಜಿಗಜಿನಗಿ ರವರು ಜೊತೆಯಾಗಲು ಇದ್ದಾರೆ. ಬಿಎಸ್ವೈ ರವರು ಈ ಆದೇಶವನ್ನು ಹೊರಡಿಸಿದ ಮರುಕ್ಷಣ ಶ್ರೀರಾಮುಲು ರವರು ಅಖಾಡಕ್ಕೆ ಇಳಿದು ಎಲ್ಲಾ ಕ್ಷೇತ್ರಗಳ ಸುತ್ತಾಟ ಆರಂಭಿಸಿದ್ದಾರೆ.