ಪ್ರತಾಪ್ ಸಿಂಹ ಬಂಧನಕ್ಕೆ ಜಾಮೀನು ರಹಿತ ವಾರೆಂಟ್: ಯಾಕೆ ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಪ್ರತಾಪ್ ಸಿಂಹ ಹಾಗೂ ಪ್ರಕಾಶ್ ರೈ ಅವರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಾಗ್ವಾದ ನಡೆಯುತ್ತವೆ. ಪ್ರತಿಬಾರಿಯೂ ಪ್ರಕಾಶ್ ರವರ ಹೇಳಿಕೆಗೆ ತಕ್ಕ ತಿರುಗೇಟು ನೀಡುವ ಪ್ರತಾಪ್ ಸಿಂಹರವರು ಪ್ರಕಾಶ್ ರೈ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದರು.

ಪತ್ರಕರ್ತೆ ಗೌರಿ ಹತ್ಯೆಯ ಸಂಬಂಧ ಪ್ರಕಾಶ್ ರೈ ಹಾಗೂ ಪ್ರತಾಪ್ ಸಿಂಹ ರವರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ತಾರಕಕ್ಕೆ ಏರಿತ್ತು. ಈ ನಡುವೆ ನೇರವಾಗಿ ಗೌರಿ ಹತ್ಯೆಯ ವಿಚಾರವಾಗಿ ಪ್ರಕಾಶ್ ರೈ ರವರು ಪ್ರಧಾನಿಯನ್ನು ಟೀಕಿಸಿದರು. ಅರ್ಥವೇ ಇಲ್ಲದ ಈ ಮಾತನ್ನು ಕೇಳಿಸಿಕೊಂಡ ಪ್ರತಾಪ್ ಸಿಂಹರವರು ಟ್ವಿಟರ್ ಮೂಲಕ ತಕ್ಕ ತಿರುಗೇಟು ನೀಡಿದರು.

ಇದರಿಂದ ಕೆರಳಿದ ಪ್ರಕಾಶ್ ರೈ ರವರು ಪ್ರತಾಪ್ ಸಿಂಹ ರವರ  ಮೇಲೆ  ಪ್ರಕಾಶ್ ರೈ ಅವರ ಬೆಲೆಗೆ ತಕ್ಕಂತೆ ಕೇವಲ ಒಂದು ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆಗೆ ಪ್ರತಾಪ್ ಸಿಂಹರವರು ಕಾರಣಾಂತಗಳಿಂದ ಹಾಜರಾಗಲು ಸಾಧ್ಯವಾಗಿರಲಿಲ್ಲ ಇದನ್ನೇ ಮುಂದಿಟ್ಟುಕೊಂಡು ಈಗ ಪ್ರತಾಪ್ ಸಿಂಹ ರವರ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.