ಬೃಹತ್ ಘೋಷಣೆ, ಉಗ್ರರ ಮೇಲೆ ಕೊನೆಯ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧವಾದ ಕೇಂದ್ರ ಸರ್ಕಾರ

ಬೃಹತ್ ಘೋಷಣೆ, ಉಗ್ರರ ಮೇಲೆ ಕೊನೆಯ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧವಾದ ಕೇಂದ್ರ ಸರ್ಕಾರ

ಪುಲ್ವಾಮಾ ದಾಳಿಯ ನಂತರ ಜಮ್ಮು ಹಾಗೂ ಕಾಶ್ಮೀರ ದ ಚಿತ್ರಣವೇ ಬದಲಾಗಿ ಬಿಟ್ಟಿದೆ. ಪಾಕಿಸ್ತಾನದ ಗಡಿಯಾಚೆ ಅಡಗಿರುವ ಉಗ್ರರ ನ್ನು ಹೊಡೆದುರುಳಿಸುವುದು ಎಷ್ಟು ಮುಖ್ಯವೋ ಅದೇ ರೀತಿ ಭಾರತದ ಒಳಗೆ ಜಮ್ಮು-ಕಾಶ್ಮೀರದ ನಗರ ಪ್ರದೇಶಗಳಲ್ಲಿ ಅಡಗಿರುವ ಉಗ್ರರ ನ್ನು ಹೊಡೆದುರುಳಿಸುವುದು ಮುಖ್ಯ ಎಂಬುದು ತಿಳಿದುಬಂದಿದೆ. ಪ್ರತ್ಯೇಕವಾದಿಗಳ ಮೇಲೆ ಕಠಿಣ ಕ್ರಮ ಹೀಗಾಗಲೇ ತೆಗೆದುಕೊಲಾಗುತ್ತಿದೆ, ರಕ್ಷಣೆ ಕೂಡ ವಾಪಸ್ಸು ಪಡೆದಿರುವ ಕೇಂದ್ರ ಸರ್ಕಾರ, ಕೆಲವರನ್ನು ಬಂಧಿಸಿ ದೇಶ ದ್ರೋಹ ಯಾರೇ ಮಾಡಿದರೂ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.

ಭಾರತೀಯ ಸೇನೆಗೆ ಹಿಂದೆಂದೂ ಕಾಣದಂತಹ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿರುವ ಕೇಂದ್ರ ಸರ್ಕಾರವು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿ ಉಗ್ರರ ದಮನಕ್ಕೆ ನಾಂದಿ ಹಾಡಿದೆ. ಉಗ್ರರ ದಮನ ಮಾಡಲು ಹೋದಾಗ ಸಾರ್ವಜನಿಕರು ಅಡ್ಡ ಬರುತ್ತಿರುವ ಕಾರಣ ಕಲ್ಲು ತೂರಾಟ ಗಳು ನಡೆಯುತ್ತಿವೆ, ಇದು ಸೇನೆಯ ಕೈಯನ್ನು ಕಟ್ಟಿ ಹಾಕುತಿತ್ತು ಆದರೆ ಕಲ್ಲು ತೂರಾಟಗಾರರ ಮೇಲೂ ಸಹ ಯಾವುದೇ ನಿರ್ದಾಕ್ಷಣ್ಯ ಇಲ್ಲದೆ ಗುಂಡಿಕ್ಕಿ ಕೊಲ್ಲಿ ಎಂದು ಸಹ ಆದೇಶ ನೀಡಲಾಗಿದೆ.

ಇನ್ನೂ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ದಾಳಿ ನಡೆದ ಕೆಲವೇ ಕೆಲವು ದಿನಗಳಲ್ಲಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರವು ಉಗ್ರರ ದಮನದ ಶಪಥ ಮಾಡಿದೆ. ಪಾಕಿಸ್ತಾನದ ಮೇಲೆ ಹಲವಾರು ಅಸ್ತ್ರಗಳನ್ನು ಪ್ರಯೋಗಿಸಿ ಪಾಕಿಸ್ತಾನದ ಅಂತ್ಯಕ್ಕೆ ನಾಂದಿ ಹಾಡಿರುವ ಕೇಂದ್ರ ಸರ್ಕಾರವು ತನ್ನ ಬಳಿ ಇರುವ ಕೊನೆಯ ಬ್ರಹ್ಮಾಸ್ತ್ರವನ್ನು ಜಮ್ಮು ಹಾಗೂ ಕಾಶ್ಮೀರ ದಲ್ಲಿ ಅಡಗಿರುವ ಉಗ್ರರ ಮೇಲೆ ಪ್ರಯೋಗಿಸಲು ಸಿದ್ಧವಾಗಿದೆ.

ಈಗಾಗಲೇ ಈಗಾಗಲೇ ಪಾಕಿಸ್ತಾನ ದೇಶವು ಬಿಕರಿಯಾಗಿದೆ, ಭಾರತ ಸೇನೆಯ ತಾಕತ್ತು ಕಂಡು ಗಡಗಡ ನಡುಗುತ್ತಿರುವ ಪಾಕಿಸ್ತಾನವು ಯುದ್ಧಕ್ಕೆ ಸಜ್ಜಾಗಿ ಯೋಜನೆ ರೂಪಿಸಿಕೊಂಡು ಗಡಿಯಲ್ಲಿ ತನ್ನ ದೇಶವನ್ನು ಭಾರತ ಸೇನೆಯ ದಾಳಿಯಿಂದ ರಕ್ಷಿಸಿಕೊಳ್ಳುವ ಹುಚ್ಚು ಕನಸು ಕಾಣುತ್ತಿದೆ. ಆದರೆ ಪಾಕಿಸ್ತಾನ ದೇಶಕ್ಕೂ ಸಹ ಭಾರತೀಯ ಸೇನೆಯ ತಾಕತ್ತು ತಿಳಿದಿದ್ದು ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ಏಕಾಏಕಿ ದಾಳಿ ಮಾಡಿದಲ್ಲಿ ಪಾಕಿಸ್ತಾನದ ಸರ್ವನಾಶ ಕಟ್ಟಿಟ್ಟ ಬುತ್ತಿ.

ಈಗಾಗಲೇ ಯುದ್ಧದ ಸಾಧ್ಯತೆಗಳು ಹೆಚ್ಚಾಗಿ ರುವ ಕಾರಣ ಪಾಕಿಸ್ತಾನಕ್ಕೆ ತನ್ನ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಆದರೆ ಈ ಎಲ್ಲಾ ವಿದ್ಯಮಾನಗಳ ನಡುವೆ ಒಂದು ವೇಳೆ ಭಾರತ ಯುದ್ಧ ಘೋಷಿಸಿದಲ್ಲಿ, ಉಗ್ರರು ಸಹ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬ ಮಾಹಿತಿಯೂ ಸಹ ಎಲ್ಲರಿಗೂ ತಿಳಿದಿದೆ. ಗಡಿಯಾಚೆ ಯಿಂದ ಬರುವ ಉಗ್ರರನ್ನು ಬಹಳ ಸುಲಭವಾಗಿ ಭಾರತೀಯ ಸೇನೆಯು ದಮನ ಮಾಡಲಿದೆ ಎಂಬುದು ಸತ್ಯ.

ಆದರೆ ಬೆನ್ನ ಹಿಂದೆ ಸೈನಿಕರು ದಾಳಿ ಮಾಡುತ್ತಿರುವಾಗ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಅಡಗಿ ಕುಳಿತಿರುವ ಉಗ್ರರು ಹಾಗೂ ಕೆಲವು ಪ್ರತ್ಯೇಕವಾದಿಗಳು ಸೇನೆಯ ಮೇಲೆ ಯುದ್ಧದ ಸಂದರ್ಭದಲ್ಲಿ ಮುಗಿಬೀಳುವುದು ಅಷ್ಟೇ ಸತ್ಯ. ಆದ ಕಾರಣದಿಂದ ಇಡೀ ದೇಶವೇ ಕೇಂದ್ರ ಸರ್ಕಾರದ ಮೇಲೆ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡ ಹೇರಿತ್ತು ಆ ಐತಿಹಾಸಿಕ ನಿರ್ಧಾರವೇ ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ವಾಪಾಸು ಪಡೆಯುವುದು. (37A /article 370)

ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರವು, ಭಾರತೀಯ ಸಂವಿಧಾನದ ಪ್ರಕಾರ ಮೊದಲ ಹೆಜ್ಜೆಯನ್ನು ಮುಂದೆ ಇತ್ತು ಸುಪ್ರೀಂಕೋರ್ಟ್ನ ಕದ ತಟ್ಟಿದೆ. ಸುಪ್ರೀಂಕೋರ್ಟ್ನ ತೀರ್ಪಿಗಾಗಿ ಕಾಯುತ್ತಿರುವ ಕೇಂದ್ರ ಸರ್ಕಾರವು ವಿಶೇಷ ಸ್ಥಾನಮಾನವನ್ನು ಕಿತ್ತೊಗೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.ಸುಪ್ರೀಂ ಕೋರ್ಟ್ ನ ಬಳಿ ತನ್ನ ಸ್ಪಷ್ಟ ನಿಲುವನ್ನು ಕೇಂದ್ರ ಸರ್ಕಾರವು ಮುಂದಿಟ್ಟಿರುವ ಕಾರಣ ತೀರ್ಪು ವಿರುದ್ಧ ಬಂದರೂ ಸಹ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಈ ತೀರ್ಪಿಗೆ ನಿಮ್ಮ ಬೆಂಬವಿದ್ದರೆ ಶೇರ್ ಮಾಡಿ. ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.ಗಡಿಯ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜ್ ಅನ್ನು ಲೈಕ್ ಮಾಡಿ ಬೆಂಬಲಿಸಿ