ವಿಶ್ವ ಸಂಸ್ಥೆಯಲ್ಲಿ ಬಾರಿ ದಿಗ್ವಿಜಯ, ಚೀನಾಕ್ಕೆ ಬಾರಿ ಮುಖಭಂಗ, ಒಬ್ಬಂಟಿಯಾದ ಪಾಕಿಸ್ತಾನ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಾಕಿಸ್ತಾನದಲ್ಲಿ ಉಗ್ರರ ಪೋಷಣೆ ನಡೆಯುತ್ತಿದೆ. ವಿಶ್ವಕ್ಕೆ ಈ ವಿಷಯ ತಿಳಿದಿದೆ, ಆದರೆ ಬೆನ್ನ ಹಿಂದೆ ಪಾಕಿಸ್ತಾನ ದೇಶಕ್ಕೆ ಉಗ್ರರನ್ನು ಪೋಷಿಸಲು ಚೀನಾ ದೇಶವು ಬೆಂಬಲ ನೀಡುತ್ತಿದೆ. ಹಣಕಾಸು ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂಬ ಮಾತು ಹಲವಾರು ವರ್ಷಗಳಿಂದ ಕೇಳಿ ಬಂದಿದೆ ಇದಕ್ಕೆ ಹಲವಾರು ಬಾರಿ ಸಾಕ್ಷಗಳು ಸಹ ನಮಗೆ ಸಿಕ್ಕಿದೆ.

ಪ್ರತಿ ಬಾರಿಗೆ ವಿಶ್ವ ಸಂಸ್ಥೆಯ ಮಟ್ಟದಲ್ಲಿ  ಪಾಕಿಸ್ತಾನದ ವಿರುದ್ಧ ಧ್ವನಿ ಎತ್ತಿದಾಗ ಭಾರತದ ಬೆಂಬಲಕ್ಕೆ ವಿಶ್ವ ಸಂಸ್ಥೆಯ ಕಾಯಂ ಸದಸ್ಯ ರಾಷ್ಟ್ರಗಳು ನಿಲ್ಲುತ್ತಿದ್ದವು. ಆದರೆ ಚೀನಾ ದೇಶವು ಮಾತ್ರ ಪ್ರತಿ ಬಾರಿಯು ಪಾಕಿಸ್ತಾನದ ಬೆಂಬಲಕ್ಕೆ ನಿಂತು, ಪಾಕಿಸ್ತಾನವನ್ನು ಅಪಾಯದಿಂದ ತಪ್ಪಿಸುತಿತ್ತು ಆದರೆ ಈ ಬಾರಿ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಜಯ ದೊರಕಿದ್ದು, ಚೀನಾ ದೇಶಕ್ಕೆ ಭಾರಿ ಮುಖಭಂಗ ಉಂಟಾಗಿದೆ. ಈ ಕೂಡಲೇ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ಪ್ರತಿ ಬಾರಿಯೂ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಅಂತರಾಷ್ಟ್ರೀಯ ಕಾನೂನುನಲ್ಲಿ ಅಮೆರಿಕ, ಫ್ರಾನ್ಸ್, ರಷ್ಯಾ, ಬ್ರಿಟನ್ ದೇಶಗಳು ಭಾರತದ ಪರ ನಿಲ್ಲುತ್ತಿದ್ದರು. ಆದರೆ ಚೀನಾ ದೇಶವು ಇದಕ್ಕೆ ಅಡ್ಡಗಾಲು ಹಾಕಿ ಪಾಕಿಸ್ತಾನವನ್ನು ಕಾಪಾಡುತ್ತಿತ್ತು. ಆದರೆ ನಿನ್ನೆ ನಡೆದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ, ಚೀನಾ ದೇಶಕ್ಕೆ ವಿಶ್ವಸಂಸ್ಥೆ ಚೀಮಾರಿ ಹಾಕಿದ್ದು ಇಷ್ಟು ದಿವಸ ಪಾಕಿಸ್ತಾನವನ್ನು ಬೆಂಬಲಿಸಿದ ಕಾರಣವೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪುಲ್ವಾಮಾ ದಾಳಿಯನ್ನು ಖಂಡಿಸಲು ತಡವಾಯಿತು ಎಂದು ತಿಳಿದು ಬಂದಿದೆ .ವಿಶ್ವಸಂಸ್ಥೆಯ ಖಾಯಂ ಸಂಸ್ಥೆಗಳಾಗಿರುವ ಯುಎಸ್, ಚೀನಾ, ರಷ್ಯಾ, ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳಿಗೆ ಭಯೋತ್ಪಾದನೆ ಮಟ್ಟ ಹಾಕಲು ಭಾರತಕ್ಕೆ ಎಲ್ಲ ರೀತಿಯ ಸಹಕಾರ ನೀಡುವಂತೆ ಸೂಚನೆ ನೀಡಿದೆ.

ಪಾಕಿಸ್ತಾನವನ್ನು ಬೆಂಬಲಿಸಿ ನಿಂತಿದ್ದ ಚೀನಾ ದೇಶವೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಷ್ಟು ತಡವಾಗಿ ಘಟನೆಯನ್ನು ಖಂಡಿಸಿ ಖಂಡನಾ ನಿರ್ಣಯವನ್ನು ಕೈಗೊಳ್ಳುವುದಕ್ಕೆ ಕಾರಣ ಎಂಬುದು ಸಹ ತಿಳಿದು ಬಂದಿದೆ. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಹೊಂದಿರುವ ಇತರೇ ರಾಷ್ಟ್ರಗಳ ಒತ್ತಡ ತೀವ್ರಗೊಂಡಾಗ ಚೀನಾ ದೇಶವು ಬೇರೆ ವಿಧಿಯಿಲ್ಲದೆ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಇರುವ ಬೆಂಬಲವನ್ನು ನೋಡಿ ಖಂಡನಾ ನಿರ್ಣಯಕ್ಕೆ ಸಮ್ಮತಿ ಸೂಚಿಸಿದೆ. ಇನ್ನೂ ಖಂಡನಾ ನಿರ್ಣಯದಲ್ಲಿ ಎಲ್ಲ ದೇಶಗಳು ಅಂತಾರಾಷ್ಟ್ರೀಯ ಕಾನೂನಿನ ಮಿತಿಯೊಳಗೆ ಭಾರತ ಸರ್ಕಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದೆ.

Post Author: Ravi Yadav