ಐತಿಹಾಸಿಕ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ: ಇನ್ನು ಮುಂದೆ ಸೇನೆ ಮುಟ್ಟಲೂ ಸಹ ಸಾಧ್ಯವಿಲ್ಲ

ಐತಿಹಾಸಿಕ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ: ಇನ್ನು ಮುಂದೆ ಸೇನೆ ಮುಟ್ಟಲೂ ಸಹ ಸಾಧ್ಯವಿಲ್ಲ

ಇಡೀ ದೇಶವೇ ಇಂದು ಪುಲ್ವಾಮಾ ದಾಳಿಯ ವಿಷಯದಲ್ಲಿ ಒಗ್ಗಟ್ಟಾಗಿ ನಿಂತಿದೆ. 40ಕ್ಕೂ ಹೆಚ್ಚು ಯೋಧರನ್ನು ಹುತಾತ್ಮರ ನ್ನಾಗಿ ಮಾಡಿದ ಆ ದಾಳಿಯು ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಕಿಚ್ಚನ್ನು ಹೆಚ್ಚಿಸಿದೆ. ಬರೋಬ್ಬರಿ ಎರಡು ಸಾವಿರಕ್ಕೂ ಹೆಚ್ಚು ಸೈನಿಕರು ದೇಶ-ರಕ್ಷಣೆಯ ಕೆಲಸದಲ್ಲಿ ಮತ್ತೊಮ್ಮೆ ತಮ್ಮನ್ನು ಮುಡಿಪಾಗಿಸಿಕೊಳ್ಳಲು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣ ಮಾಡುವಾಗ ಆತ್ಮಾಹುತಿ ದಾಳಿ ನಡೆದಿತ್ತು.

ಎರಡು ಸಾವಿರದ ಕ್ಕೂ ಹೆಚ್ಚು ಸೈನಿಕರು ಸೇನಾ ವಾಹನಗಳಲ್ಲಿ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಈ ದಾಳಿಗೆ ಇಡೀ ವಿಶ್ವದಲ್ಲಿ ವಿರೋಧಗಳು ಎದುರಾಗಿದ್ದವು. ಭಾರತೀಯ ಸೇನೆಯ ಕಾನೂನಿನ ಪ್ರಕಾರ ಪ್ರತಿ ಕೆಲವು ತಿಂಗಳುಗಳ ನಂತರ ಸೈನಿಕರು ಮತ್ತೊಂದು ಪ್ರದೇಶಕ್ಕೆ ವರ್ಗಾವಣೆ ಗೊಳ್ಳುತ್ತಾರೆ ಇದೇ ಕಾರಣದಿಂದ ಭಾರತೀಯ ಸೈನಿಕರು ಮತ್ತೊಂದು ಪ್ರದೇಶಕ್ಕೆ ವರ್ಗಾವಣೆ ಮಾಡುತ್ತಿರುವ ಸಮಯದಲ್ಲಿ ಈ ದಾಳಿ ನಡೆದಿತ್ತು.

ಈ ರೀತಿಯ ದಾಳಿ ಮುಂದೆಂದೂ ನಡೆಯಬಾರದು ಎಂದು ಭಾರತೀಯ ಸೈನಿಕರಿಗೆ ಮತ್ತಷ್ಟು ಸವಲತ್ತುಗಳನ್ನು ನೀಡುವ ಮೂಲಕ ಭಾರತದ ಇತಿಹಾಸದಲ್ಲಿ ಮತ್ತೊಂದು ಐತಿಹಾಸಿಕ ದಿನವನ್ನಾಗಿ ಮಾರ್ಪಡಿಸಲು  ಕೇಂದ್ರ ಸರ್ಕಾರ ಹೊರಟಿದೆ, ಎಲ್ಲಾ ಗ್ರೇಡಿನ ಸೈನಿಕರು ಈ ಸೌಲಭ್ಯವನ್ನು ಪಡೆಯುತ್ತಿರುವುದು ಮತ್ತಷ್ಟು ವಿಶೇಷವೆನಿಸಿದೆ. ಅಷ್ಟಕ್ಕೂ ಆ ನಿರ್ಧಾರ ವಾದರೂ ಏನು ಗೊತ್ತಾ??

ಸೈನಿಕರು ಜಮ್ಮು ಮತ್ತು ಕಾಶ್ಮೀರದ ರಸ್ತೆಯಲ್ಲಿ ಹಾದು ಹೋಗುವ ಮೂಲಕ ಹಲವಾರು ಬಾರಿ ಕಲ್ಲು ತೂರಾಟ ಗಳು ನಡೆಯುತ್ತವೆ. ಆದ ಕಾರಣದಿಂದ ಯಾವ ಸೈನಿಕರು ಕಾರಣವಿಲ್ಲದೆ ಬಸ್ಸುಗಳಿಂದ ಕೆಳಗಿಳಿಯಲು ಹೋಗುವುದಿಲ್ಲ. ಇಷ್ಟು ಸಾಲದು ಎಂಬಂತೆ ಮೊನ್ನೆ ಪುಲ್ವಾಮಾ ಪ್ರದೇಶದಲ್ಲಿ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿದ್ದ ಸಮಯದಲ್ಲಿ ಆತ್ಮಾಹುತಿ ದಾಳಿ ನಡೆದಿತ್ತು.  ಆದ ಕಾರಣ ನರೇಂದ್ರ ಮೋದಿಯವರ ಸರ್ಕಾರ ಇನ್ನು ಮುಂದೆ ಪ್ರತಿಯೊಬ್ಬ ಸೈನಿಕನೂ ರಸ್ತೆಯಲ್ಲಿ ಪ್ರಯಾಣ ಮಾಡುವುದನ್ನು ನಿಷೇಧಿಸಿದೆ ಅಂದರೆ ಇನ್ನು ಮುಂದೆ ಪ್ರತಿಯೊಬ್ಬ ಯೋಧನು ಸಹ ವಿಮಾನದಲ್ಲಿ(AirLift) ಓಡಾಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಕಲ್ಪಿಸಲಿದೆ ಹಾಗೂ ಈ ಮೂಲಕ ಸೇನೆಯ ಮೇಲೆ ನಡೆಯುವ ಅಪ್ರಚೋದಿತ ದಾಳಿ ಗಳನ್ನು ತಡೆಯುವ ಪ್ರಯತ್ನ ಮಾಡಿದೆ.