ಬೃಹತ್ ನಿರ್ಣಯ: ಪಾಕಿಸ್ತಾನದ ಅಂತ್ಯಕ್ಕೆ ನಾಂದಿ ಹಾಡಿದ ಕೇಂದ್ರ ಸರ್ಕಾರ

ಬೃಹತ್ ನಿರ್ಣಯ: ಪಾಕಿಸ್ತಾನದ ಅಂತ್ಯಕ್ಕೆ ನಾಂದಿ ಹಾಡಿದ ಕೇಂದ್ರ ಸರ್ಕಾರ

ಪುಲ್ವಾಮ ದಾಳಿಯನ್ನು ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರು ನಡೆಸಿದ್ದಾರೆ ಎಂಬುದಕ್ಕೆ ಎಲ್ಲಾ ಪುರಾವೆಗಳು ಇದ್ದರು, ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನವು ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಬದಲಾಗಿ ಭಾರತದ ವಿರುದ್ಧ ಸುಖಾಸುಮ್ಮನೆ ಗುಟುರು ಹಾಕುತ್ತಿದೆ. ಭಾರತ ದೇಶ ಮನಸ್ಸು ಮಾಡಿದರೆ ಕೇವಲ ಒಂದು ದಿನದಲ್ಲಿ ಪಾಕಿಸ್ತಾನವು ಇತಿಹಾಸದ ಪುಟಗಳನ್ನು ಸೇರಲಿದೆ, ಹೌದು ಭಾರತೀಯ ಸೇನೆಯು ಸಂಪೂರ್ಣವಾಗಿ ಪಾಕಿಸ್ತಾನದ ಮೇಲೆ ಮುಗಿಬಿದ್ದಲ್ಲಿ ಸೇನೆಗೆ ಕೇವಲ ಒಂದು ದಿನ ಸಾಕು ಇಡೀ ಪಾಕಿಸ್ತಾನವನ್ನು ಉಡೀಸ್ ಮಾಡಲು.

ಆದರೆ ಅದ್ಯಾಕೋ ನಮ್ಮ ಭಾರತೀಯ ಸೇನೆ ಇನ್ನೂ ಅದರ ಬಗ್ಗೆ ಮನಸ್ಸು ಮಾಡಿಲ್ಲ. ಆ ವಿಷಯವನ್ನು ಪಕ್ಕಕ್ಕೆ ಇಟ್ಟರೆ ನರೇಂದ್ರ ಮೋದಿ ಅವರು ದಾಳಿ ನಡೆದ ಮರುಕ್ಷಣದಿಂದ ಪಾಕಿಸ್ತಾನದ ವಿರುದ್ಧ ಸಮರ ಸಾರಿದ್ದಾರೆ ಒಂದಲ್ಲ ಒಂದು ದಿಟ್ಟ ನಿರ್ಧಾರಗಳಿಂದ ಭಾರತದ ಇತಿಹಾಸದಲ್ಲಿ ಕೇಳಿರದ ನಿರ್ಧಾರಗಳನ್ನು ತೆಗೆದುಕೊಂಡು ಪಾಕಿಸ್ತಾನವನ್ನು ಅಂತ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಇಡೀ ವಿಶ್ವದ ಮುಂದೆ ಪಾಕಿಸ್ತಾನ ದೇಶವನ್ನು ಬೆತ್ತಲು ಮಾಡಿದ ನರೇಂದ್ರ ಮೋದಿ ಅವರು ಇಡೀ ವಿಶ್ವದ ಬೆಂಬಲವನ್ನು ಭಾರತ ಪಡೆಯುವಂತೆ ಮಾಡಿದರು. ತದನಂತರ ಪಾಕಿಸ್ತಾನ ದೇಶದಿಂದ ಭಾರತಕ್ಕೆ ರಫ್ತಾಗುವ ಎಲ್ಲಾ ವಸ್ತುಗಳ ಮೇಲೆ ಶೇಕಡ 200ರಷ್ಟು ಆಮದು ಸುಂಕ ಹೆಚ್ಚಿಸಿ ಪಾಕಿಸ್ತಾನಕ್ಕೆ ಮೊದಲ ಶಾಕ್ ನೀಡಿದ್ದರು. ಅದೆಷ್ಟೋ ಸರಕು ವಾಹನಗಳು ಭಾರತ ಹಾಗೂ ಪಾಕಿಸ್ತಾನ ಗಡಿಯಿಂದ ಈಗಾಗಲೇ ವಾಪಸ್ ತೆರಳಿ ವೆ.

ಈ ವಿಷಯದ ಬೆನ್ನಲ್ಲೇ ಭಾರತೀಯ ಸೇನೆಗೆ ಸ್ವತಂತ್ರ ನೀಡಿ ಪಾಕಿಸ್ತಾನದ ನಿದ್ದೆಗೆಡಿಸಿರುವ ನರೇಂದ್ರ ಮೋದಿ ಅವರು ಈಗ ಮತ್ತೊಂದು ದಿಟ್ಟ ನಿರ್ಧಾರದ ಮೂಲಕ ಪಾಕಿಸ್ತಾನವನ್ನು ಯುದ್ಧ ಮಾಡುವುದಕ್ಕೂ ಮುನ್ನವೇ ಸಂಪೂರ್ಣವಾಗಿ ನಾಶ ಮಾಡಲು ಬ್ರಹ್ಮಾಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಅಷ್ಟಕ್ಕೂ ನರೇಂದ್ರ ಮೋದಿ ರವರ ನಿರ್ಧಾರ ವಾದರೂ ಏನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ 1961 ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಿಂಧು ನದಿ ಒಪ್ಪಂದ ನಡೆದಿದೆ. ಈ ಒಪ್ಪಂದದಿಂದ ಭಾರತಕ್ಕೆ ಹೆಚ್ಚಾಗಿ ಲಾಭವೇನೂ ಇಲ್ಲ. ಆದರೆ ಪಾಕಿಸ್ತಾನಕ್ಕೆ ಈ ಒಪ್ಪಂದ ತುಂಬಾನೇ ಅವಶ್ಯಕ. ಯಾಕೆಂದರೆ ಸಿಂಧೂ ನದಿ ನೀರನ್ನು ನೆಚ್ಚಿಕೊಂಡು ಪಾಕಿಸ್ತಾನದ ಲಕ್ಷಾಂತರ ರೈತರು ಕೃಷಿ ನಡೆಸುತ್ತಿದ್ದಾರೆ, ಇನ್ನೂ ಇದೇ ನೀರನ್ನು ನಂಬಿಕೊಂಡು ಕೈಗಾರಿಕೆಗಳು ಸಹ ನಿರ್ಮಾಣವಾಗಿವೆ. ಅದರಲ್ಲಿ ಸಿಮೆಂಟ್ ಕಾರ್ಖಾನೆಗಳು ಪಾಕಿಸ್ತಾನದ ಅರ್ಥ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.

ಪಾಕಿಸ್ತಾನ ದೇಶವು ಎಷ್ಟರಮಟ್ಟಿಗೆ ಸಿಮೆಂಟ್ ಕಾರ್ಖಾನೆಗಳನ್ನು ನಂಬಿಕೊಂಡಿದೆ ಎಂದರೆ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸಿಮೆಂಟ್ ಅನ್ನು ಆಮದು ಮಾಡಿಕೊಳ್ಳುವ ಭಾರತ ದೇಶಕ್ಕೆ ಬಹುತೇಕ ಸಿಮೆಂಟ್ ಪಾಕಿಸ್ತಾನದಿಂದ ಬರುತ್ತಿದೆ ಒಂದು ವೇಳೆ ಈ ಒಪ್ಪಂದ ಮುರಿದು ಬಿದ್ದಲ್ಲಿ, ಕಾರ್ಖಾನೆಗಳು ಮುಚ್ಚಿ, ರೈತರು ಬೆಳೆಯನ್ನು ಬೆಳೆಯಲಾರದೆ, ಪಾಕಿಸ್ತಾನ ದೇಶವು ತುತ್ತು ಅನ್ನಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಲಿದೆ.

ಈ ಒಪ್ಪಂದದ ಪ್ರಕಾರ ಹಲವಾರು ಪಾಕಿಸ್ತಾನ ಜಿಲ್ಲೆಗಳಿಗೆ ಭಾರತವು ತನ್ನ ಉದಾರವಾದ ಮನಸ್ಸಿನಿಂದ ನೀರನ್ನು ಹರಿಸುತ್ತಾ ಬಂದಿದೆ. ಕೇವಲ ಶೇಕಡಾ ಇಪ್ಪತ್ತರಷ್ಟು ನೀರನ್ನು ಬಳಸಿಕೊಳ್ಳುವ ಭಾರತ ಉಳಿದ ನೀರನ್ನು ಪಾಕಿಸ್ತಾನಕ್ಕೆ ಹರಿಸುತ್ತದೆ ಅಲ್ಲಿನ ರೈತರು ಸಿಂಧೂ ನದಿಯ ನೀರನ್ನು ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇಷ್ಟೆಲ್ಲಾ ಅವಲಂಬಿತವಾಗಿರುವ ಸಿಂಧೂ ನದಿಯ ನೀರನ್ನು ಭಾರತವು ಪಾಕಿಸ್ತಾನಕ್ಕೆ ಹರಿಯುವುದನ್ನು ತಡೆಯಲು ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹೊರಟಿದೆ.

ಜವಹರಲಾಲ್ ನೆಹರೂರವರು ಮಾಡಿಕೊಂಡಿರುವ ಈ ಸಿಂಧೂ ನದಿ ಒಪ್ಪಂದವನ್ನು, ಮರು ಪರಿಶೀಲಿಸುವಂತೆ ಕೇಂದ್ರ ಸರ್ಕಾರದ ಮೇಲೆ ಮೊದಲಿನಿಂದಲೂ ಒತ್ತಡ ಹೆಚ್ಚಾಗಿತ್ತು ಇದರ ಬಗ್ಗೆ ಮಾತನಾಡಿರುವ ಜಲಸಂಪನ್ಮೂಲ ಸಚಿವರಾಗಿರುವ ನಿತಿನ್ ಗಡ್ಕರಿ ರವರು ಐತಿಹಾಸಿಕ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ಭಾರತದಲ್ಲಿ ಹುಟ್ಟಿ ಹರಿಯುವ ಸಿಂಧು ಸೇರಿದಂತೆ ಇನ್ನೂ ಮೂರು ನದಿಗಳ ನೀರನ್ನು ಯಾವುದೇ ಹೊರ ರಾಷ್ಟ್ರಕ್ಕೆ ಬಿಟ್ಟು ಕೊಡದೆ ಆ ನೀರನ್ನು ಯಮುನಾ ನದಿಗೆ ತಿರುಗಿಸುವ ಹೊಸ ಯೋಜನೆಯನ್ನು ಪ್ಲಾನ್ ಮಾಡಿದ್ದಾರೆ.

ಆದಷ್ಟು ಬೇಗ ಈ ಯೋಜನೆ ಮುಂದುವರೆದು ಸಿಂಧೂ ನದಿ ಒಪ್ಪಂದ ಪಾಕಿಸ್ತಾನದ ಜೊತೆ ಮುರಿದುಬಿದ್ದರೆ ಪಾಕಿಸ್ತಾನದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊರಟಿರುವ ನಿತಿನ್ ಗಡ್ಕರಿ ರವರು ಎಲ್ಲಾ ಮೂರು ನದಿಗಳ ನೀರನ್ನು ಭಾರತ ದೇಶವು ಬಳಸಿಕೊಂಡು ಯಮುನಾ ನದಿಯ ಪುನಶ್ಚೇತನ ಆದೇಶಿಸುವ ಸಾಧ್ಯತೆಗಳು ಹೆಚ್ಚಾಗಿವೆ.