ತನ್ನ ಕ್ಷೇತ್ರಕ್ಕೆ ಸಮಗ್ರ ನಾಯಕನ ಆಯ್ಕೆ ಕುರಿತು ಮೋದಿ ಗೆ ಪತ್ರ ಬರೆದ ಯುವಕ, ಪತ್ರ ವೈರಲ್- ಆಂಗ್ಲ ಭಾಷೆಯಿಂದ ಅನುವಾದ ಮಾಡಲಾಗಿದೆ

ಓದುಗರಿಗೆ ಸುಲಭವಾಗಲು ಆಂಗ್ಲ ಭಾಷೆಯಿಂದ ಅನುವಾದ ಮಾಡಲಾಗಿದೆ. 

ಕಾರ್ಯಕರ್ತರ ನಾಯಕ ಯಶಪಾಲ್ ಸುವರ್ಣ. ಆತನ ವ್ಯಕ್ತಿತ್ವವೇ ಅಂತಹುದು. ಅವರನ್ನು ದೂರದಿಂದ ನೋಡಿದರೆ ಗಂಭಿರ ಅನಿಸುವ ನೋಟ ,ಆದರೆ ಹತ್ತಿರದಿಂದ ಕಂಡವರಿಗೆ ಗೊತ್ತು ಆತನದು ಮಗುವಿನಂತ ಮುಗ್ದತೆಯ ಮನಸ್ಸು ಅಂತ. ದಿನದ ಯಾವುದೇ ಹೊತ್ತಿನಲ್ಲಿ ಕಾರ್ಯಕರ್ತರು ತೊಂದರೆಯಲ್ಲಿದ್ದಾರೆ, ಅವರ ನೋವಿಗೆ ದ್ವನಿಯಾಗಬೇಕು ಅಂದಾಗ ಸಮಾಯಾಸಮಯದ ಅರಿವಿಲ್ಲದೆ ಕಾರ್ಯಕರ್ತರ ಜೊತೆ ನಿಲ್ಲುವ ಇವರ ಗುಣ ಇವರನ್ನು ಕಾರ್ಯಕರ್ತರ ನಾಯಕನನ್ನಾಗಿ ಮಾಡಿದೆ.

ಹಿಂದುತ್ವದ ನೆಲೆಯಿಂದ ಬೆಳೆದು ಬಂದು ಉಡುಪಿಯಲ್ಲಿ ಭಜರಂಗದಳಕ್ಕೆ ಭದ್ರ ಬುನಾದಿ ಹಾಕಿ,ಹಿಂದುತ್ವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯುವಜನತೆಯ ಮನದಲ್ಲಿ ತನ್ನದೆ ಅದ ಸ್ಥಾನವನ್ನು ಪಡೆದಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲೆ ಹೆಸರು ಕೇಳಿಬಂದರೂ ಕೊನೆಗೆ ಪಕ್ಷ ಸೂಚಿಸಿದ ಅಭ್ಯರ್ಥಿಯ ಗೆಲುವಿಗೆ ಕಾರಣವಾದರು.
ವಿಧಾನಸಭಾ ಚುನಾವಣೆಯಲ್ಲಿಯೂ ಜೆಲ್ಲೆಯ ಎರಡು ಕ್ಷೇತ್ರದಿಂದ ಹೆಸರು ಮುಂಚೂಣಿಯಲ್ಲಿದ್ದರೂ ಕೊನೆಗೆ ವರಿಷ್ಠರು ಸೂಚಿಸಿದ ನಾಯಕರ ಪರವಾಗಿ ಪ್ರಚಾರಕ್ಕಿಳಿದು ಗೆಲುವಿನ ಪ್ರಮುಖ ಪಾತ್ರರಾದರು.


ರಾಜಕೀಯದಲ್ಲಿ ತನ್ನನ್ನೂ ತಾನು 15 ವರ್ಷದಿಂದ ಒಂದೇ ಪಕ್ಷವಾದ ಬಿಜೆಪಿಯಲ್ಲಿ ಗುರುತಿಸಿಕೊಂಡು ,ಕಳೆದ ಬಾರಿ ಪಕ್ಷದಿಂದ ಟಿಕೆಟ್ ವಂಚಿತರಾದಾಗ ಬೇರೆ ಪಕ್ಷದಿಂದ ಅಹ್ವಾನಗಳೂ ಬಂದಿದ್ದರೂ ಪಕ್ಷಕ್ಕೆ ಎಲ್ಲಿಯೂ ತನ್ನಿಂದ ಕೊರತೆಯಾಗದ ರೀತಿ ನೋಡಿಕೊಂಡು ಮಾತೃ ಪಕ್ಷವೇ ತಾಯಿ ಅನ್ನುತ್ತಾ ಬಂದಿರುತ್ತಾರೆ.

ಉಡುಪಿ ನಗರಸಭೆಯ ಅಜ್ಜರಕಾಡು ವಾರ್ಡ್ ನಿಂದ ಮೂರು ಬಾರಿ ಆಯ್ಕೆಯಾಗಿ ವಾರ್ಡ್ ನ ಸಮಗ್ರ ಅಭಿವೃದ್ಧಿಗೆ ಕಾರಣಿಕಾರ್ತರು. ಮೀನುಗಾರರ ಸಂಕಷ್ಟಕ್ಕೆ ಭಾಗಿಯಾಗಿ ರಾಜ್ಯದಿಂದ ರಾಷ್ಟ್ರದವರೆಗೆ ಧ್ವನಿಯಾಗಿ, ಇಡೀ ಮೀನುಗಾರರ ಸಮುದಾಯದ ಬಹುದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದರೆ ಅದರಲ್ಲಿ ಯಶ್ಪಾಲ್ ಸುವರ್ಣರ ಪಾತ್ರವು ಹಿರಿದು.

ಯಾವುದೇ ಸಮಯದಲ್ಲಿ ಕರೆ ಮಾಡಿದ ಕೂಡಲೇ ಸ್ಪಂದಿಸುವ ಬಹುದೊಡ್ಡ ಗುಣವೇ ಅಪಾರ ಯುವಕರನ್ನೂ ಸಂಪಾದಿಸಿದೆ. ದಿನಕ್ಕೆ ಹತ್ತಾರು ಕಾರ್ಯಕ್ರಮಗಳಿದ್ದರೂ ಅಹ್ವಾನಿತರಿಗೆ ಬೇಸರವಾಗಬರದೆಂದು,ಎಲ್ಲಾ ಕಾರ್ಯಕ್ರಮಕ್ಕೂ ಒಂದು ಕ್ಷಣ ಭೇಟಿಯಾಗುವ ಗುಣ ಜನತೆ ಮತ್ತು ಇವರ ಸಂಬಂಧವನ್ನೂ ಗಟ್ಟಿಗೊಳಿಸಿದೆ.
#ಯುವಕರಿಗಾಗಿ__ರಾತ್ರಿ_1ಘಂಟೆಯಾದರು #ಆಸ್ಪತ್ರೆಯಲ್ಲಿ_ನಿಂತದ್ದು_ಕಂಡಿದ್ದೆವೆ,# ಹೋರಾಟಗಾರರನ್ನು ಬಿಡಿಸಿಕೊಳ್ಳಲು ಪೊಲೀಸ್ ಠಾಣೆಗೆ ನಡುರಾತ್ರಿಯಲ್ಲಿ ಬಂದಿದ್ದನ್ನು ನೋಡಿದ್ದೇನೆ .

ಇಂತಹ ನಾಯಕರನ್ನೂ ಉಡುಪಿ-ಚಿಕ್ಕಮಗಳೂರು ಜನತೆ ಸರಿಯಾಗಿ ಉಪಯೋಗಿಸಿಕೋಳ್ಳಲು ಅವಕಾಶ ನೀಡಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಶಪಾಲ್ ಸುವರ್ಣ ರನ್ನೂ ಆಯ್ಕೆ ಮಾಡಬೇಕೆನ್ನೂವುದು ಬಹುಜನತೆಯ ಆಶಯ.

ಗೆಲುವಿನ ಸಮಗ್ರ ಹೋರಾಟಕ್ಕೆ ಸಿದ್ದ.ನನ್ನ ಕ್ಷೇತ್ರ ನನ್ನ ಆಯ್ಕೆ, ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು
#Yashpal4Modi,#ಮೋದಿಗಾಗಿಯಶಪಾಲ್,#ನಮ್ಮಆಯ್ಕೆಯಶಪಾಲ್,#ಅಭಿವೃದ್ಧಿಗೆಸುವರ್ಣರು,*ಗೆಲುವಿನ ಸಮಗ್ರ ಹೋರಾಟಕ್ಕೆ ಸಿದ್ದ.#ನಮ್ಮಆಯ್ಕೆಯಶಪಾಲ್*
#ಅಭಿವೃದ್ಧಿಗೆಸುವರ್ಣರು,#ಯಶಪಾಲ್_ಸುವರ್ಣ_ಹೆಸರಲ್ಲೆ_ಎನೋ #ಶಕ್ತಿಯಿದೆ,#ಹೋರಾಟದ_ಕಿಚ್ಚುವಿದೆ,#ಸಾಮರ್ಥ್ಯ_ #ನಾಯಕನ_ಲಕ್ಷಣವಿದೆ. ಇಂತಿ- ದೇಶದ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜವಾಬ್ದಾರಿ ಯುವಕ

Post Author: Ravi Yadav