ನಾಯ್ಡು ಹೆಲಿಕ್ಯಾಪ್ಟರ್ ಇಳಿಯಲು ತನ್ನ ಬೆಳೆಯನ್ನು ನಾಶಪಡಿಸಲು ಒಪ್ಪದ ರೈತನನ್ನು ಏನು ಮಾಡಿದರು ಗೊತ್ತಾ?? ಜೀವಕ್ಕೆ ಬೆಲೆಯೇ ಇಲ್ಲವೇ??

ನಾಯ್ಡು ಹೆಲಿಕ್ಯಾಪ್ಟರ್ ಇಳಿಯಲು ತನ್ನ ಬೆಳೆಯನ್ನು ನಾಶಪಡಿಸಲು ಒಪ್ಪದ ರೈತನನ್ನು ಏನು ಮಾಡಿದರು ಗೊತ್ತಾ?? ಜೀವಕ್ಕೆ ಬೆಲೆಯೇ ಇಲ್ಲವೇ??

ಆಂಧ್ರಪ್ರದೇಶದಲ್ಲಿ ವಿರೋಧ ಪಕ್ಷದ ಬಗ್ಗೆ ಟೀಕಿಸಲು ಚುನಾವಣಾ ರಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದೆ ವೇಳೆ ಕೋಟೇಶ್ವರ ಎಂಬ ರೈತರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇದಕ್ಕೆ ಕಾರಣ ಕೇಳಿದರೆ ಕಂಡಿತಾ ಒಂದು ಕ್ಷಣ ನೀವು ದಂಗ್ಆಗುತ್ತೀರಾ, ಹಾಗೂ ಪರಿಜ್ಞಾನವೇ ಇಲ್ಲದ ನಾಯಕರು ತಮ್ಮ ಸ್ವಾರ್ಥದ ಲಾಭಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ರೈತರು ವರ್ಷಗಳ ಕಾಲ ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ ಆದರೆ ಇದ್ದಕ್ಕಿದ್ದ ಹಾಗೆ ಒಬ್ಬ ರೈತ ವರ್ಷಗಳ ಕಾಲ ಬೆಳೆದ ಪರಂಗಿ ಹಣ್ಣಿನ ಎರಡು ಎಕರೆ ತೋಟವನ್ನು ಪೊಲೀಸರು ನಾಶಮಾಡಲು ಸೂಚಿಸುತ್ತಾರೆ. ಇದಕ್ಕೆ ಕಾರಣವನ್ನು ಕೇಳಿದರೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರು ಚುನಾವಣಾ ಪ್ರಚಾರಕ್ಕಾಗಿ ಗುಂಟೂರು ಜಿಲ್ಲೆ ಗೆ ಆಗಮಿಸುತ್ತಿದ್ದಾರೆ ಆದ ಕಾರಣ ನಿನ್ನ ಜಮೀನಿನಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡ್ ಮಾಡಬೇಕು ಎಂದು ಒತ್ತಾಯ ಮಾಡುತ್ತಾರೆ.

ಆದರೆ ಕಷ್ಟಪಟ್ಟು ಬೆಳೆದ ಬೆಳೆಯನ್ನು ಯಾರು ತಾನೇ ಸುಲಭವಾಗಿ ಬಿಡಲು ಒಪ್ಪಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮಾಡಿದಂತೆ ಕೋಟೇಶ್ವರ ಎಂಬ ರೈತನು ಸಹ ಪೊಲೀಸರ ದಬ್ಬಾಳಿಕೆಯನ್ನು ವಿರೋಧಿಸುತ್ತಾನೆ. ಹೆಲಿಕ್ಯಾಪ್ಟರ್ ಇಳಿಯಲು ತನ್ನ ಜಮೀನು ನೀಡಲು ಒಪ್ಪದ ರೈತನನ್ನು ಪೊಲೀಸರು ಎಳೆದುಕೊಂಡು ಹೋಗಿ ಮನಬಂದಂತೆ ಬಡಿದು ಪರಲೋಕಕ್ಕೆ ಕಳುಹಿಸುತ್ತಾರೆ.

ತದನಂತರ ಎಂದಿನಂತೆ ಚಂದ್ರಬಾಬು ನಾಯ್ಡು ರವರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಪಟ್ಟು ರೈತರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ನೀಡಿ ಸುಮ್ಮನಾಗುತ್ತಾರೆ ಆದರೆ ಬಿಜೆಪಿ ನಾಯಕರು ಇದರ ವಿರುದ್ಧ ಧ್ವನಿಯೆತ್ತಿ ಜಗನ್ಮೋಹನ್ ರೆಡ್ಡಿ ಅವರ ಜೊತೆ ಸೇರಿಕೊಂಡು ಪ್ರಕರಣದ ಸಂಪೂರ್ಣ ತನಿಖೆ ನಡೆಯಲು ರಾಜನಾಥ ಸಿಂಗ್ ರವರಿಗೆ ಮನವಿ ಮಾಡಿಕೊಂಡಿದ್ದಾರೆ .

ಯೋಚನೆ ಮಾಡದೆ ಮತ ನೀಡಿದರೆ ಈ ರೀತಿ ನಡೆಯುತ್ತದೆ ಎಂಬುದು ನಮ್ಮ ಅಭಿಪ್ರಾಯ ನಿಮಗೂ ಹಾಗೆ ಅನಿಸಿದರೆ ಮತ ನೀಡುವ ಮುನ್ನ ಒಮ್ಮೆ ಯೋಚಿಸಿ ಮತನೀಡಿ.