ನೇರವಾಗಿ ಖರ್ಗೆ ಬುಡಕ್ಕೆ ಬಾಂಬ್ ಇಟ್ಟ ಮೋದಿ ಹಾಗೂ ಮೂವರು ನಾಯಕರು

ನೇರವಾಗಿ ಖರ್ಗೆ ಬುಡಕ್ಕೆ ಬಾಂಬ್ ಇಟ್ಟ ಮೋದಿ ಹಾಗೂ ಮೂವರು ನಾಯಕರು

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಗಿರುವ ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ ಎಂದು ಖ್ಯಾತರಾಗಿದ್ದಾರೆ. ಇಷ್ಟು ದಿವಸ ಬಹಳ ಸುಲಭವಾಗಿ ಗೆದ್ದು ಬೀಗುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಬಾರಿಯ ಚುನಾವಣೆ ಕಬ್ಬಿಣದ ಕಡಲೆಯಾಗಿದೆ. ತಮ್ಮ ಮಗನನ್ನು ಉಳಿಸಿಕೊಳ್ಳಲು ಹಲವಾರು ನಾಯಕರನ್ನು ಎದುರು ಹಾಕಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದೆ.

ಈ ಆಕ್ರೋಶಕ್ಕೆ ಮೋದಿ ಅವರ ಅಲೆ ಸುನಾಮಿಯಾಗಿ ಪರಿವರ್ತನೆಗೊಂಡು ಸೇರಿಕೊಂಡು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸಿದ್ಧವಾಗಿ ನಿಂತಿದೆ. ಎರಡು ಬಾರಿ ಲೋಕಸಭಾ ಹಾಗೂ 9 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿರುವ ಮಲ್ಲಿಕಾರ್ಜುನ ಖರ್ಗೆ ರವರು ಈ ಬಾರಿ ಚುನಾವಣೆಯಲ್ಲಿ ಸೋಲುವುದು ಖಚಿತ ವಾಗಿದೆ.

ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆ ರವರನ್ನು ಸೋಲಿಸಬೇಕು ಎಂದು ಪಣ ತೊಟ್ಟು ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯವಾಗಿ ಮುಖಭಂಗ ಮಾಡಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಇದಕ್ಕೆ ಈಗ ಮೋದಿ ರವರ ಅಲೆಯ ಜೊತೆ 3 ಬಲಿಷ್ಠ ನಾಯಕರ ಕೈ ಜೊತೆ ಗೊಂಡಿದೆ.

ಚಿಂಚೋಳಿ ಕ್ಷೇತ್ರದ ಶಾಸಕರಾಗಿರುವ ಉಮೇಶ್ ಜಾದವ್ ರವರು ಈಗಾಗಲೇ ಬಿಜೆಪಿ ಸೇರುವುದು ಖಚಿತವಾಗಿದೆ. ಇನ್ನು ಬಾಬುರಾವ್ ಚಿಂಚನಸೂರ್ ಅವರು ಬಿಜೆಪಿ ಪಕ್ಷ ಈಗಾಗಲೇ ಸೇರಿಕೊಂಡು ಚುನಾವಣೆಯ ಕೆಲಸಗಳನ್ನು ಆರಂಭಿಸಿದ್ದಾರೆ, ಮಲ್ಲಿಕಾರ್ಜುನ ಖರ್ಗೆ ರವರ ಕ್ಷೇತ್ರದಲ್ಲಿ ಭಾರಿ ಪ್ರಭಾವವನ್ನು ಬೀರುವ ಕೋಲಿ, ಗಂಗಾಮತ ಹಾಗೂ ಬೆಸ್ತ ಜನಾಂಗದ ಹೋರಾಟದ ವಿಷಯದಲ್ಲಿ ಇವರು ಬಿಜೆಪಿ ಸೇರಿಕೊಂಡಿದ್ದಾರೆ. ಇನ್ನು ಹೈದರಾಬಾದ್ ಕರ್ನಾಟಕದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ಮಾಲಿಕಯ್ಯ ಗುತ್ತೇದಾರ್ ಅವರು ಬಿಜೆಪಿ ಪಕ್ಷ ಸೇರಿಕೊಂಡಿದ್ದು ಈ ಮೂವರು ನಾಯಕರ ಜೊತೆ ಜೊತೆಯಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವುದು ಖಚಿತವಾಗಿದೆ.