ಸೇನೆಯ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ: ದೊಡ್ಡಣ್ಣ ನೀಡಿದ ಶಾಕ್ ಗೆ ಚೀನಾ ಹಾಗೂ ಪಾಕಿಸ್ತಾನಕ್ಕೆ ಗಡ ಗಡ

ಭಾರತೀಯ ಸೇನೆಯು ದಿನೇ ದಿನೇ ಬಲಗೊಳ್ಳುತ್ತಿದೆ ಹಿಂದೆಂದೂ ಕಾಣದ ಶಸ್ತ್ರಾಸ್ತ್ರಗಳನ್ನು ನರೇಂದ್ರ ಮೋದಿ ರವರ ಸರ್ಕಾರ ಕೇವಲ ಐದು ವರ್ಷಗಳಲ್ಲಿ ಭಾರತೀಯ ಸೇನೆಯ ಬತ್ತಳಿಕೆಗೆ ಸೇರಿಸಿದೆ. ಭಾರತ ರಾಷ್ಟ್ರದ ರಕ್ಷಣಾ ವಿಷಯದಲ್ಲಿ ಎಂದಿಗೂ ರಾಜಿಯಾಗದ ನರೇಂದ್ರ ಮೋದಿ ರವರ ಸರ್ಕಾರ ಈಗ ಮತ್ತೊಂದು ಬ್ರಹ್ಮಾಸ್ತ್ರವನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳುತ್ತಿದೆ.ಮೇಕ್ ಇನ್ ಇಂಡಿಯಾದ ಯೋಜನೆಯ ಅಡಿಯಲ್ಲಿ ಈ ಯುದ್ಧ ವಿಮಾನ ತಯಾರಾಗುತ್ತಿರುವ ಕಾರಣ ಹಲವಾರು ಉದ್ಯೋಗಗಳು ಸಹ ಸೃಷ್ಟಿಯಾಗಲಿದೆ ಹಾಗೂ ಮೇಕ್ ಇನ್ ಇಂಡಿಯಾ ಗೆ ಮತ್ತೊಂದು ಬೃಹತ್ ಗರಿ ದೊರಕಲಿದೆ.

ಬೆಂಗಳೂರಿನಲ್ಲಿ ನಡೆದ ಯಲಹಂಕ ವಾಯುನೆಲೆಯಲ್ಲಿ ಅಮೇರಿಕಾ ದೇಶವು ಭಾರತೀಯ ವಾಯುಪಡೆ ಗಾಗಿ ಸಿದ್ಧಪಡಿಸಿರುವ ಎಫ್ 21 ಯುದ್ಧ ವಿಮಾನವನ್ನು ಪ್ರದರ್ಶಿಸಿತು, ಇದನ್ನು ಕಂಡು ಬೆರಗಾದ ಜನ ಒಂದು ಕ್ಷಣ ದಂಗಾಗಿದ್ದರು. ಯುದ್ಧ ವಿಮಾನದ ತಾಕತ್ತು ಕಂಡ ತಕ್ಷಣವೇ ಭಾರತವು ಈ ಒಪ್ಪಂದಕ್ಕೆ ಅಮೇರಿಕಾದ ಜೊತೆಗೆ ಸಹಿ ಹಾಕಿದೆ. ಅಮೇರಿಕಾ ದೇಶದ ಟೆಕ್ನಾಲಜಿ ಹೊಂದಿದ ಎಫ್ 21 ಯುದ್ಧ ವಿಮಾನ ವನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರು ಮಾಡಲಾಗುತ್ತದೆ. ಅಮೇರಿಕಾ ಟೆಕ್ನಾಲಜಿಯಲ್ಲಿ ಸ್ಥಳೀಯವಾಗಿ ಯುದ್ಧವಿಮಾನವನ್ನು ತಯಾರಿಸುವುದರಿಂದ ಹಲವಾರು ಉದ್ಯೋಗಗಳು ಸೃಷ್ಟಿಯಾಗಲಿವೆ.

ಎಫ್ 21 ಯುದ್ಧ ವಿಮಾನದ ತಾಕತ್ತು ಕಂಡ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳಿಗೆ ಖಂಡಿತವಾಗಿಯೂ ನಡುಕ ಆರಂಭವಾಗುತ್ತದೆ. ಕ್ಷಣ ಮಾತ್ರದಲ್ಲಿ ಯಾವುದೇ ದಾಳಿಯನ್ನು ಉಡೀಸ್ ಮಾಡಬಲ್ಲ ತಾಕತ್ತು ಹೊಂದಿರುವ ಎಫ್ 21 ಯುದ್ಧ ವಿಮಾನಗಳು ಇನ್ನು ಕೆಲವೇ ಕೆಲವು ದಿನಗಳಲ್ಲಿ ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲಿವೆ.

ತದನಂತರ ಭಾರತದಲ್ಲಿ ಉತ್ಪಾದನೆಯಾಗುವ ಎಫ್ 21 ವಿಮಾನಗಳು ವಿದೇಶಕ್ಕೆ ರಫ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಒಟ್ಟಿನಲ್ಲಿ ಭಾರತೀಯ ಸೇನೆಯು ದಿನೇದಿನೇ ಬಲಿಷ್ಠವಾಗುತ್ತಾ, ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸುತ್ತದೆ.

Post Author: Ravi Yadav