ಇಂದು ಭಾರತೀಯ ಸೇನೆಯ ತಾಕತ್ತು ಕಂಡು ಬೆಚ್ಚಿಬಿದ್ದ ಪಾಪಿಸ್ತಾನ ಮಾಡಿದ್ದೇನು ಗೊತ್ತಾ??

ಇಂದು ಭಾರತೀಯ ಸೇನೆಯ ತಾಕತ್ತು ಕಂಡು ಬೆಚ್ಚಿಬಿದ್ದ ಪಾಪಿಸ್ತಾನ ಮಾಡಿದ್ದೇನು ಗೊತ್ತಾ??

ಫೆಬ್ರುವರಿ 14 ರಂದು ನಡೆದ ಉಗ್ರರ ದಾಳಿಯಲ್ಲಿ ದೇಶದ 44 ಯೋಧರು ಹುತಾತ್ಮರಾಗಿದ್ದು ನಿಮಗೆಲ್ಲರಿಗೂ ತಿಳಿದಿದೆ. ಈ ದಾಳಿಯಿಂದ ಭಾರತವು ಪಾಕಿಸ್ತಾನದ ವಿರುದ್ಧ ಮತ್ತಷ್ಟು ಕೆರಳಿದ್ದು ಗಡಿಯಲ್ಲಿ ಈಗಾಗಲೇ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಗಡಿಯಲ್ಲಿ ಈಗಾಗಲೇ ಭಾರತ ದೇಶವು ತನ್ನ ಸೇನೆಯನ್ನು ಭಾರಿ ಪ್ರಮಾಣದಲ್ಲಿ ಜಮಾವಣೆ ಮಾಡಿದೆ.

ಇಂದು ಪಾಕಿಸ್ತಾನದ ಅಧ್ಯಕ್ಷರಾಗಿರುವ ಇಮ್ರಾನ್ ಖಾನ್ ರವರು ಉತ್ತರನ ಪೌರುಷ ಒಲೆ ಮುಂದೆ ಎಂಬಂತೆ ಯುದ್ಧಕ್ಕೆ ನಾವು ಸಿದ್ಧರಿದ್ದೇವೆ, ಭಾರತ ಒಂದು ವೇಳೆ ದಾಳಿ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡುವ ರೀತಿಯಲ್ಲಿ ಮಾತನಾಡಿದರು. ಆದರೆ ಭಾರತ ದೇಶದ ಸೇನೆಯ ತಾಕತ್ತು ಕಂಡು ಪಾಕಿಸ್ತಾನ ನಡುಗುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

ಈಗಾಗಲೇ ಗಡಿಯಲ್ಲಿರುವ ಉಗ್ರರು ಸರ್ಜಿಕಲ್ ಸ್ಟ್ರೈಕ್ ಭಯದಿಂದ ಕಾಲ್ಕಿತ್ತು ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಇನ್ನು ಭಾರತ ಸೇನಾ ಜಮಾವಣೆ ಮಾಡಿರುವುದರಿಂದ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿ ಇಡೀ ರಾತ್ರಿ ಪಾಕಿಸ್ತಾನದ ಸೈನಿಕರು ನಿದ್ದೆ ಇಲ್ಲದೆ ಪ್ರತಿಕ್ಷಣದ ಮಾಹಿತಿಯನ್ನು ತನ್ನ ದೇಶದ ಅಧ್ಯಕ್ಷರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತಿದ್ದಾರೆ.

ಮಾಡಿದನಲ್ಲ ಮಾಡಿ, ಸೈನಿಕರಿಗೆ ಬೆನ್ನ ಹಿಂದೆ ಚೂರಿ ಹಾಕಿದಂತೆ ಕುತಂತ್ರಿಗಳ ರೀತಿಯಲ್ಲಿ ಆತ್ಮಾಹುತಿ ದಾಳಿ ನಡೆಸಿ ನಮ್ಮ ಸೈನಿಕರನ್ನು ಹುತಾತ್ಮರ ನಾಗಿ ಮಾಡಿ ಸಾಕ್ಷ ಕೇಳುತ್ತಿರುವ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲು ಭಾರತೀಯ ಸೇನೆಯು ಸಿದ್ಧವಾಗಿ ನಿಂತಿದೆ. ಆದರೆ ಕೇವಲ ಸರಿಯಾದ ಸಮಯಕ್ಕಾಗಿ ಕಾದು ಕುಳಿತಿದೆ. ಅದು ಯುದ್ಧವು ಅಥವಾ ಸರ್ಜಿಕಲ್ ಸ್ಟ್ರೈಕ್ ತಿಳಿದಿಲ್ಲ ಆದರೆ ಭಾರತ ಸೇನಾ ಜಮಾವಣೆ ಮಾಡುತ್ತಿರುವ ರೀತಿಯನ್ನು ನೋಡಿದರೆ ಯುದ್ಧ ಎಂಬಂತೆ ಭಾಸವಾಗುತ್ತಿದೆ.

ಈಗಾಗಲೇ ಸೇನೆಗೆ ಸಂಪೂರ್ಣ ಸ್ವಾತಂತ್ರ ನೀಡಿರುವುದರಿಂದ ಭಾರತೀಯ ಸೇನೆಯು ಯಾವ ಕ್ಷಣದಲ್ಲಿ ಬೇಕಾದರೂ ಪಾಕಿಸ್ತಾನದ ಮೇಲೆ ಮುಗಿ ಬೀಳಬಹುದು, ಈಗಾಗಲೇ ಪಾಕಿಸ್ತಾನ ಸೈನಿಕರು ರಕ್ಷಣೆಗೆ ಎದ್ದು ನಿಂತಿರುವುದರಿಂದ ಭಾರತ ಸೇನೆಯು ಒಳ್ಳೆಯ ಅವಕಾಶಕ್ಕಾಗಿ ಕಾದು ಕುಳಿತಿದೆ. ಆದರೆ ಈ ಎಲ್ಲಾ ವಿದ್ಯಮಾನಗಳ ನಡುವೆ ಉತ್ತರನ ಪೌರುಷ ಒಲೆ ಮುಂದೆ ಎಂಬಂತೆ ಪಾಕಿಸ್ತಾನ ನಡುಗಿ ಹೋಗಿ ವಿಶ್ವ ಸಂಸ್ಥೆಯ ಸಹಾಯ ಕೇಳಿದೆ.

ಹೌದು ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಭಾರತ ದೇಶವು ಯುದ್ಧದ ರೀತಿಯಲ್ಲಿ ಸೇನಾ ಜಮಾವಣೆ ಯನ್ನು ಮಾಡುತ್ತಿದೆ. ಭಾರತ ದೇಶವು ಪಾಕಿಸ್ತಾನದ ಮೇಲೆ ತನ್ನ ಸೈನಾ ಶಕ್ತಿಯನ್ನು ಪ್ರಯೋಗಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ದಯವಿಟ್ಟು ಈ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಎಂದು ವಿಶ್ವಸಂಸ್ಥೆ ಕಚೇರಿಗೆ ಪತ್ರ ಬರೆದಿದೆ. ಪತ್ರದಲ್ಲಿ ದಯವಿಟ್ಟು ಈ ಕೂಡಲೇ ಈ ವಿಷಯವನ್ನು ತುರ್ತಾಗಿ ಗಮನಿಸಬೇಕು ಎಂದು ಬೇಡಿಕೊಂಡಿದೆ‌.

ಯುದ್ಧಕ್ಕೆ ನಾವು ಸಿದ್ಧ ಎಂದು ಉತ್ತರನ ಪೌರುಷ ತೋರಿದ್ದರೂ ಸಹ ಭಾರತ ದೇಶವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಕೆಲವೇ ಕೆಲವು ದಿನಗಳಲ್ಲಿ ಪಾಕಿಸ್ತಾನ ಸರ್ವನಾಶವಾಗುತ್ತದೆ ಎಂಬುದು ಪಾಕಿಸ್ತಾನ ದೇಶಕ್ಕೂ ಸಹ ತಿಳಿದಿದೆ ಆದ ಕಾರಣದಿಂದ ಈಗ ವಿಶ್ವ ಸಂಸ್ಥೆಯ ಮುಂದೆ ತನ್ನ ಗೋಳನ್ನು ತೋಡಿಕೊಳ್ಳುತ್ತಿದೆ. ಆದರೆ ನೆನಪಿರಲಿ ಉಗ್ರರ ದಾಳಿಗೆ ಯಾವ ವಿಶ್ವಸಂಸ್ಥೆ ಅಡ್ಡ ಬಂದರೂ ಸಹ ನಾವು ಪ್ರತಿಕಾರ ತೀರಿಸಿಕೊಂಡೆ ಸುಮ್ಮನಾಗುವುದು. ಸುಮ್ಮನೆ ಬಿಡುವ ಸಂದರ್ಭವೇ ಇಲ್ಲ.