ಬಿಗ್ ಬ್ರೀಕಿಂಗ್: ಕೋಲಾರ ವಿನ್ನು ಕೇಸರಿ ಮಯ, ಬಿಜೆಪಿಗೆ ಕೋಲಾರದಲ್ಲಿ ಆನೆ ಬಲ

ಬಿಗ್ ಬ್ರೀಕಿಂಗ್: ಕೋಲಾರ ವಿನ್ನು ಕೇಸರಿ ಮಯ, ಬಿಜೆಪಿಗೆ ಕೋಲಾರದಲ್ಲಿ ಆನೆ ಬಲ

ಮೈತ್ರಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತಾ ಅಧಿಕಾರ ನಡೆಸುವುದು ಕಷ್ಟವಾಗುತ್ತಿದೆ. ಈಗಾಗಲೇ ರಾಜ್ಯದ ಹಲವಾರು ಜನ ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಬೇಸತ್ತಿದ್ದಾರೆ ಎಂಬ ಅಂಶ ಎಲ್ಲರಿಗೂ ತಿಳಿದಿದೆ. ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಯಾವುದೇ ಭರವಸೆಗಳನ್ನು ಕುಮಾರಸ್ವಾಮಿ ರವರು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಪ್ರಮುಖವಾಗಿ ತಾನು ಅಧಿಕಾರಕ್ಕೆ ಬಂದ ಕೇವಲ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ ಕುಮಾರಸ್ವಾಮಿ ರವರು ಈಗ ಕನಿಷ್ಠ ಹತ್ತು ತಿಂಗಳು ಬೇಕು ಎಂದು ಮತ್ತೊಮ್ಮೆ ಯು ಟರ್ನ್ ಹೊಡೆದಿದ್ದಾರೆ ಈ ಎಲ್ಲಾ ವಿದ್ಯಮಾನಗಳ ನಡುವೆ ಕೋಲಾರದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಕುಮಾರಸ್ವಾಮಿರವರ ಸರ್ಕಾರದ ವಿರುದ್ಧ ಅಸಮಾದಾನಗೊಂಡು ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ.

ಕಳೆದ ಚುನಾವಣೆಗಳಲ್ಲಿ ಚುನಾವಣೆಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಸಚಿವ ಚೆನ್ನಯ್ಯ ರವರ ಮಗ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್ ಬಿ ಮುನಿವೆಂಕಟಪ್ಪ ರವರು ತಮ್ಮ ತಮ್ಮ ಪಕ್ಷಗಳ ಪ್ರಾಬಲ್ಯ ಕೋಲಾರದಲ್ಲಿ ನೆಲೆಯೂರಲು ಕಷ್ಟಪಟ್ಟು ದುಡಿದಿದ್ದಾರೆ  ಆದರೆ ಪಕ್ಷದಲ್ಲಿ ಯಾವುದೇ ಮನ್ನಣೆ ಸಿಕ್ಕಿಲ್ಲ ಎಂಬ ಕಾರಣದಿಂದ ಇಂದು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ.

ಯಡಿಯೂರಪ್ಪನವರ ಸಮ್ಮುಖದಲ್ಲಿ ಮುಳಬಾಗಿಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ ಚಾರಿ, ಜಿಲ್ಲಾ ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಸಿಎಂ ಅಶೋಕ್ ಶ್ರೀನಿವಾಸಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಾಜಿ ಸೇರಿದಂತೆ ಹಲವಾರು ಕೋಲಾರ ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ.

ತನ್ನ ಪ್ರಾಬಲ್ಯ ಇಲ್ಲದ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ಹಿಂದು ತನ್ನದೇ ಆದ ವರ್ಚಸ್ಸನ್ನು ಕಂಡುಕೊಳ್ಳುವ ಹಾದಿಯಲ್ಲಿ ಸಾಗಿದೆ. ಹಲವಾರು ಮುಖಂಡರು ಸೇರಿ ಕೊಳ್ಳುವುದರ ಮೂಲಕ ಬಿಜೆಪಿ ಪಕ್ಷವು ಮತ್ತಷ್ಟು ಬಲ ಗೊಳ್ಳಲಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.