ರೈತರ ಸಾಲ ಮನ್ನಾ: ಯು ಟರ್ನ್ ಹೊಡೆದ ಕುಮಾರಸ್ವಾಮಿ

ತಾನು ಅಧಿಕಾರಕ್ಕೆ ಬಂದ ಕೇವಲ ಇಪ್ಪತ್ತು ನಾಲ್ಕು ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿ ಆದರೆ ತಾನು ಅಧಿಕಾರಕ್ಕೆ ಏರಿದ ಮೇಲೆ ತಾನು ಇನ್ನೊಬ್ಬರ ಮುಲಾಜಿನಲ್ಲಿ ಬದುಕುತ್ತಿದ್ದೇನೆ ಎಂದು ಮಾತನಾಡಿ ರೈತರ ಸಾಲ ಮನ್ನಾ ಮಾಡದೆ ಪ್ರತಿಬಾರಿಯೂ ಮುಂದಿಡುತ್ತಿರುವ ಕುಮಾರಸ್ವಾಮಿ ಅವರು ಮತ್ತೊಮ್ಮೆ ಯು ಟರ್ನ್ ಹೊಡೆದಿದ್ದಾರೆ.

ಈಗಾಗಲೇ ಕುಮಾರಸ್ವಾಮಿ ಅವರು ಹಲವಾರು ಬಾರಿ ತಮ್ಮ ಹೇಳಿಕೆಗಳನ್ನು ವಾಪಸ್ಸು ತೆಗೆದುಕೊಂಡಿರುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಯು ಟರ್ನ್ ಕುಮಾರಸ್ವಾಮಿ ರವರು ಎಂದು ಜನರು ಟೀಕೆ ಮಾಡುತ್ತಿದ್ದಾರೆ. ಈಗ ಅದೇ ಸಾಲಿಗೆ ಮತ್ತೊಂದು ಯು ಟರ್ನ್ ಸೇರಿಕೊಂಡಿದ್ದು ಕುಮಾರಸ್ವಾಮಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂದಿನ ಜೂನ್ ತಿಂಗಳ ವೇಳೆಗೆ ಹಾಸನದ ಸಭೆಯೊಂದರಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಘೋಷಿಸಿದ ಕುಮಾರಸ್ವಾಮಿ ರವರು ಇದ್ದಕ್ಕಿದ್ದ ಹಾಗೆ ಯು ಟರ್ನ್ ಹೊಡೆದಿದ್ದಾರೆ ಇಂದು ಮತ್ತೊಮ್ಮೆ ಹಾಸನದ ಕ್ರೀಡಾಂಗಣದಲ್ಲಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ ರವರು ಸಾಲ ಮನ್ನಾ ಮಾಡಲು ಇನ್ನು ಡಿಸೆಂಬರ್ ತಿಂಗಳ ವರೆಗೂ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ.

ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿದ್ದೇನೆ ಕೇವಲ ಹಾಸನ ಜಿಲ್ಲೆಯನ್ನು ಮಾತ್ರವಲ್ಲ ರಾಜ್ಯದ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಕೂಡ ಮಾಡುತ್ತೇನೆ ಎಂದು ಭರವಸೆಗಳನ್ನು ನೀಡಿದ ನಂತರ ರೈತರ ಸಾಲ ಮನ್ನಾ ಮಾಡಲು ಡಿಸೆಂಬರ್ ವರೆಗೂ ಕಾಲಾವಕಾಶ ಬೇಕು ಎಂದು ಯು ಟರ್ನ್ ಹೊಡೆದಿದ್ದಾರೆ ಕುಮಾರಸ್ವಾಮಿ ರವರ ಹೇಳಿಕೆ ಭಾರಿ ಸದ್ದು ಮಾಡಿದ್ದು ಕುಮಾರಸ್ವಾಮಿ ರವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಕ್ರೋಶ ವ್ಯಕ್ತವಾಗಿದೆ.

Post Author: Ravi Yadav