ಕುತಂತ್ರಿ ನಾಯ್ಡು ರಾಜಕೀಯ ಅಂತ್ಯ: ಮೋದಿ ಜೊತೆಯಾದರು ಇಬ್ಬರು ಬಲಿಷ್ಠ ನಾಯಕರು

ಕುತಂತ್ರಿ ನಾಯ್ಡು ರಾಜಕೀಯ ಅಂತ್ಯ: ಮೋದಿ ಜೊತೆಯಾದರು ಇಬ್ಬರು ಬಲಿಷ್ಠ ನಾಯಕರು

ಬಿಜೆಪಿ ಪಕ್ಷವು ಆಂಧ್ರಪ್ರದೇಶದಲ್ಲಿ ಕುತಂತ್ರಿ ನಾಯ್ಡು ರವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಕಳೆದ ಬಾರಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಪಕ್ಷದ ಹೆಸರನ್ನು ಬಳಸಿಕೊಂಡು, ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದ ನಂತರ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿ ಇದ್ದಕ್ಕಿದ್ದ ಹಾಗೆ ವಿಶೇಷ ಸ್ಥಾನಮಾನ ಗಳಿಗೆ ಬೇಡಿಕೆ ಇಟ್ಟು ಕೇವಲ ಮೈತ್ರಿಯನ್ನು ಮುರಿದುಕೊಂಡು ಸುಮ್ಮನಾಗದೆ ಉಳಿದ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಕೆಲಸಕ್ಕೆ ಕೈ ಹಾಕಿದ್ದರು.

ಆಂಧ್ರ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಹವಾ ಅಷ್ಟಾಗಿ ಇಲ್ಲವಾದರೂ ಮೋದಿ ಅವರ ಅಲೆ ಭರ್ಜರಿಯಾಗಿ ಇದೆ. ಇಷ್ಟು ಸಾಲದು ಎಂಬಂತೆ ಈಗ ಆಂಧ್ರ ಪ್ರದೇಶದಲ್ಲಿ ಮೋದಿ ಅವರಿಗೆ ದೊಡ್ಡ ನಾಯಕರು ಜೊತೆ ಯಾಗುವುದು ಬಹುತೇಕ ಖಚಿತವಾಗಿದೆ ಅಷ್ಟೇ ಅಲ್ಲದೆ ಕಳೆದ ಬಾರಿ ನಾಯ್ಡುರವರ ಜೊತೆಗಿದ್ದ ಪವನ್ ಕಲ್ಯಾಣ್ ಅವರು ಸಹ ಈ ಬಾರಿ ತನ್ನ ಬೆಂಬಲ ನಾಯ್ಡು ರವರಿಗೆ ಇರುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಇದನ್ನು ನಾಯ್ಡುರವರು ಸಹ ಖಚಿತ ಗೊಳಿಸಿದ್ದು ನಾಯ್ಡು ರವರ ರಾಜಕೀಯ ಭವಿಷ್ಯದ ಅಂತ್ಯ ಎಂದು ರಾಜಕೀಯ ಪಂಡಿತರು ಉಲ್ಲೇಖಿಸಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಬದ್ಧ ವೈರಿಗಳಂತೆ ಕಾದಾಡುವ ತೆಲಂಗಾಣದ ಟಿ ಆರ್ ಎಸ್ ಪಕ್ಷ ಹಾಗೂ ನಾಯ್ಡು ರವರ ಮೈತ್ರಿ ಎಂದಿಗೂ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ತೆಲಂಗಾಣದ ಮುಖ್ಯಮಂತ್ರಿ ಕೆ ಸಿ ಆರ್ ಅವರು ಮೊದಲಿನಿಂದಲೂ ಬಿಜೆಪಿ ಪಕ್ಷಕ್ಕೆ ಪರೋಕ್ಷ ಬೆಂಬಲವನ್ನು ವ್ಯಕ್ತ ಪಡಿಸುತ್ತಾ ನರೇಂದ್ರ ಮೋದಿ ರವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಸಹ ಚುನಾವಣೋತ್ತರ ಮೈತ್ರಿ ಖಚಿತವಾಗಿದೆ.

ಇಷ್ಟು ಸಾಲದು ಎಂಬಂತೆ ಈಗಾಗಲೇ ಹಲವಾರು ಪ್ರಣಾಳಿಕೆಯಲ್ಲಿ ನಮೂದಿಸಿದ ಬೇಡಿಕೆಗಳನ್ನು ನಾಯ್ಡುರವರು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಇದನ್ನು ಬಹಳ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿರುವ ಮಾಜಿ ಮುಖ್ಯಮಂತ್ರಿಗಳ ಮಗ ಜಗಮೋಹನ್ ರೆಡ್ಡಿ ರವರು ಕಳೆದ 11 ತಿಂಗಳಿನಿಂದ ಪಾದಯಾತ್ರೆ ಮಾಡಿಕೊಂಡು ಈಗಾಗಲೇ ಭಾರಿ ಜನ ಬೆಂಬಲವನ್ನು ಹೊಂದಿದ್ದಾರೆ. ನಾಯ್ಡು ರವರ ಭದ್ರಕೋಟೆ ಎನಿಸಿಕೊಂಡಿದ್ದ ಕೃಷ್ಣಾ ಗೋದಾವರಿ ಪೂರ್ವ ಹಾಗೂ ಪಶ್ಚಿಮ ಜಿಲ್ಲೆಗಳಲ್ಲಿ ಜಗನ್ಮೋಹನ್ ರೆಡ್ಡಿ ರವರು ಪಾದಯಾತ್ರೆ ಮೂಲಕ ನಾಯ್ಡುರವರ ಭ್ರಷ್ಟಾಚಾರ ಪ್ರಕರಣಗಳನ್ನು ಹೊರಗೆಳೆದು ಜನರಿಗೆ ಅರಿವು ಮೂಡಿಸಿದ್ದಾರೆ. ಪಾದಯಾತ್ರೆಗಳಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿದೆ.

ಇಷ್ಟು ಸಾಲದು ಎಂಬಂತೆ ಆಂಧ್ರಪ್ರದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕಾಪು ಎಂಬ ಜನಾಂಗದ ಮತದಾರರು ನಾಯ್ಡು ರವರ ವಿರುದ್ಧ ತಿರುಗಿ ಬಿದ್ದಿರುವುದು ಖಚಿತವಾಗಿದೆ. ಶೇಕಡ 17ರಷ್ಟು ಮತದಾರರು ಸಂಪೂರ್ಣವಾಗಿ ನಾಯ್ಡು ರವರ ಪರವಿದ್ದರು ಅದಕ್ಕೆ ಕಾರಣ ಎಂದರೆ ತೆಲುಗು ಖ್ಯಾತ ನಟರಾಗಿರುವ ಪವನ್ ಕಲ್ಯಾಣ್ ಅವರು, ಆದರೆ ಪವನ್ ಕಲ್ಯಾಣ್ ಅವರು ಈ ಬಾರಿ ನಾಯ್ಡು ಅವರಿಗೆ ಬೆಂಬಲ ಘೋಷಿಸುವುದಿಲ್ಲ ಹಲವಾರು ಆಶ್ವಾಸನೆಗಳನ್ನು ಈಡೇರಿಸುವಲ್ಲಿ ನಾಯ್ಡುರವರು ವಿಫಲರಾಗಿದ್ದಾರೆ ಎಂದು ತಿರುಗಿ ಬಿದ್ದಿದ್ದಾರೆ.

ಬಿಜೆಪಿ ಬಿಜೆಪಿ ಪಕ್ಷವು ಈಗಾಗಲೇ ಜಗಮೋಹನ್ ರೆಡ್ಡಿ ರವರ ಜೊತೆ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಪಕ್ಷದ ಚಾಣಕ್ಯ ಎನಿಸಿಕೊಂಡಿರುವ ಕಿಶೋರ್ ಅವರು ಜಗಮೋಹನ್ ರೆಡ್ಡಿ ರವರ ಬಳಿ ಮಾತನಾಡಿ ಮೈತ್ರಿಗೆ ಒಪ್ಪಿಸಿ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದೆ ಅದಕ್ಕೆ ಪೂರಕವೆಂಬಂತೆ ಜಗನ್ಮೋಹನ್ ರೆಡ್ಡಿ ರವರು ಸಹ ಹಲವಾರು ಬಾರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ನಾಯ್ಡುರವರು ಭಾರಿ ಮುಖಭಂಗ ಸೋಲನ್ನು ಅನುಭವಿಸಿದ್ದಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ ಎಲ್ಲಾ ಸಮೀಕ್ಷೆಗಳು ಸಹ ನಾಯ್ಡು ರವರ ವಿರುದ್ಧ ಈಗಾಗಲೇ ಹೊರಬಿದ್ದಿವೆ ಇದನ್ನು ಕಂಡು ಶಾಕ್ ಆಗಿದ್ದು ಬಿಜೆಪಿ ಪಕ್ಷವು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಳ್ಳಬಾರದು ಎಂದು ಪಟ್ಟು ಹಿಡಿದಿದ್ದಾರೆ ಆದರೆ ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿಕೊಳ್ಳುವಾಗ ರಾಷ್ಟ್ರೀಯ ಪಕ್ಷಗಳು ಯಾಕೆ ಮಾಡಿಕೊಳ್ಳಬಾರದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.