ಪುಲ್ವಾಮಾ ದಾಳಿ ಮಾದರಿಯಲ್ಲಿ ಪಾಕ್ ಸೈನಿಕರ ಮೇಲೆ ಆತ್ಮಾಹುತಿ ದಾಳಿ

ಕಾಶ್ಮೀರದ ಪುಲ್ವಾಮ ಪ್ರದೇಶದಲ್ಲಿ ಉಗ್ರಗಾಮಿಗಳು ಆತ್ಮಾಹುತಿ ದಾಳಿ ಮಾಡಿ ಭಾರತದ ನಲವತ್ತಕ್ಕೂ ಹೆಚ್ಚು ಇವರನ್ನು ಬಲಿತೆಗೆದುಕೊಂಡಿದ್ದರು. ಭಾರತವು ಪಾಕಿಸ್ತಾನದ ಉಗ್ರಗಾಮಿಗಳನ್ನು ದೂಷಿಸುತ್ತಿರುವ ಸಮಯದಲ್ಲಿ ಪಾಕಿಸ್ತಾನ ದೇಶವು ಉಗ್ರರ ಬೆಂಬಲಕ್ಕೆ ನಿಂತಿತ್ತು. ಇನ್ನೂ ಅಸಹ್ಯ ಎಂದರೆ ಹಲವಾರು ಭಾರತೀಯ ರಾಜಕಾರಣಿಗಳು ಸಹ ಉಗ್ರರ ಪರವಾಗಿ ನಿಂತು ಆತ ಭಾರತೀಯ ಆರ್ಮಿ ಇಂದಲೇ ಉಗ್ರನಾಗಿ ಬೆಳೆದ ಅದು ಇದು ಕಥೆಗಳನ್ನು ಕಟ್ಟಿದ್ದರು.

ಈಗ ಉಗ್ರರ ಪರವಾಗಿ ಮಾತನಾಡಿದ ಪ್ರತ್ಯೇಕವಾದಿಗಳು ಅಡಗಿ ಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ತನ್ನ ಒಡಲಲ್ಲಿ ಇಟ್ಟುಕೊಂಡು ಉಗ್ರಗಾಮಿಗಳನ್ನು ಪೋಷಿಸುತ್ತಿದ್ದ ಪಾಕಿಸ್ತಾನಕ್ಕೆ ಅದೇ ಉಗ್ರರು ಚೂರಿ ಹಾಕಿದ್ದಾರೆ. ಇಂದು ನಡೆದ ಆತ್ಮಹುತಿ ದಾಳಿಯಲ್ಲಿ ಪಾಕಿಸ್ತಾನದ 9 ಸೈನಿಕರು ಸಾವನ್ನು ಅಪ್ಪಿದ್ದಾರೆ, ಮತ್ತು 11 ಮಂದಿಗೆ ಗಾಯಗಳಾಗಿವೆ ಎಂದು ಬಲೂಚಿಸ್ತಾನದ ಪತ್ರಿಕೆ ವರದಿ ಮಾಡಿದೆ.

ಭಾರತ ಸೇನೆಯನ್ನು ದೂಷಿಸಿ ಉಗ್ರಗಾಮಿಗಳ ಹುಟ್ಟಿಗೆ ಕಾರಣ ಭಾರತದ ಸೇನೆ ಎಂದು ಆರೋಪಿಸಿದ ಪ್ರತ್ಯೇಕವಾದಿಗಳು ಇದಕ್ಕೆ ಯಾವ ಉತ್ತರವನ್ನು ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav