ಬಿಗ್ ಬ್ರೇಕಿಂಗ್: ಗಡಿಯಲ್ಲಿ 140 ಯುದ್ಧ ವಿಮಾನ, ಯುದ್ಧಕ್ಕೆ ಸಿದ್ಧ ಎಂದ ವಾಯುಪಡೆಯ ಮುಖ್ಯಸ್ಥ, ಹೈ ಅಲರ್ಟ್ ಘೋಷಣೆ !

ಪುಲ್ವಾಮಾ ದಾಳಿಯ ನಂತರ ಭಾರತ ದೇಶವು ಉಗ್ರರ ಉಪಟಳ ವನ್ನು ತಡೆಯಲು ಪಾಕಿಸ್ತಾನದ ಮೇಲೆ ಆಕ್ರಮಣವನ್ನು ಮಾಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ದೇಶದ 130 ಕೋಟಿ ಜನರು ಸಹ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇಷ್ಟು ದಿವಸ ಸೇನೆಯ ಕೈಗಳು ಕಟ್ಟಿ ಹಾಕಿದಂತೆ ಭಾಸವಾಗುತ್ತಿತ್ತು ಆದರೆ ಈಗ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿರುವ ಕಾರಣ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲು ಸೇನೆ ಹಿಂಜರಿಯುವುದಿಲ್ಲ.

ಈಗಾಗಲೇ ಗಡಿಯಲ್ಲಿ ಹಲವಾರು ಯುದ್ಧ ಟ್ಯಾಂಕರ್ ಗಳು ಹಾಗು ವಿಮಾನಗಳು ಜಮಾವಣೆಗೊಂಡು ಯುದ್ಧ ಪರಿಸ್ಥಿತಿ ಎದುರಾಗಿದೆ. ಮತ್ತೊಂದು ಕಡೆ ಪಾಕಿಸ್ತಾನ ದೇಶವು ಸಹ ತನ್ನ ಸೇನೆಯನ್ನು ಸಿದ್ಧತೆ ಮಾಡಿಕೊಂಡು ಭಾರತದ ದಾಳಿಯನ್ನು ತಡೆಗಟ್ಟುವ ಹುಚ್ಚು ಸಾಹಸವನ್ನು ಮಾಡಲು ಸಿದ್ಧ ವಾದಂತೆ ಕಾಣುತ್ತಿದೆ.

ನೆನ್ನೆಯಷ್ಟೇ ವಾಯುಪಡೆಯು ಸಹ ಸಮರಭ್ಯಾಸ ವನ್ನು ನಡೆಸಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ಸಾರಿತ್ತು, ಸಮರಭ್ಯಾಸ ನೋಡಿದ ಪಾಕಿಸ್ತಾನವು ಒಂದು ವೇಳೆ ವಾಯುಪಡೆಯು ಮುಗಿಬಿದ್ದಲ್ಲಿ ಕೆಲವೇ ಕೆಲವು ಗಂಟೆಗಳಲ್ಲಿ ಪಾಕಿಸ್ತಾನ ಸರ್ವನಾಶವಾಗುತ್ತದೆ ಎಂದು ನಡುಗಿದೆ. ಈಗಾಗಲೇ ಪಾಕಿಸ್ತಾನ ದೇಶವು ವಿಶ್ವದ ಮುಂದೆ ಬೆತ್ತಲಾಗಿ ನಿಂತಿದೆ ಆದರೂ ಸಹ ತನ್ನ ತಪ್ಪನ್ನು ಒಪ್ಪಿಕೊಂಡು ಉಗ್ರರ ಬೇಟೆಯಾಡಲು ಸಹಾಯ ಮಾಡದೆ ಹೋದರೆ ಪಾಕಿಸ್ತಾನದ ಅಂತ್ಯ ಕಟ್ಟಿಟ್ಟ ಬುತ್ತಿ.

ಇನ್ನು ಪೋಕ್ರಾನ್ ನಲ್ಲಿ ವಾಯುಸೇನೆ ಶಕ್ತಿ ಪ್ರದರ್ಶನದ ನಂತರ ಮತ್ತಷ್ಟು ಯುದ್ಧ ವಿಮಾನಗಳು ಸೇರಿಕೊಂಡು ಭಾರತ ಹಾಗು ಪಾಕಿಸ್ತಾನದ ಗಡಿಯಲ್ಲಿ ಕಾದು ನಿಂತಿವೆ. ಪಾಕಿಸ್ತಾನದ ವಾಯು ನೆಲೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಬಂದರೆ ಸಂಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಲು ಆದೇಶ ಸಿಕ್ಕಿದೆ ಎಂದು ಪ್ರತಿನಿಧಿ ಜತೆ ಮಾತನಾಡಿದ ದೆಹಲಿಯ ಉನ್ನತ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಇದರ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಚೀಫ್ ಮಾರ್ಷಲ್ ಬಿಎಸ್ ಧಾನೋ ರವರು ಭಾರತೀಯ ವಾಯುಪಡೆಯು ಯಾವುದೇ ಕ್ಷಣದಲ್ಲಾದರೂ ಆದೇಶ ಪಾಲಿಸಲು ಸಿದ್ಧವಾಗಿ ನಿಂತಿದೆ. ಬೆಳಗ್ಗೆ ರಾತ್ರಿ ಎನ್ನದೆ ಯಾವುದೇ ಸಮಯದಲ್ಲಾದರೂ, ಯಾವುದೇ ವಾತಾವರಣದಲ್ಲಿ ಬೇಕಾದರೂ ದಾಳಿ ನಡೆಸಲು ನಮ್ಮ ತಂಡ ಸದಾ ಸಿದ್ಧವಾಗಿ ನಿಂತಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ದಾಳಿ ನಡೆದರೆ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಸರಿಯಾದ ತಾಣಗಳನ್ನು ಗುರುತಿಸಿ ಹೊಡೆಯಲಾಗುತ್ತದೆ,ಕೇವಲ ಒಂದು ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ ಒಂದು ವೇಳೆ ಭಾರತೀಯ ಸೇನೆಯ ಮುಖ್ಯಸ್ಥರು ಆದೇಶ ನೀಡಿದಲ್ಲಿ ಕ್ಷಣಮಾತ್ರದಲ್ಲಿ ಪಾಕಿಸ್ತಾನದ ವಾಯುನೆಲೆಯನ್ನು ಧ್ವಂಸ ಮಾಡಿ ವಾಪಸು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುದ್ಧ ವಿಮಾನಗಳು ಜಮಾವಣೆ ಆಗುತ್ತಿದ್ದಂತೆ ಪಾಕಿಸ್ತಾನದ ಗಡಿ ಭಾಗ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಪಾಕಿಸ್ತಾನದ ಸೇನೆಯು ಸಹ ಯುದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ಕೇವಲ ಒಂದು ಆದೇಶಕ್ಕಾಗಿ ಭಾರತದ ವಾಯುಪಡೆಯ ಮುಖ್ಯಸ್ಥ ಕಾಯುತ್ತಿದ್ದಾರೆ, ಒಂದು ವೇಳೆ ಸೇನಾ ಮುಖ್ಯಸ್ಥರು ಅಸ್ತು ಎಂದಲ್ಲಿ ಕ್ಷಣ ಮಾತ್ರದಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಧ್ವಂಸ ಮಾಡುವುದು ಖಚಿತ.

Post Author: Ravi Yadav