ಬಾಂಬ್ ಜಗ್ಗಲ್ಲ, ಗ್ರೆನೇಡು ಗೆ ಎದರಲ್ಲ… ಒಳಗಡೆ ಕೂತು ಉಗ್ರರನ್ನ ಉಢಾಯಿಸಿ…

ಬಾಂಬ್ ಜಗ್ಗಲ್ಲ, ಗ್ರೆನೇಡು ಗೆ ಎದರಲ್ಲ… ಒಳಗಡೆ ಕೂತು ಉಗ್ರರನ್ನ ಉಢಾಯಿಸಿ…

ಪುಲ್ವಾಮ ದಾಳಿಯ ನಂತರ ಭಾರತೀಯ ಸೇನೆಗೆ ಮತ್ತಷ್ಟು ಅಸ್ತ್ರಗಳು ಸೇರುತ್ತವೆ ಎಂಬ ಮಾತು ಸತ್ಯವಾಗಿದೆ. ಈಗಾಗಲೇ ಭಾರೀ ಶಸ್ತ್ರಾಸ್ತ್ರ ಹಾಗೂ ಅತ್ಯಾಧುನಿಕ ವಾಹನಗಳು ಹೊಂದಿರುವ ಭಾರತೀಯ ಸೇನೆಗೆ ಮತ್ತಷ್ಟು ಅಸ್ತ್ರಗಳು ಸೇರಿಕೊಂಡು ಸೇನೆ ಇನ್ನಷ್ಟು ಬಲಿಷ್ಟವಾಗಿದೆ. ಅದರಲ್ಲಿಯೂ ಸೇನೆಗೆ ಕಲ್ಲು ತೂರಾಟ ಹಾಗೂ ಇದ್ದಕ್ಕಿದ್ದ ಹಾಗೆ ಕಾಶ್ಮೀರದಲ್ಲಿ ನಡೆಯುವ ಗ್ರೈನೆಟ್ ದಾಳಿಗಳನ್ನು ತಡೆದುಕೊಳ್ಳುವಂತಹ ವಾಹನಗಳ ಅಗತ್ಯವಿದೆ ಎಂಬುದು ತಿಳಿದುಬಂದಿದೆ.

ಇದೀಗ ಭಾರತೀಯ ಸೇನೆಗೆ ಮತ್ತಷ್ಟು ಹೊಸ ವಾಹನಗಳು ಸೇರಿಕೊಳ್ಳಲಿವೆ. ಭಾರತೀಯ ಸೇನೆಗೆ ಗರಿಷ್ಠ ವಾಹನ ಪೂರೈಸುತ್ತಿರುವ ಟಾಟಾ ಮೋಟರ್ಸ್ ಕಂಪನಿಯು ಮತ್ತೊಂದು ಬಲಿಷ್ಠ ವಾಹನ ನಿರ್ಮಿಸಿ ಭಾರತೀಯ ಸೇನೆಗೆ ಸಮರ್ಪಿಸಲಿದ್ದು ಭಾರತೀಯ ಸೇನೆ ಗಾಗಿ ಪ್ರತ್ಯೇಕವಾಗಿನಿರ್ಮಿಸಲಾಗಿರುವ ನೂತನ ಟಾಟಾ ಮರ್ಲಿನ್ ಎಲ್ ಎಸ್ ವಿ ಕಾರು ಶೀಘ್ರದಲ್ಲಿಯೇ ಸೇನೆಯನ್ನು ಸೇರಿಕೊಳ್ಳಲಿದೆ.

ಅಷ್ಟಕ್ಕೂ ಕಾರಿನ ವಿಶೇಷತೆಗಳು ಗೊತ್ತಾ??

ಈ ಕಾರು ಅತ್ಯಾಧುನಿಕ ಟೆಕ್ನಾಲಜಿ ಗಳನ್ನು ಬಳಸಿ ತಯಾರಿಸಲಾಗಿದ್ದು TANAG 4569 ಲೆವೆಲ್ 1 ಭದ್ರತೆ ನೀಡಲಿದೆ.(NATO ಪ್ರಮಾಣೀಕೃತ ಗರಿಷ್ಠ ಭದ್ರತೆ) , ಗ್ರೇನೆಡ್ ದಾಳಿ ಸಣ್ಣ ಬಾಂಬು ಸೇರಿದಂತೆ ಹಲವಾರು ಅಪಾಯದ ಸಂದರ್ಭದಲ್ಲಿ ಈ ವಾಹನವು ಸೇನೆಗೆ ಸಂಪೂರ್ಣ ಭದ್ರತೆ ಇನ್ನು ನೀಡಲಿದೆ.

ಟಾಟಾ ಮರ್ಲಿನ್ LSV ಕಾರಿನಲ್ಲಿ7.6mm ಗನ್, 40mm ಅಟೋಮ್ಯಾಟಿಕ್ ಗ್ರೇನೇಡ್, ಆ್ಯಂಟಿ ಟ್ಯಾಂಕ್ ಮಿಸೈಲ್ಸ್ ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಇನ್ನು ಈ ಕಾರು 3.3 ಲೀಟರ್ ಲಿಕ್ವಿಡ್ ಕೂಲ್‌ಡ್, ಡೈರೈಕ್ಟ್ ಇಂಜೆಕ್ಟ್ ಡೀಸೆಲ್ ಎಂಜಿನ್ ಹೊಂದಿದೆ. 185bhp ಪವರ್ ಹಾಗೂ 450nm ಟಾರ್ಕ್ ಉತ್ಪಾದಿಸಬಲ್ಲ ಸಾಮಾರ್ಥ್ಯ ಹೊಂದಿದೆ. ಇನ್ಮುಂದೆ ಕಾರಿನಲ್ಲಿ ಕೂತು ಉಗ್ರರನ್ನು ಹಾಗೂ ಕಲ್ಲುತೂರಾಟ ಗಾರರನ್ನು ಸದೆಬಡಿಯಲು ಸೇನೆಗೆ ಈ ವಾಹನಗಳು ಉಪಯೋಗವಾಗಲಿದೆ.