ಏನು ಭಾರತಕ್ಕೆ ಹೊಸ ರಕ್ಷಣಾ ಸಚಿವರಾ??? ಹೊಸ ಅಭಿಯಾನ ಆರಂಭಿಸಿದ ನಮೋ ಭಕ್ತರು

ಇಡೀ ದೇಶದಲ್ಲಿ ಉಗ್ರರ ವಿರುದ್ಧ ಜನರು ಭಾರಿ ಆಕ್ರೋಶಗೊಂಡಿದ್ದಾರೆ, ಸೈನಿಕರ ಪ್ರತಿ ರಕ್ತದ ಹನಿಗೂ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೇ ಇದೇ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಹ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ, ಹಾಗೂ ಸೈನಿಕರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವುದರಿಂದ ಸೈನಿಕರು ಯಾವ ರೀತಿಯ ಹೆಜ್ಜೆ ಇಡಲಿದ್ದಾರೆ ಎಂಬುದನ್ನು ಕಾದು ನೋಡು ತ್ತಿದೆ.

ಮಾನ್ಯ ದೇಶದ ರಕ್ಷಣಾ ಸಚಿವೆಯಾಗಿರುವ ನಿರ್ಮಲ ಸೀತಾರಾಮನ್ ರವರು ಈಗಾಗಲೇ ಉಗ್ರರು ಎಂದು ಅನುಮಾನ ಬಂದ ಕೂಡಲೇ ಗುಂಡಿಟ್ಟು ಕೊಲ್ಲಿ ಯಾವುದೇ ವಿಚಾರಣೆ ಅಗತ್ಯವಿಲ್ಲ ಎಂದು  ಸೈನಿಕರಲ್ಲಿ ಮತ್ತಷ್ಟು  ಚೈತನ್ಯ ತುಂಬಿದ್ದಾರೆ ಹಾಗೂ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಸೇನೆಯ ಪರವಾಗಿ ನಿಲ್ಲುತ್ತವೆ ಎಂದು ಕೇಂದ್ರ ಸರ್ಕಾರ ಸರ್ವ ಪಕ್ಷಗಳಿಂದ ಒಮ್ಮತ ಪಡೆದುಕೊಂಡು ಘೋಷಿಸಿದೆ.

ಇಂತಹ ಸಮಯದಲ್ಲಿ ನಮೋ ಭಕ್ತರು ಹೊಸ ಅಭಿಯಾನವನ್ನು ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉತ್ತರ ಪ್ರದೇಶ ಕೇವಲ ಕೆಲವೇ ಕೆಲವು ತಿಂಗಳುಗಳ ಹಿಂದೆ ಅಪರಾಧಗಳ ತಾಣವಾಗಿತ್ತು ಆದರೆ ಇಂದು ಉತ್ತರ ಪ್ರದೇಶ ಅಪರಾಧ ಮುಕ್ತ ರಾಜ್ಯ ವತ್ತ ಸಾಗುತ್ತಿದೆ ಇದಕ್ಕೆಲ್ಲ ಕಾರಣ ಯೋಗಿ ಆದಿತ್ಯನಾಥ ರವರ ದಿಟ್ಟ ನಿರ್ಧಾರಗಳು ಎಂದರೆ ತಪ್ಪಾಗಲಾರದು.

ಸದಾ ಒಂದಲ್ಲ ಒಂದು ಕಠಿಣ ನಿರ್ಧಾರಗಳಿಂದ ಪ್ರಜೆಗಳಿಗೆ ಕಾನೂನಿನ ಮೇಲೆ ನಂಬಿಕೆ ಬರುವಂತೆ ಮಾಡುತ್ತಿರುವ ಯೋಗಿ ಆದಿತ್ಯನಾಥ ರವರು ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂಜೆರಿಯುವುದಿಲ್ಲ. ಇಂತಹ ನಾಯಕರನ್ನು ಭಾರತದ ರಕ್ಷಣಾ ಸಚಿವರಾಗಿ ಘೋಷಿಸಬೇಕು ಎಂದು ನಮೋ ಭಕ್ತರು ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ,  ಒಂದು ವೇಳೆ ಅದೇ ನಡೆದಲ್ಲಿ ಕೇವಲ ಒಂದೇ ದಿನದಲ್ಲಿ ಪಾಕಿಸ್ತಾನ  ಸರ್ವನಾಶವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಸೂಚನೆ: ನಮೋ ಭಕ್ತರ ಈ ಅಭಿಯಾನದಲ್ಲಿ ಇಂದಿನ ರಕ್ಷಣಾ ಸಚಿವೆಯಾಗಿರುವ ನಿರ್ಮಲ ಸೀತಾರಾಮನ್ ಅವರ ನಾಯಕತ್ವವನ್ನು ಪ್ರಶ್ನಿಸುವ ಯಾವುದೇ ಉದ್ದೇಶವಿಲ್ಲ ಇದು ಕೇವಲ ವಿಶೇಷ ಅಭಿಯಾನ. ಈಗಾಗಲೇ ನಿರ್ಮಲ ಸೀತಾರಾಮನ್ವರು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ, ಆದಕಾರಣ ಸೇನೆಯು ಪಾಕಿಸ್ತಾನದ ಚಲನವಲನ ನೋಡಿಕೊಂಡು ತಿರುಗೇಟು ನೀಡಲು ಕಾಯುತ್ತಿದೆ.

Post Author: Ravi Yadav