ಸೇನೆ ಘರ್ಜನೆಗೆ ನಡುಗಿ ಹೋದ ಪಾಕಿಸ್ತಾನ, ರಾತ್ರಿ ಇಡೀ ಮಾಡಿದ್ದೇನು ಗೊತ್ತಾ??

ಸೇನೆ ಘರ್ಜನೆಗೆ ನಡುಗಿ ಹೋದ ಪಾಕಿಸ್ತಾನ, ರಾತ್ರಿ ಇಡೀ ಮಾಡಿದ್ದೇನು ಗೊತ್ತಾ??

ಪುಲ್ವಾಮಾ ದಾಳಿಯಲ್ಲಿ ಅಟ್ಟಹಾಸ ಮೆರೆದ ಉಗ್ರರನ್ನು ದಮನಗೊಳಿಸಲು ಭಾರತದ ದಿಟ್ಟ ಹೆಜ್ಜೆ ಇಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಪಾಕಿಸ್ತಾನ ದೇಶ ಅರಿತಿದೆ. ಈ ಮೊದಲು ಉರಿ ಪ್ರದೇಶದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಪ್ರತಿರೋಧ ತೀರಿಸಿಕೊಳ್ಳಲು ಪಾಕಿಸ್ತಾನಕ್ಕೆ ಹೋಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ವಾಪಸಾಗಿದ್ದ ಭಾರತೀಯ ಸೇನೆಯ ತಾಕತ್ತು ಈಗಾಗಲೇ ಪಾಕಿಸ್ತಾನ ದೇಶಕ್ಕೆ ತಿಳಿದಿದೆ.

ಇನ್ನು ಗಡಿಯ ಬಗ್ಗೆ ಮಾತನಾಡುವುದಾದರೆ ಗಡಿಯಲ್ಲಿ ಈಗಾಗಲೇ ಬಾರಿ ಸೇನೆ ಜಮಾವಣೆ ಗೊಂಡಿದೆ, ನಿನ್ನೆ 250ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್ಗಳು ಮತ್ತೊಂದು ಕಡೆ ಭಾರತೀಯ ವಾಯು ನೆಲೆ ಯುದ್ಧ ವಿಮಾನಗಳು ಸಮರಭ್ಯಾಸ ನಡೆಸುತ್ತಿರುವುದನ್ನು ಕಂಡ ಪಾಕಿಸ್ತಾನ ದೇಶವು ನಡುಗೆ ಹೋಗಿದೆ. ಇತ್ತ ನರೇಂದ್ರ ಮೋದಿ ಅವರು ಸೇನೆಗೆ ಸರ್ವಾಧಿಕಾರ ನೀಡಿದ್ದಾರೆ ಆದ ಕಾರಣ ಯಾವ ಕ್ಷಣದಲ್ಲಿ ಬೇಕಾದರೂ ಪಾಕಿಸ್ತಾನದ ಮೇಲೆ ಯುದ್ಧ ಅಥವಾ ಸರ್ಜಿಕಲ್ ಸ್ಟ್ರೈಕ್ ನಡೆಯಬಹುದು ಎಂಬ ಭೀತಿಯಲ್ಲಿ ಪಾಕಿಸ್ತಾನ ಬದುಕುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.

ಮೋದಿ ಸರ್ಕಾರ ಗುರು ನಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ನಂಬಿರುವ ಪಾಕಿಸ್ತಾನ ದೇಶವು ಇಡೀ ರಾತ್ರಿ ಸೇನೆಯ ಅಧಿಕಾರಿಗಳು ಹಾಗೂ ಸೈನಿಕರು ನಿದ್ದೆಗೆಟ್ಟು ಜಾಗರಣೆ ಮಾಡಿದ್ದಾರೆ. ಯಾವ ಕ್ಷಣದಲ್ಲಿ ಬೇಕಾದರೂ ಆಕ್ರಮಣ ಮಾಡಬಹುದು ಎಂಬುದನ್ನು ಅರಿತಿರುವ ಪಾಕಿಸ್ತಾನ ಸೇನೆಯು ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡುತ್ತಿದೆ.

ಇನ್ನು ಇಡೀ ರಾತ್ರಿ ಪಾಕಿಸ್ತಾನದ ಹಿರಿಯ ಸೇನಾಧಿಕಾರಿಗಳು ಹಾಗು ಪಾಕಿಸ್ತಾನದ ಸೈನಿಕರು ನಿದ್ದೆಗೆಟ್ಟು ಗಡಿಯಲ್ಲಿ ಕಾದು ಕುಳಿತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಗಡಿಯ ಸೈನಿಕರು ಪಾಕಿಸ್ತಾನ ದೇಶದ ಹಿರಿಯ ಸೇನಾಧಿಕಾರಿಗಳಿಗೆ ಪ್ರತಿಕ್ಷಣ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ರವಾನಿಸುತ್ತಿದ್ದಾರೆ, ಒಂದು ವೇಳೆ ಆಕ್ರಮಣ ಎದುರಾದರೂ ಸಹ ತಡೆಗಟ್ಟುವ ಹುಟ್ಟು ಸಾಹಸವನ್ನು ಮಾಡಲು ಪಾಕಿಸ್ತಾನ ಸೇನೆ ಸಿದ್ಧವಾಗುತ್ತಿದೆ ಎಂದರೆ ನಂಬಲೇಬೇಕು. ಆದರೆ ನೆನಪಿರಲಿ ಇಲ್ಲಿ ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದಿರುವುದು ಭಾರತೀಯ ಸೇನೆ, ಪಾಪಿಸ್ತಾನ ಸುನಾಮಿಯಂತೆ ಕೊಚ್ಚಿಕೊಂಡು ಹೋಗುವುದು ಖಚಿತ.