ಭಾರತದ ಬೆಂಬಲಕ್ಕೆ ನಿಂತ ಸೌದಿ :ಪಾಕಿಸ್ತಾನಕ್ಕೆ ಬಿಗ್ ಶಾಕ್

ಭಾರತದ ಬೆಂಬಲಕ್ಕೆ ನಿಂತ ಸೌದಿ :ಪಾಕಿಸ್ತಾನಕ್ಕೆ ಬಿಗ್ ಶಾಕ್

ಪಾಕಿಸ್ತಾನದ ಅಧ್ಯಕ್ಷರಾಗಿರುವ ಇಮ್ರಾನ್ ಖಾನ್ ರವರು ಅಧಿಕಾರ ವಹಿಸಿಕೊಂಡಾಗ ಪಾಕಿಸ್ತಾನ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತು. ವಿಶ್ವಮಟ್ಟದಲ್ಲಿ ಪಾಕಿಸ್ತಾನವು ಪ್ರತಿಯೊಂದು ರಾಷ್ಟ್ರಗಳ ಬಳಿ ಭಿಕ್ಷೆ ಬೇಡುತ್ತಾ ಆರ್ಥಿಕ ನೆರವು ನೀಡುವಂತೆ ಕೋರಿ ಕೊಳ್ಳುತ್ತೀತ್ತು. ಆದರೆ ಪಾಕಿಸ್ತಾನದ ಕುತಂತ್ರ ನೀತಿಯನ್ನು ಅರಿತಿದ್ದ ಯಾವುದೇ ರಾಷ್ಟ್ರಗಳು ಪಾಕಿಸ್ತಾನಕ್ಕೆ ನೆರವು ನೀಡಲು ಸಿದ್ಧವಿರಲಿಲ್ಲ.

ಪಾಕಿಸ್ತಾನದ ಬಳಿ ಸರ್ಕಾರ ನಡೆಸಲು ಹಣವಿಲ್ಲದೆ ಒದ್ದಾಡುತ್ತಿತ್ತು ಇಂತಹ ಸಮಯದಲ್ಲಿ ಸೌದಿ ಅರೇಬಿಯಾ ದೇಶವು ಪಾಕಿಸ್ತಾನಕ್ಕೆ ನೆರವು ನೀಡುವುದಾಗಿ ಘೋಷಿಸಿತ್ತು. ಇದು ಹಲವಾರು ದೇಶಗಳ ಕೆಂಗಣ್ಣಿಗೆ ಸಹ ಗುರಿಯಾಗಿತ್ತು ಆದರೆ ತನ್ನ ಸ್ವಂತ ನಿರ್ಧಾರದಿಂದ ಸೌದಿ ಅರೇಬಿಯಾ ದೇಶವು ಹಿಂದೆ ಸರಿಯಲಿಲ್ಲ. ಬದಲಾಗಿ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಘೋಷಿಸಿ ಇಡೀ ವಿಶ್ವವನ್ನೇ ಎದುರು ಹಾಕಿಕೊಂಡಿತ್ತು.

ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೌದಿ ಅರೇಬಿಯಾ ರಾಷ್ಟ್ರವೂ ಸಹ ಭಾರತದ ಮೋದಿ ರವರ ಮೊಡಿಗೆ ಒಳಗಾಗಿ ಈಗಾಗಲೇ ಹಲವು ಬಾರಿ ಭಾರತ ತಮ್ಮ ಆಪ್ತ ರಾಷ್ಟ್ರ ಎಂದು ಹೇಳಿಕೊಂಡಿದೆ.  ನರೇಂದ್ರ ಮೋದಿ ಅವರಿಗೆ ಹಲವಾರು ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಸಹ ನೀಡಿ ಸನ್ಮಾನಿಸಿದೆ. ಇಂತಹ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ಪೈಶಾಚಿಕ ಪೈಸಾಚಿಕ ಕೃತ್ಯ ನಡೆದ ಮೇಲೆ ಮೋದಿ ರವರ ರಾಜತಾಂತ್ರಿಕತೆ ಗೆ ಮತ್ತೊಂದು ಗೆಲುವು ಸಿಕ್ಕಿದೆ, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದೆ ಸೌದಿ.

ಯೋಜನೆಯಂತೆ ಆರ್ಥಿಕ ದಿವಾಳಿ ಯನ್ನು ಎದುರಿಸುತ್ತಿರುವ ಪಾಕಿಸ್ತಾನ ದೇಶಕ್ಕೆ ಕೆಲವೇ ಕೆಲವು ದೇಶಗಳ ಜೊತೆ ವ್ಯಾಪಾರ ಸಂಬಂಧವಿದೆ, ಅದರಲ್ಲಿ ಸೌದಿ ಅರೇಬಿಯಾ ದೇಶವು ಪ್ರಮುಖವಾಗಿದೆ. ಆದರೆ ಈ ದೇಶವು ಇಂದು ಮೋದಿ ರವರು ಪಾಕಿಸ್ತಾನದ ಕುತಂತ್ರ ನೀತಿಯನ್ನು ಇಂದು ಇಡೀ ವಿಶ್ವಕ್ಕೆ ಸಾರಿದ್ದಾರೆ, 25ಕ್ಕೂ ಹೆಚ್ಚು ರಾಷ್ಟ್ರಗಳ ಜೊತೆ ಮಾತನಾಡಿರುವ ನರೇಂದ್ರ ಮೋದಿ ರವರ ಮಾತು ಕೇಳಿರುವ ಮಾತುಗಳಿಗೆ ಬೆಲೆ ಕೊಟ್ಟಿರುವ ಸೌದಿ ದೇಶವು,ತಾವು ಸಹ ಪಾಕಿಸ್ತಾನಕ್ಕೆ ಯಾವುದೇ ಆರ್ಥಿಕ ನೆರವು ನೀಡುವುದಿಲ್ಲ ಹಾಗೂ ಹೂಡಿಕೆ ಮಾಡಲು ಪಾಕಿಸ್ತಾನ ದೇಶಕ್ಕೆ ಭೇಟಿ ನೀಡಬೇಕು ಎಂದು ಕೊಂಡಿದ್ದ ಸೌದಿ ಉದ್ಯಮಿಗಳು ಹಿಂದೆ ಸರಿದಿದ್ದಾರೆ.ಸೌದಿ ಅರೇಬಿಯದ ಈ ನಡೆಯಿಂದ ಪಾಕಿಸ್ತಾನ ದೇಶವು ಮತ್ತೊಂದು ಮತ್ತಷ್ಟು ದಿವಾಳಿ ಆಗುವುದರಲ್ಲಿ ಅನುಮಾನವೇ ಇಲ್ಲ.