ತಡರಾತ್ರಿ ಯುದ್ಧ ಆರಂಭ?? ಮುಂಜಾನೆಯ ಹೊತ್ತಿಗೆ ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ??

ತಡರಾತ್ರಿ ಯುದ್ಧ ಆರಂಭ?? ಮುಂಜಾನೆಯ ಹೊತ್ತಿಗೆ ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ??

ಉಗ್ರರ ದಾಳಿಗೆ ಪಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆಯು ನೀಡುತ್ತದೆ ಎಂದು ಇಡೀ ದೇಶವೇ ಎಂದು ಕಾದು ಕುಳಿತಿದೆ. ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಾ, ಸಾಮಾನ್ಯ ಜನರು ಯುದ್ಧ ಸಾರಬೇಕು ಎಂದು ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಹಲವಾರು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.

ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿರುವ ನರೇಂದ್ರ ಮೋದಿ ರವರ ಸರ್ಕಾರ ಸೈನಿಕರು ಯಾವ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲವಿದೆ ಅದು ಯುದ್ಧ ವಾದರೂ ಸರಿ ಅಥವಾ ಸರ್ಜಿಕಲ್ ಸ್ಟ್ರೈಕ್ ಆದರೂ ಸರಿ ಎಂದು ಈಗಾಗಲೇ ಆದೇಶ ನೀಡಿದ್ದಾರೆ. ಇನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರು ಅನುಮಾನ ಬಂದರೆ ಯಾವುದೇ ವಿಚಾರಣೆ ಇಲ್ಲದೆ ಗುಂಡಿಟ್ಟು ಕೊಲ್ಲಿ ಎಂದು ಆದೇಶ ನೀಡಿದ್ದಾರೆ.

ಇತ್ತ ಭಾರತೀಯ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ ಸಿಕ್ಕ ಕೂಡಲೇ 7 ಜನರನ್ನು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಿ ಉಗ್ರ ಸಂಘಟನೆಯ ನಾಯಕ ಎಲ್ಲಿ ಇದ್ದಾನೆ ಎಂಬುದನ್ನು ತಿಳಿದುಕೊಳ್ಳಲು ವಿಚಾರಣೆ ಭರದಿಂದ ಸಾಗಿದೆ. ಮತ್ತೊಂದು ಕಡೆ ಭಾರತ ಹಾಗು ಪಾಕಿಸ್ತಾನದ ಗಡಿಯಲ್ಲಿ ಇನ್ 240ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್ ಗಳು ಈಗಾಗಲೇ ಟಿಕಾಣಿ ಹೂಡಿ ವೆ.

ಮತ್ತೊಂದು ಕಡೆ ಏರ್ ಶೋ ನ ಬದಲು ಶಕ್ತಿ ಪ್ರದರ್ಶನವನ್ನು ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ನಡೆಸುತ್ತಿರುವ ವಾಯುಪಡೆಯು ಗಡಿಯಲ್ಲಿ ಈಗಾಗಲೇ ಘರ್ಜಿಸುತ್ತಿದೆ. ಹಲವಾರು ಸ್ಪೋಟಕಗಳನ್ನು ಸ್ಪೋಟಿಸಿ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ ವಿಶ್ವಕ್ಕೆ ಸಾರುತ್ತಿದೆ. ಪಾಕಿಸ್ತಾನಕ್ಕೆ ಇಷ್ಟು ಸಾಲದು ಎಂಬಂತೆ ಈಗಾಗಲೇ ಭಾರತೀಯ ಸೈನಿಕರಿಗೆ ಅಗತ್ಯವಾದ ನೆರವು ಹಾಗೂ ಅಗತ್ಯಬಿದ್ದರೆ ತಮ್ಮ ದೇಶದ ಸೈನಿಕರನ್ನು ಕಳುಹಿಸುವುದಾಗಿ ಅಮೆರಿಕ ರಷ್ಯಾ ಹಾಗೂ ಇಸ್ರೇಲ್ ದೇಶಗಳು ಘೋಷಿಸಿವೆ.

ಈ ಎಲ್ಲಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಸಾಗಿದರೆ ಇಂದು ತಡರಾತ್ರಿ ಯುದ್ಧ ಆರಂಭವಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಅದೇ ನಡೆದಲ್ಲಿ ಬಹುಶಹ ನಾವು ಮುಂಜಾನೆ ಏಳುವ ಮುನ್ನ ಪಾಕಿಸ್ತಾನ ದೇಶ ಇತ್ತು ಎಂದು ನಾವೆಲ್ಲರೂ ಮಾತನಾಡಿ ಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ದೇಶವನ್ನು ಸಂಪೂರ್ಣ ನಾಶ ಮಾಡಲು ಬಹುಶಃ ಕೆಲವೇ ಕೆಲವು ಗಂಟೆಗಳು ಸಾಕು.