ಯೋಧರ ಬೆನ್ನಿಗೆ ನಿಂತ ಎಸ್ ಎಂ ಕೃಷ್ಣ: ಮೋದಿಗೆ ಹೊಸ ಮನವಿ

ಜಮ್ಮು-ಕಾಶ್ಮೀರದ ಪುಲ್ವಾಮಾ ದಲ್ಲಿ ನಡೆದ ಉಗ್ರರ ದಾಳಿಗೆ ಇಂದು ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಅಸಯ್ಯ ಎಂದರೆ ಕೆಲವು ರಾಜಕಾರಣಿಗಳು ಉಗ್ರರ ಪರ ನಿಂತು ದೇಶಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೇ ಕೆಲವು ರಾಜಕಾರಣಿಗಳು ಗಳನ್ನು ಹೊರತುಪಡಿಸಿ ಉಳಿದ ರಾಜಕಾರಣಿಗಳು ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತು ಎಲ್ಲಾ ನಿರ್ಧಾರಗಳಿಗೂ ನಮ್ಮ ಬೆಂಬಲವಿದೆ ಎಂದು ಘೋಷಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಎಸ್ ಎಂ ಕೃಷ್ಣ ಅವರು ಪಾಕಿಸ್ತಾನದ ವಿರುದ್ಧ ಹರಿಹಾಯ್ದ, ನರೇಂದ್ರ ಮೋದಿ ಅವರಲ್ಲಿ ಹೊಸ ಮನವಿಯನ್ನು ಮಾಡಿಕೊಂಡಿದ್ದಾರೆ. ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಯೊಬ್ಬ ಸೈನಿಕರ ರಕ್ತ ಕುದಿಯುತ್ತಿದೆ ಯೋಧರು ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧರಾಗಿದ್ದಾರೆ ಇಂತಹ ಸಮಯದಲ್ಲಿ ಒಂದು ವೇಳೆ ಎಸ್ ಎಂ ಕೃಷ್ಣ ಅವರ ಮನವಿಯನ್ನು ಮೋದಿ ಅವರು ಸ್ವೀಕರಿಸಿ ಆದೇಶ ನೀಡಿದರೆ ಉಗ್ರರ ನಿರ್ಣಾಮ ಖಚಿತ ಎಂಬುದು ನಮ್ಮ ಅಭಿಪ್ರಾಯ ವಾಗಿದೆ.

ಸಿ ಆರ್ ಪಿ ಎಫ್ ಯೋಧರ ಹತ್ಯೆಯನ್ನು ಖಂಡಿಸಿರುವ ಎಸ್ ಎಂ ಕೃಷ್ಣ ರವರು ಭಾರತ ದೇಶವು ಈಗಾಗಲೇ 4 ಯುದ್ಧಗಳಿಂದ ಪಾಕಿಸ್ತಾನಕ್ಕೆ ಪಾಠ ಕಲಿಸಲು ಪ್ರಯತ್ನಪಟ್ಟಿದೆ. ಆದರೆ ಪಾಕಿಸ್ತಾನ ಈ ನಾಲ್ಕು ಯುದ್ಧಗಳಿಂದ ಯಾವುದೇ ಪಾಠವನ್ನು ಕಲಿತಿಲ್ಲ, ಅಷ್ಟು ಸಾಲದೆಂಬಂತೆ 2016 ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಸೇನೆಯು ಸರ್ಜಿಕಲ್ ಸ್ಟ್ರೈಕ್  ನಡೆಸಿದ ನಂತರ ಪಾಠ ಕಲಿಯುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಗುರುವಾರ ನಡೆದ ಭಯೋತ್ಪಾದಕರ ದಾಳಿಯಿಂದ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ ಎಂಬುದು ತಿಳಿದು ಬಂದಿದೆ ಎಂದಿದ್ದಾರೆ.

ಉಗ್ರರ ದಮನ ಮಾಡಲು ಕೇವಲ ಒಂದು ಸರ್ಜಿಕಲ್ ಸ್ಟ್ರೈಕ್ ಸಾಕಾಗುವುದಿಲ್ಲ ಬದಲಾಗಿ ಮನಬಂದಂತೆ ಸರ್ಜಿಕಲ್ ಸ್ಟ್ರೈಕ್ ಗಳನ್ನು ನಡೆಸುತ್ತ ಮುಂದೆ ಸಾಗಬೇಕು. ನರೇಂದ್ರ ಮೋದಿ ಅವರು ಈ ಕೂಡಲೇ ಈ ಆದೇಶವನ್ನು ಜಾರಿಗೆ ತರಬೇಕು ಎಂದು ಸಾಮಾಜಿಕವಾಗಿ ಮನವಿ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಗುರು ರವರ ಬಗ್ಗೆ ಮಾತನಾಡಿರುವ ಎಸ್ ಎಂ ಕೃಷ್ಣ ರವರು ಅವರ ತ್ಯಾಗಕ್ಕೆ ನಾನು ಹೆಮ್ಮೆಪಡುತ್ತೇನೆ ಪ್ರತಿಯೊಬ್ಬ ಯೋಧನ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ ನರೇಂದ್ರ ಮೋದಿ ಅವರು ಇದಕ್ಕೆ ಸರಿಯಾದ ಸೇರಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav