ಪಾಕಿಸ್ತಾನದ ಪರ ನಿಂತ ನವಜೋತ್ ಸಿಂಗ್ ಸಿದ್ದು, ಕ್ಯಾಕರಿಸಿ ಉಗಿದ ಜನ

ಪುಲ್ವಾಮಾದಲ್ಲಿ ನಡೆದ ದುರಂತಕ್ಕೆ ಇಂದು ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ದೇಶವನ್ನು ಕಾಯುವ ಸೈನಿಕರು ನಮ್ಮೆಲ್ಲರನ್ನು ಅಗಲಿ 40ಕ್ಕೂ ಹೆಚ್ಚು ಜನ ಸ್ವರ್ಗ ಸೇರಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ದೇಶದ ಬೆಂಬಲಕ್ಕೆ ನಿಲ್ಲ ಬೇಕಾದ ಕೆಲವು ರಾಜಕಾರಣಿಗಳು ಕೇವಲ ರಾಜಕೀಯದ ಉದ್ದೇಶದಿಂದ ಸೇನೆಯ ವಿರುದ್ಧ ನಿಂತಿರುವುದು ಬಹಳ ನಾಚಿಕೆಗೇಡು ಸಂಗತಿ.

ಮೊದಲಿನಿಂದಲೂ ಪಾಕಿಸ್ತಾನದ ವಿಷಯದಲ್ಲಿ ವಿವಾದಿತ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದ ನವಜೋತ್ ಸಿಂಗ್ ಸಿದ್ದು ರವರ ಮತ್ತೊಮ್ಮೆ ಯೋಧರ ದುರಂತದಲ್ಲಿ ಸಹ ಪಾಕಿಸ್ತಾನದ ಪರ ನಿಂತು ಮತ್ತೊಂದು ದೊಡ್ಡ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ರಾಜಕೀಯ ಮರೆತು ದೇಶದ ಸೈನಿಕರ ಪರವಾಗಿ ನಿಲ್ಲುವ ಬದಲು ಇಂದು ಸಹ ಪಾಕಿಸ್ತಾನದ ಪರ ನಿಂತಿರುವುದನ್ನು ಕಂಡ ಜನ ಸಿದ್ದು ರವರಿಗೆ ಕ್ಯಾಕರಿಸಿ ಉಗಿದ್ದಿದ್ದಾರೆ.

ಅಷ್ಟಕ್ಕೂ ನವಜೋತ್ ಸಿಂಗ್ ಸಿದ್ದು ರವರ ಸಮರ್ಥನೆ ಏನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಾಕಿಸ್ತಾನ ದೇಶವು ಉಗ್ರರನ್ನು ಬೆಳೆಸುತ್ತಿದೆ, ನೇರವಾಗಿ ಭಾರತದ ವಿರುದ್ಧ ಹೋರಾಡಲು ಸಾಧ್ಯವಿಲ್ಲದ ಪಾಕಿಸ್ತಾನವು ತೆರೆಮರೆಯಲ್ಲಿ ನಿಂತು ಬೆಂಬಲಕ್ಕೆ ನಿಂತು ಭಾರತದ ವಿರುದ್ಧ ಹೋರಾಡಲು ಬೆಂಬಲ ನೀಡುತ್ತಿದೆ. ದುರಂತ ನಡೆದ ಬೆನ್ನಲ್ಲೇ ಇದೇ ಕಾರಣಕ್ಕಾಗಿ ಭಾರತ ದೇಶವು ಪಾಕಿಸ್ತಾನದ ವಿರುದ್ಧ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರೂ ಪಾಕಿಸ್ತಾನವನ್ನು ದೂಷಿಸಲು ಆರಂಭಿಸಿದರು ಆದರೆ ನವಜೋತ್ ಸಿಂಗ್ ಸಿಧು ಅವರು ಮಾತ್ರ ಪಾಕಿಸ್ತಾನದ ಪರ ನಿಂತು ಯೋಧರ ಮೇಲೆ ನಡೆದ ದಾಳಿಗೆ ಪಾಕಿಸ್ತಾನವನ್ನು ದೂಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಉಗ್ರರಿಗೆ ಶಾಶ್ವತ ಪರಿಹಾರ ಸಿಗಬೇಕು ಎಂದರೆ ನಾವು ಪಾಕಿಸ್ತಾನದ ಜೊತೆ ಕೈಜೋಡಿಸಿ ಮಾತುಕತೆ ನಡೆಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ಕೇಳಿದ ಜನ ಸಿದ್ದು ರವರ ಹೇಳಿಕೆಗೆ ಸರಿಯಾದ ಉತ್ತರ ಗಳನ್ನು ನೀಡುತ್ತಾ, ಮನಬಂದಂತೆ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಇನ್ನು ಇವರು ಭಾಗವಹಿಸುವ ಕಪಿಲ್ ಶರ್ಮ ಶೋ ನಿಂದ ಹೊರ ಹಾಕಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಕ್ರೋಶ ವ್ಯಕ್ತವಾಗಿದೆ.

Post Author: Ravi Yadav