ಪುಲ್ವಾಮದಲ್ಲಿ ವೀರ ಮರಣ ಹೊಂದಿದ ಕನ್ನಡದ ಯೋಧನ ಬಗ್ಗೆ ನಿಮಗೆ ಗೊತ್ತೇ??

ಪುಲ್ವಾಮದಲ್ಲಿ ವೀರ ಮರಣ ಹೊಂದಿದ ಕನ್ನಡದ ಯೋಧನ ಬಗ್ಗೆ ನಿಮಗೆ ಗೊತ್ತೇ??

ಪುಲ್ವಾಮದಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ವೀರ ಮರಣವನ್ನು ಹೊಂದಿದ್ದಾರೆ. ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಮತ್ತೊಂದು ಕಡೆಯಿಂದ ಪಾಕಿಸ್ತಾನ ಹಾಗೂ ಉಗ್ರರಿಗೆ ತಕ್ಕ ಶಾಸ್ತಿ ನಡೆಯಬೇಕೆಂದು ಸಾಮಾನ್ಯ ಜನರು ಒತ್ತಾಯ ಮಾಡುತ್ತಿದ್ದಾರೆ. ಹುತಾತ್ಮರಾದ ಭಾರತದ ಯೋಧರ ಪೈಕಿ ಕರ್ನಾಟಕದ ಒಬ್ಬ ಯೋಧರು ಸೇರಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದ ನಿವಾಸಿಯಾಗಿದ್ದ ಗುರುರವರು ದೇಶ ಸೇವೆ ಮಾಡುವ ಸಮಯದಲ್ಲಿ ಹುತಾತ್ಮರಾಗಿದ್ದಾರೆ. ಉಗ್ರರ ಕುತಂತ್ರ ಆತ್ಮಾಹುತಿ ದಾಳಿಗೆ ಇಂದು ನಮ್ಮನ್ನು ಅಗಲಿದ್ದಾರೆ. ಅವರ ಕಿರುಪರಿಚಯ ಇಲ್ಲಿದೆ ನೋಡಿ.

ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಹೊನ್ನಯ್ಯ ಎಂಬುವವರು ಪುತ್ರರಾಗಿದ್ದಾ ಗುರುರವರು ಕಳೆದ ಹತ್ತು ವರ್ಷಗಳಿಂದ ಸಿಆರ್ಪಿಎಫ್ ನಲ್ಲಿ ಭಾರತೀಯ ಮಾತೆಯ ಸೇವೆ ಮಾಡುತ್ತಿದ್ದಾರೆ. ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಗುರುರವರು, ಕೇವಲ ಒಂಬತ್ತು ತಿಂಗಳ ಹಿಂದೆ ಮದುವೆಯಾಗಿದ್ದರು. ಕೆಲವೇ ಕೆಲವು ದಿನಗಳ ಹಿಂದಷ್ಟೇ ಗುರುರವರು ಮಂಡ್ಯ ಜಿಲ್ಲೆಗೆ ಆಗಮಿಸಿ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ವಾಪಸ್ ಹಾಜರಾಗಿದ್ದರು ಆದರೆ ದುರಾದೃಷ್ಟವಶಾತ್ ಉಗ್ರರ ಕುತಂತ್ರಕ್ಕೆ ಅವರು ವೀರ ಮರಣವನ್ನು ಹೊಂದಿದ್ದಾರೆ.

ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಬೇಕು. ಎಲ್ಲಾ ರೀತಿಯ ಸರ್ಕಾರಿ ಸವಲತ್ತುಗಳು ಗುರು ಅಣ್ಣನವರ ಕುಟುಂಬಕ್ಕೆ ಸಲ್ಲಬೇಕು ಎಂಬುದು ನಮ್ಮ ಅಭಿಪ್ರಾಯ ವಾಗಿದೆ. ಇಂದು ಗುರು ಅಣ್ಣನವರು ನಮ್ಮೆಲ್ಲರನ್ನು ಅಗಲಿ ರಬಹುದು ಆದರೆ ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ದೇಶ ಸೇವೆ ಮಾಡಲು ಮತ್ತಷ್ಟು ಯುವಕರು ಮುನ್ನುಗ್ಗಬೇಕು ಎಂಬುದು ನಮ್ಮ ಅನಿಸಿಕೆ. ಜೈ ಹಿಂದ್