ಅಸಲಿ ಆಟ ಶುರು ಮಾಡಿದ ನರೇಂದ್ರ ಮೋದಿ: ಎಲ್ಲರಿಗೂ ಕಾದಿದೆ ಗಂಡಾಂತರ

ಅಸಲಿ ಆಟ ಶುರು ಮಾಡಿದ ನರೇಂದ್ರ ಮೋದಿ: ಎಲ್ಲರಿಗೂ ಕಾದಿದೆ ಗಂಡಾಂತರ

ನರೇಂದ್ರ ಮೋದಿ ಅವರು ಮೊದಲಿನಿಂದಲೂ ದೇಶದ ರಕ್ಷಣೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿಯನ್ನು ಮಾಡಿಕೊಳ್ಳಲು ಸಿದ್ಧರಿಲ್ಲ ಎಂಬುದು ತಿಳಿದಿರುವ ವಿಷಯ. ಕಳೆದ ಉರಿ ಪ್ರದೇಶದಲ್ಲಿ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸೈನಿಕರಿಗೆ ಸಕಲ ಸವಲತ್ತುಗಳನ್ನು ನೀಡಿ ದೇಶ ರಕ್ಷಣೆ ಮಾಡಲು ಹುಮ್ಮಸ್ಸು ನೀಡುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಕಾಶ್ಮೀರದಲ್ಲಿ ಉಗ್ರರ ಉಪಟಳ ವನ್ನು ತಡೆಯಲು ತಮ್ಮ ಸರ್ಕಾರವನ್ನು ಉರುಳಿಸಿ ಕೊಂಡು ರಾಷ್ಟ್ರಪತಿ ಆಡಳಿತ ಏರಿರುವ ನರೇಂದ್ರ ಮೋದಿ ರವರು ಮತ್ತೊಮ್ಮೆ ತಮ್ಮ ಚುನಾವಣೆಯನ್ನು ಮರೆತು ದಿಟ್ಟ ಹೆಜ್ಜೆಯನ್ನು ಇಟ್ಟು ದೇಶದ ಪರವಾಗಿ ನಿಂತಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧರಾಗಿರುವ ನರೇಂದ್ರ ಮೋದಿ ಅವರು ಬೆಳಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಶಾಕ್ ನೀಡುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತೊಮ್ಮೆ ಅದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಷ್ಟಕ್ಕೂ ನರೇಂದ್ರ ಮೋದಿ ರವರ ದಿಟ್ಟ ನಿರ್ಧಾರ ವಾದರೂ ಏನು ಗೊತ್ತಾ??

ಜಮ್ಮು ಹಾಗೂ ಕಾಶ್ಮೀರ ಎರಡು ರಾಜ್ಯಗಳು ಭಾರತಕ್ಕೆ ಸೇರಿದ್ದು ಎಂಬುದು ನಿಮಗೆ ಈಗಾಗಲೇ ತಿಳಿದಿದೆ ಆದರೆ ಕೆಲವು ಕೆಲಸಕ್ಕೆ ಬಾರದ ದೇಶದ್ರೋಹಿಗಳು ತಮಗಾಗಿಯೇ ಒಂದು ಪಕ್ಷವನ್ನು ರಚಿಸಿಕೊಂಡು ಹುರಿಯತ್(All Parties Hurriyat Conference) ಎಂದು ಹೆಸರಿಟ್ಟುಕೊಂಡು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ, ಜನರ ಮುಂದೆ ಸಾಚಾ ಗಳ ಅಂತೆ ವರ್ತಿಸಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನಕ್ಕೆ ಸೇರಿಸುವುದು ನಮ್ಮ ಗುರಿ ಎಂದು ಹೋರಾಟ ಮಾಡುತ್ತಿರುವ ಸಂಘಟನೆಗೆ ಶಾಕ್ ನೀಡಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಇರುವುದರಿಂದ ಪ್ರತಿಯೊಂದು ಸಂಘಟನೆಗಳಿಗೂ ರಕ್ಷಣೆ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದ್ದು ಆದ ಕಾರಣದಿಂದ ಹುರಿಯತ್ ಎಂಬ ಪಕ್ಷಕ್ಕೆ ಸರ್ಕಾರ ರಕ್ಷಣೆ ನೀಡುವ ಪರಿಸ್ಥಿತಿ ಎದುರಾಗಿತ್ತು.1993 ರಿಂದಲೂ ವಿವಾದಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುವ ಈ ಪಕ್ಷಕ್ಕೆ ಎಲ್ಲಾ ಸರ್ಕಾರಗಳು ಬೇರೆ ವಿಧಿಯಿಲ್ಲದೆ ರಕ್ಷಣೆ ನೀಡುತ್ತಾ ಬಂದಿದ್ದವು.

ಆದರೆ ಇಂದು ಪ್ರತೀಕಾರದ ಮನಸ್ಸಿನಲ್ಲಿ ಮುನ್ನುಗ್ಗುತ್ತಿರುವ ನರೇಂದ್ರ ಮೋದಿಯವರು ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುವ ಯಾವ ಪಕ್ಷಕ್ಕೂ ನಮ್ಮ ರಕ್ಷಣೆ ಇರುವುದಿಲ್ಲ ನಿಮ್ಮ ಗುರಿ ಏನೇ ಆಗಿರಲಿ ಇನ್ನು ಮುಂದೆ ನಿಮಗೆ ರಕ್ಷಣೆ ನೀಡುವುದು ಅಸಾಧ್ಯ ಎಂದು ಎಲ್ಲಾ ರಕ್ಷಣಾ ವ್ಯವಸ್ಥೆಯನ್ನು ಹಿಂಪಡೆಯಲು ಆದೇಶ ನೀಡಿದ್ದಾರೆ. ಇನ್ನು ಈ ಪಕ್ಷಕ್ಕೆ ಯಾವುದೇ ರೀತಿಯ ರಕ್ಷಣೆ ಸಿಗುವುದಿಲ್ಲ. ನರೇಂದ್ರ ಮೋದಿ ರವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.