ಯೋಧರ ಸಾವಿನ ರಕ್ತದಲ್ಲಿ ರಾಜಕೀಯ ಹುಡುಕಿದ ಕಾಂಗ್ರೆಸ್

ಯೋಧರ ಸಾವಿನ ರಕ್ತದಲ್ಲಿ ರಾಜಕೀಯ ಹುಡುಕಿದ ಕಾಂಗ್ರೆಸ್

ಇಂದು ಇಡೀ ದೇಶವೇ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಮನನೊಂದು ಕುಳಿತಿದೆ. ಪ್ರತಿಯೊಬ್ಬ ದೇಶಭಕ್ತನು ಮನನೊಂದು ಏನು ತೋಚಿದಂತೆ ಚಿಂತೆಗೀಡಾಗಿದ್ದಾರೆ ಹಲವಾರು ವರ್ಷಗಳಿಂದ ಉಗ್ರರನ್ನು ಮಟ್ಟ ಹಾಕುತ್ತಾ ಮೆರೆಯುತ್ತಿದ್ದ ಹೆಮ್ಮೆಯ ಸೈನಿಕರು ಇಂದು, ಕುತಂತ್ರ ನರಿಯಂತೆ ಬಂಧು ಆತ್ಮ ಹುತಿ ಧಾಳಿ ನಡೆಸಿದ ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾರೆ.

ದೇಶವೇ ದುಃಖದಲ್ಲಿ ಮುಳುಗಿರುವ ಸಂದರ್ಭದಲ್ಲಿ ಅಸಹ್ಯವಾಗಿ ಕಾಂಗ್ರೆಸ್ ಪಕ್ಷವು ಯೋಧರ ರಕ್ತದಲ್ಲಿಯೂ ಸಹ ರಾಜಕೀಯವನ್ನು ಹುಡುಕಿ ನರೇಂದ್ರ ಮೋದಿ ಅವರನ್ನು ಎಳೆದು ತಂದಿದೆ. ಕಾಂಗ್ರೆಸ್ ಪಕ್ಷದ ನಾಯಕನ ಈ ನಡೆಗೆ ಬಾರಿ ಆಕ್ರೋಶ ಉಂಟಾಗಿದ್ದು ಎಲ್ಲೆಡೆಯಿಂದ ಭಾರಿ ವಿರೋಧ ಕೇಳಿ ಬಂದಿದೆ. ಸಾಮಾನ್ಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕುತಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಇತ್ತ ಉಗ್ರರು ದಾಳಿ ನಡೆಸಿದ ನಂತರ ಇಡೀ ದೇಶವೇ ಯೋಧರ ಸಾವಿಗೆ ಮಿಡಿಯುತ್ತಿದೆ. ಆದರೆ ಕನ್ನಡದ ಸುವರ್ಣ ಚಾನೆಲ್ ನಲ್ಲಿ ಏರ್ಪಡಿಸಿದ ಚರ್ಚೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷವು ಯೋಧರ ರಕ್ತ ದಲ್ಲಿಯೂ ಸಹ ನರೇಂದ್ರ ಮೋದಿ ಅವರನ್ನು ಎಳೆದು ತಂದು ನರೇಂದ್ರ ಮೋದಿ ಅವರು ದೇಶ ದ್ರೋಹ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ನರೇಂದ್ರ ಮೋದಿ ರವರು ಭಾರತೀಯ ಸೇನೆಗೆ ಸರಿಯಾದ ಬಜೆಟ್ ಮಂಡಿಸಿಲ್ಲ, ಐಎಸ್ಐ ಉಗ್ರರನ್ನು ಪಠಾಣ್ ಕೋಟ್ ಗೆ ಕರೆಸಿಕೊಂಡದ್ದು ಮೋದಿ, ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಯಾಕೆ ಹೋಗಬೇಕಿತ್ತು ಅದೇ ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಹೋಗಿರಲಿಲ್ಲ ಈ ರೀತಿಯ ವಾದ-ವಿವಾದಗಳಲ್ಲಿ ತೊಡಗಿಕೊಂಡಿದ್ದಾರೆ.

ಯಾವುದೇ ವಿಷಯವಾದರೂ ನರೇಂದ್ರ ಮೋದಿ ಅವರನ್ನು ಎಳೆದು ತರುವ ತರುವ ಕಾಂಗ್ರೆಸ್ ಪಕ್ಷದ ಕುತಂತ್ರ ನೀತಿಯನ್ನು ಸುವರ್ಣ ನ್ಯೂಸ್ ಚಾನೆಲ್ ಸಂಪಾದಕರಾಗಿರುವ ಹನುಮಂತ್ಕ್ಕನವರು ರವರು ತೀವ್ರ ತರಾಟೆಗೆ ತೆಗೆದು ಕೊಂಡಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷದ ಈ ಅಸಹ್ಯ ರಾಜಕಾರಣವನ್ನು ಜನರಿಗೆ ಬಯಲು ಮಾಡಿದ್ದಾರೆ ಅಷ್ಟಕ್ಕೂ ಅವರ ಮಾತುಗಳೇನು ಗೊತ್ತಾ??

ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ ಯೋಧರು ಗಡಿಯಲ್ಲಿ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸುತ್ತದೆ. ಅದೇ ಕಾಂಗ್ರೆಸ್ ಪಕ್ಷವು ಅಫ್ಜಲ್ ಗುರು ಉಗ್ರನಿಗೆ ಶ್ರದ್ದಾಂಜಲಿಯನ್ನು ಸಲ್ಲಿಸುತ್ತಿದೆ. ಅದೇ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಉಗ್ರರು ಮುಂಬೈ ಹಾಗೂ ಬೆಂಗಳೂರಿಗೂ ಸಹ ಬಂದಿದ್ದರು. ಅದನ್ನು ಅಂದಿನ ಸರ್ಕಾರ ತಡೆಯಲು ಸಾಧ್ಯವಾಗಲಿಲ್ಲ ಆದರೆ ನರೇಂದ್ರ ಮೋದಿ ಅವರು ಇಂದು ತಡೆದಿದ್ದಾರೆ.

ಇಷ್ಟು ಸಾಲದು ಎಂಬಂತೆ ಅಧಿಕಾರದಲ್ಲಿರುವಾಗ ಮನಮೋಹನ್ ಸಿಂಗ್ ರವರು ಒಮ್ಮೆಯು ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ ಎಂದ ಕಾಂಗ್ರೆಸ್ ನಾಯಕ ನಟರಾಜ್ ರವರಿಗೆ, ಕೆಲವೇ ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಕೆಲವು ನಾಯಕರನ್ನು ಮನಮೋಹನ್ ಸಿಂಗ್ ಅವರು ಸರ್ಕಾರಕ್ಕೆ ತಿಳಿಸಿದೆ ಗುಪ್ತವಾಗಿ ಭೇಟಿ ಮಾಡಿದ್ದು ಯಾವ ಘನ ಕಾರ್ಯಕ್ಕೆ, ಇನ್ನು ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಪಾಕಿಸ್ತಾನಕ್ಕೆ ತೆರಳಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಹಾಯ ಕೇಳುತ್ತೀರಾ?? ಎಂದು ಪ್ರಶ್ನಿಸಿದ್ದಾರೆ ದಾಖಲೆಗಳ ಸಮೇತ ಬಿಡುಗಡೆಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ನಿಮ್ಮ ಕೆಲವು ಸಂಸದರು ಪಾಕಿಸ್ತಾನಕ್ಕೆ ಭೇಟಿ ನೀಡಿ ಪಾಕಿಸ್ತಾನ ದೇಶಕ್ಕೆ ಹೋಗುವುದು ತಪ್ಪಲ್ಲ ಎಂದು ದೇಶಕ್ಕೆ ಸಾರುತ್ತೀರ, ಎಂದು ಕಾಂಗ್ರೆಸ್ ನಾಯಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ನೇರವಾಗಿ ಜನರೇ ಮುಂದಿನ ಚುನಾವಣೆಯಲ್ಲಿ ಯೋಧರ ರಕ್ತದಲ್ಲಿ ರಾಜಕೀಯ ಮಾಡುವ ಪಕ್ಷಕ್ಕೆ ಮತ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.