ಸಿಡಿದೆದ್ದ ಕೇಂದ್ರ ಸರ್ಕಾರ: ಕೆಲವೇ ದಿನಗಳಲ್ಲಿ ನಡೆಯಲಿದೆ ಉಗ್ರರ ಮಾರಣಹೋಮ

ಇಂದು ಇಡೀ ದೇಶವೇ ಒಂದು ಕ್ಷಣ ಶಾಕ್ ಆಗಿದೆ, ಭಾರತೀಯ ಸೈನಿಕರನ್ನು ನೇರವಾಗಿ ಎದುರಿಸಲಾಗದೆ ಕುತಂತ್ರ ನರಿಯಂತೆ ಹೆದ್ದಾರಿಯಲ್ಲಿ ಹಾದುಹೋಗುವಾಗ ಆತ್ಮಾಹುತಿ ದಾಳಿ ನಡೆಸಿ ಹೆಮ್ಮೆಯ ಸೈನಿಕರನ್ನು ಬಲಿ ತೆಗೆದುಕೊಂಡಿರುವ ಉಗ್ರರಿಗೆ ತಕ್ಕ ಉತ್ತರ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ.

ಘಟನೆಯನ್ನು ಖಂಡಿಸಿರುವ ನರೇಂದ್ರ ಮೋದಿ ಅವರು, ಕೇಂದ್ರ ಸರ್ಕಾರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆದರುವುದಿಲ್ಲ ಎಂಬುದನ್ನು ಈಗಾಗಲೇ ಹಲವು ಬಾರಿ ಸಾಬೀತುಪಡಿಸಿದ್ದಾರೆ ಇನ್ನು ಈ ಘಟನೆಗೆ ತೀವ್ರವಾಗಿ ಖಂಡಿಸಿರುವ ನರೇಂದ್ರ ಮೋದಿ ಅವರು ಯೋಧರ ಪ್ರಾಣ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ, ಸಿ ಆರ್ ಪಿ ಎಫ್ ಯೋಧರ ಮೇಲಿನ ದಾಳಿಯ ಹೇಯ ವಾದದ್ದು ಯೋಧರ ಪ್ರಾಣ ತ್ಯಾಗವನ್ನು ವ್ಯರ್ಥವಾಗಲು ಕೇಂದ್ರ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ನರೇಂದ್ರ ಮೋದಿ ಅವರು ತಮ್ಮ ಕಟ್ಟಾಳು ಸೇನಾನಿ ಅಜಿತ್ ದೊವೆಲ್ ರವರ ಜೊತೆ ಮಹತ್ವದ ವಿಷಯವನ್ನು ಚರ್ಚಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ವಿಷಯ ತಿಳಿದ ಕೂಡಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಗಿರುವ ಅಜಿತ್ ದೋವಲ್ ಅವರು ತುರ್ತು ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಉಗ್ರರಿಗೆ ಗಂಡಾಂತರ ತಪ್ಪಿದ್ದಲ್ಲ ಎಂಬುದು ಸಾಬೀತಾಗಿದೆ.

ತುರ್ತು ಸಭೆಯಲ್ಲಿ ಕೇಂದ್ರದ ಗೃಹ ಸಚಿವ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಭಾಗಿಯಾಗಿದ್ದು ಮುಂದಿನ 24ಗಂಟೆಗಳಲ್ಲಿ ಕೇಂದ್ರ ಸಚಿವರಾಗಿರುವ ರಾಜನಾಥ್ ಸಿಂಗ್ ಅವರು ನೇರವಾಗಿ ಘಟನೆ ನಡೆದ ಸ್ಥಳಕ್ಕೆ ಯಾವುದೇ ಅಂಜಿಕೆ ಇಲ್ಲದೆ ಭೇಟಿ ನೀಡಲಿದ್ದಾರೆ. ಉಗ್ರರ ದಾಳಿ ನಡೆದರೆ ಅವರ ಜೊತೆ ಕ್ರಿಕೆಟ್ ಆಡುವುದಿಲ್ಲ ಎಂಬ ಕಾಲ ಎಂದು ಕಳೆದುಹೋಗಿದೆ ನೆನಪಿರಲಿ ಇದು ಮೋದಿಯನ್ನು ಮುನ್ನಡೆಸುತ್ತಿರುವ ಭಾರತ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ರವರು ಜಮ್ಮು-ಕಾಶ್ಮೀರದ ಗವರ್ನರ್ ಜೊತೆ ಮಾತನಾಡಿ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ನರೇಂದ್ರ ಮೋದಿ ರವರ ಎರಡು ಕಟ್ಟಾಳು ಸೇನಾನಿಗಳಾದ ಅಜಿತ್ ದೊವೆಲ್ ಹಾಗೂ ರಾಜನಾಥ್ ಸಿಂಗ್ ರವರು ಉಗ್ರರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ.

Post Author: Ravi Yadav