ಯು ಟರ್ನ್ ಕುಮಾರಣ್ಣ: ಗೂಂಡ ಕಾರ್ಯಕರ್ತರ ಬೆಂಬಲಕ್ಕೆ ನಿಂತ ಸಿಎಂ !

ರಾಜ್ಯ ರಾಜಕಾರಣ ಹೊಲಸು ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿ ಪ್ರೀತಂ ಗೌಡ ರವರ ಮನೆ ಮೇಲೆ ಹಲ್ಲೆ ನಡೆದಿತ್ತು. ಮೊದಮೊದಲು ಈ ಘಟನೆಯನ್ನು ಖಂಡಿಸಿ ದ ರೀತಿ ಮಾತನಾಡಿದ ಕುಮಾರಸ್ವಾಮಿ ಅವರು ಇದೀಗ ಜೆಡಿಎಸ್ ಕಾರ್ಯಕರ್ತರ ಬೆಂಬಲಕ್ಕೆ ನಿಂತಂತೆ ಕಾಣುತ್ತದೆ. ಅವರ ಹೇಳಿಕೆಗಳನ್ನು ನೋಡಿದರೆ ಜೆಡಿಎಸ್ ಕಾರ್ಯಕರ್ತರದ್ದು ಯಾವುದೇ ತಪ್ಪು ಇಲ್ಲ ಎಂಬ ಮಾತು ಸಹ ಕೇಳಿ ಬಂದಿದೆ.

ಅಷ್ಟಕ್ಕೂ ವಿಷಯದ ಮೂಲವೇನು??

ಪ್ರೀತಂ ಗೌಡ ರವರ ಮನೆ ಮೇಲೆ ದಾಳಿ ನಡೆದ ತಕ್ಷಣ ಪ್ರತಿಯೊಬ್ಬ ರಾಜಕೀಯ ನಾಯಕರು ಈ ದಾಳಿಯನ್ನು ಖಂಡಿಸಿ ದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಲವಾರು ನಾಯಕರು ಈ ವಿಷಯವನ್ನು ಖಂಡಿಸಿ ಪ್ರೀತಂ ಗೌಡ ರವರ ಬೆಂಬಲಕ್ಕೆ ನಿಂತಿದ್ದರು. ಕುಮಾರಸ್ವಾಮಿ ರವರು ಸಹ ಇಂತಹ ಘಟನೆ ಯಾರೇ ಮಾಡಿದರೂ ತಪ್ಪು ಎಂಬಂತೆ ಮಾಧ್ಯಮಗಳ ಮುಂದೆ ಮಾತನಾಡಿದ್ದರು.

ಈ ಘಟನೆಯನ್ನು ಪ್ರೀತಂ ಗೌಡ ರವರು ಮುಖ್ಯಮಂತ್ರಿ ದವರು ಹೇಳಿ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಈ ಆರೋಪಗಳೆಲ್ಲ ಸುಳ್ಳು ಕೇವಲ ಅಭಿಮಾನಿಗಳು ಯಾವುದೇ ಮಾಹಿತಿ ಇಲ್ಲದೆ ನೇರವಾಗಿ ಪ್ರೀತಂ ಗೌಡ ರವರ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂಬಂತೆ ಕುಮಾರಸ್ವಾಮಿ ರವರು ತನಿಖೆಗೆ ಆದೇಶ ಸುತ್ತೇನೆ ಎಂದು ಜಾರಿಕೊಂಡಿದ್ದಾರು.

ಆದರೆ ಇದ್ದಕ್ಕಿದ್ದ ಹಾಗೆ ಹಾಸನದಲ್ಲಿ ಪ್ರೀತಮ್ ಗೌಡ ನಿವಾಸ ಮೇಲೆ ದಾಳಿಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಎಂಬ ಬಾಂಬ್ ಸಿಡಿಸಿದ್ದಾರೆ ಹಾಗೂ ಈ ಮೂಲಕ ಗೂಂಡ ಕಾರ್ಯಕರ್ತರ ಬೆಂಬಲಕ್ಕೆ ನಿಂತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜೆಡಿಎಸ್ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಅವರನ್ನು ಪ್ರಚೋದಿಸುತ್ತಿದ್ದಾರೆ. ಆದ ಕಾರಣವೇ ಹಲ್ಲೆ ನಡೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಜೆಡಿಎಸ್ ಬೆಂಬಲಕ್ಕೆ ನಿಂತು ಕುಮಾರಸ್ವಾಮಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.

Post Author: Ravi Yadav