ಸೋತ ನಂತರ ಉಲ್ಟಾ ಹೊಡೆದ ಕುಮಾರಸ್ವಾಮಿ: ಕುಮಾರಣ್ಣನ ಹೊಸ ನಾಟಕ ಶುರು

ಸೋತ ನಂತರ ಉಲ್ಟಾ ಹೊಡೆದ ಕುಮಾರಸ್ವಾಮಿ: ಕುಮಾರಣ್ಣನ ಹೊಸ ನಾಟಕ ಶುರು

ರಾಜ್ಯದಲ್ಲಿ ಬಜೆಟ್ ಅಧಿವೇಶನಕ್ಕೆ ಮುನ್ನ ತಲ್ಲಣ ಸೃಷ್ಟಿಸಿದೆ ಆಡಿಯೋ ಕ್ಲಿಪ್ ನ ಬಗ್ಗೆ ಇದ್ದಕ್ಕಿದ್ದ ಹಾಗೆ ಕುಮಾರಸ್ವಾಮಿ ರವರು ಉಲ್ಟಾ ಹೊಡೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿರವರ ಯು ಟರ್ನು ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಸೋತ ನಂತರ ಕುಮಾರಸ್ವಾಮಿ ಅವರು ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಜನರು ಕಿಡಿ ಕಾರಲು ಆರಂಭಿಸಿದ್ದಾರೆ.

ನಿನ್ನೆಯಷ್ಟೇ ಬಿ ಎಸ್ ಯಡಿಯೂರಪ್ಪ ನವರು ಆಪರೇಷನ್ ಕಮಲದ ಪ್ರಯತ್ನ ಮಾಡಿದ್ದಾರೆ ಹಾಗೂ ನಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಆಡಿಯೋ ಕ್ಲಿಪ್ ರಿಲೀಸ್ ಮಾಡಿ ಮಾಧ್ಯಮಗಳ ಮುಂದೆ ಬೊಬ್ಬೆ ಹೊಡೆದಿದ್ದ ಕುಮಾರಸ್ವಾಮಿ ರವರು, ಸ್ಪೀಕರ್ ರವರಿಗೆ ದೂರು ಸಲ್ಲಿಸಿದ್ದರು ಆದರೆ ರಮೇಶ್ ಕುಮಾರ್ ರವರು ಕುಮಾರಸ್ವಾಮಿ ಅವರ ಮಾತಿಗೆ ಸೊಪ್ಪು ಹಾಕದೆ ಸತ್ಯದ ಪರವಾಗಿ ತೀರ್ಪನ್ನು ನೀಡಿ ಆಡಿಯೋ ದಲ್ಲಿ ಮಾತನಾಡಿರುವ ವ್ಯಕ್ತಿ ಯಡಿಯೂರಪ್ಪನವರು ಅಲ್ಲ ಎಂದು ಸತ್ಯ ಹೊರ ಹಾಕಿದ್ದರು.

ಇದಾದ ನಂತರ ಆಡಿಯೋ ಕ್ಲಿಪ್ ರೆಕಾರ್ಡ್ ಆದ ಮೊಬೈಲ್ ಆಪರೇಷನ್ ಕಮಲ ನಡೆದಿದೆ ಎನ್ನಲಾಗಿದ್ದ ದಿನ ಬೆಂಗಳೂರಿನಲ್ಲಿ ಇರುವುದು ಕಂಡು ಬಂದಿತ್ತು ಈ ಎಲ್ಲ ವಿದ್ಯಮಾನಗಳಿಂದ ಕುಮಾರಸ್ವಾಮಿ ರವರು ಶಿವ ಗೌಡ ನಾಯಕ ರವರ ವಿರುದ್ಧ ಸಿಡಿದೆದ್ದು, ನಿನ್ನನ್ನು ನಂಬಿ ನಾನು ತಪ್ಪು ಮಾಡಿದೆ. ನಂಬಿಕಸ್ಥ ಶಾಸಕರನ್ನು ನೀನು ಕರೆ ತಂದಿಲ್ಲ ಎಂದು ಕಿಡಿ ಕಾರಿದ್ದರು ಈ ಎಲ್ಲಾ ವಿದ್ಯಮಾನಗಳ ಬಳಿಕ ಅದು ತಪ್ಪು ಎಂದು ಒಪ್ಪಿಕೊಳ್ಳುವ ಬದಲು ಕುಮಾರಸ್ವಾಮಿ ಅವರು ಯು ಟರ್ನ್ ಹೊಡೆದಿದ್ದಾರೆ.

ಇಂದು ಮಂಗಳೂರಿನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ರವರು ನಾನು ಆಡಿಯೋ ಕ್ಲಿಪ್ ರಿಲೀಸ್ ಮಾಡಿರುವುದು ನಿಜ ಆದರೆ ಆಡಿಯೋ ಕ್ಲಿಪ್ ನಲ್ಲಿ ಇರುವುದು ಬಿಎಸ್ ಯಡಿಯೂರಪ್ಪನವರ ಧ್ವನಿ ಎಂದು ನಾನು ಎಲ್ಲಿಯೂ ಹೇಳಿಕೆ ನೀಡಿಲ್ಲ ಬದಲಾಗಿ ಸುಪ್ರೀಂಕೋರ್ಟ್ ಜಡ್ಜ್ ಸ್ಪೀಕರ್ ಅವರ ಹೆಸರನ್ನು ಆಡಿಯೋ ಕ್ಲಿಪ್ ನಲ್ಲಿ ಬಳಸಲಾಗಿರುವ ಕಾರಣ ತನಿಖೆ ನಡೆಸಬೇಕೆಂದು ಸ್ಪೀಕರ್ ಅವರಿಗೆ ದೂರು ನೀಡಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ.

ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಕೆಣಕಿ ರುವ ಕುಮಾರಸ್ವಾಮಿ ರವರು ನರೇಂದ್ರ ಮೋದಿ ರವರು ಸಮಗ್ರ ತನಿಖೆಗೆ ಆದೇಶಿಸಲು ಎಂದು ಒತ್ತಾಯ ಮಾಡಿದ್ದಾರೆ ಆದರೆ ಕುಮಾರಸ್ವಾಮಿ ರವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಕೇವಲ 24 ಗಂಟೆಗಳ ಹಿಂದೆ ನೀಡಿದ ಹೇಳಿಕೆಯನ್ನು ತಿರುಚಿ ಹೇಳಿಕೆ ನೀಡುವುದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಜನರು ರೊಚ್ಚಿಗೆದ್ದಿದ್ದಾರೆ.