ಗೆದ್ದು ಬೀಗಿದ ಬಿಎಸ್ವೈ- ಮಂಡಿಯೂರಲೇ ಬೇಕು ಕುಮಾರಣ್ಣ !! ಕ್ಷಮೆ ಕೇಳಿ ಸಿಎಂ

ಗೆದ್ದು ಬೀಗಿದ ಬಿಎಸ್ವೈ- ಮಂಡಿಯೂರಲೇ ಬೇಕು ಕುಮಾರಣ್ಣ !! ಕ್ಷಮೆ ಕೇಳಿ ಸಿಎಂ

ಬಜೆಟ್ ಮಂಡಿಸುವ ಮುನ್ನ ಕುಮಾರಸ್ವಾಮಿ ರವರು ಸಿಡಿಸಿದ ಬಾಂಬ್ ಗೆ ಕುಮಾರಸ್ವಾಮಿ ರವರಿಗೆ ಈಗಾಗಲೇ ಭಾರೀ ಮುಖಭಂಗ ಉಂಟಾಗಿದೆ. ಆಡಿಯೋ ಕ್ಲಿಪ್ ಬೋಗಸ್ ಎಂಬುದು ಜನರ ಮುಂದೆ ಸಾಬೀತಾಗಿದೆ. ಇನ್ನು ಈ ಪ್ರಕರಣದಲ್ಲಿ ಬಿ ಎಸ್ ವೈ ರವರಿಗೆ ತಲೆಬಾಗಲೇ ಬೇಕಾದ ಪರಿಸ್ಥಿತಿ ಕುಮಾರಸ್ವಾಮಿ ರವರಿಗೆ ಎದುರಾಗಿದೆ. ಇದರಿಂದ ತಲೆ ಕೆಡಿಸಿಕೊಂಡಿರುವ ಕುಮಾರಸ್ವಾಮಿ ರವರು ಶಿವ ಗೌಡನ ಪಾಟೀಲ್ ರವರ ಮೇಲೆ ಸಿಡಿದೆದ್ದಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಕೇಳಿದರೆ ಕುಮಾರಸ್ವಾಮಿ ಅವರು ಕ್ಷಮೆ ಕೇಳಲೇಬೇಕು ಎಂದು ನೀವು ಹೇಳುತ್ತೀರಿ ಒಮ್ಮೆ ಸಂಪೂರ್ಣ ಓದಿ.

ಇಡೀ ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನು ಮೂಡಿಸಿದ್ದ ಆಡಿಯೋ ಕ್ಲಿಪ್ ಪ್ರಕರಣಕ್ಕೆ ಕೆಲವೇ ಕೆಲವು ಗಂಟೆಗಳ ಹಿಂದೆ ಹೊಸ ಟ್ವಿಸ್ಟ್ ಸಿಕ್ಕಿತ್ತು. ನಕಲಿ ಆಡಿಯೋ ಕ್ಲಿಪ್ ಎಂಬುದಕ್ಕೆ ಮತ್ತಷ್ಟು ಸಾಕ್ಷಿಗಳು ಹೊರಬಂದಿದ್ದವು. ಇದರಿಂದ ಸಾಮಾನ್ಯವಾಗಿ ಕುಮಾರಸ್ವಾಮಿ ರವರಿಗೆ ಇನ್ನಿಲ್ಲದ ಮುಜುಗರ ಎದುರಾಗಿತ್ತು. ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತಾ?

ಆಡಿಯೋ ರಿಲೀಸ್ ಮುಗಿದ ಬಳಿಕ, ಆಡಿಯೋ ಕ್ಲಿಪ್ ರಿಲೀಸ್ ಮಾಡಿದ ಶರಣ ಗೌಡರ ಮೊಬೈಲ್ ಲೊಕೇಶನ್ ಆಪರೇಷನ್ ಕಮಲ ನಡೆದಿದೆ ಎನ್ನಲಾಗಿದ್ದ ಸೋಮವಾರದ ದಿನ ಬೆಂಗಳೂರಿನಲ್ಲಿ ಇತ್ತು ಎಂದು ದಾಖಲೆ ಪತ್ತೆಯಾಗಿದೆ. ಇದರಿಂದ ಸಾಮಾನ್ಯವಾಗಿ ಫೆಬ್ರವರಿ 7ರಂದು ನಡುರಾತ್ರಿ 12 ಗಂಟೆಗೆ ದೇವದುರ್ಗ ಕ್ಕೆ ಹೇಗೆ ಹೋಗಿದ್ದರು ಎಂಬ ಪ್ರಶ್ನೆ ಮಾಧ್ಯಮಗಳ ಮುಂದೆ ಹೊರಬಿದ್ದಿದೆ.

ಇದರಿಂದ ಈ ಪ್ರಕರಣವು ಸುಳ್ಳು ಎಂದು ಸಾಬೀತಾಗಿತ್ತು, ತದನಂತರ ಶರಣಗೌಡ ರವರನ್ನು ಕುಮಾರಸ್ವಾಮಿ ರವರ ಬಳಿ ಕರೆತಂದಿದ್ದ ಶಿವನಗೌಡ ನಾಯಕ್ ರ ಮೇಲೆ ಕುಮಾರಸ್ವಾಮಿ ರವರು ಮುಗಿಬಿದ್ದಿದ್ದು ನಿನ್ನನ್ನು ನಂಬಿ ನಾನು ಕೆಟ್ಟ ಎಂದು ಶಿವನ ಗೌಡ ನಾಯಕ್ ರವರಿಗೆ ಕಾಸ್ಟ್ ತೆಗೆದುಕೊಂಡಿದ್ದಾರೆ. ಇಷ್ಟು ಸಾಲದು ಎಂಬಂತೆ ನಿನ್ನೆ ಸಂಜೆ ಶಿವನಗೌಡ ನಾಯಕ್ ಅವರು ಯಡಿಯೂರಪ್ಪನವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದಾರೆ.

ಇದನ್ನು ಕೇಳಿ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ ರವರು, ನಂಬಿಕಸ್ಥ ಜನರನ್ನು ನನ್ನ ಬಳಿ ಕರೆದುಕೊಂಡು ನೀನು ಬಂದಿದ್ದೆ ಎಂದು ನಾನು ನಂಬಿದ್ದೆ ಆದರೆ ನೀನು ನನಗೆ ದ್ರೋಹ ಬಗೆದಿದ್ದೀಯ ಎಂದು ಶಿವನಗೌಡ ಪಾಟೀಲ ರವರ ಮೇಲೆ ಹರಿಹಾಯ್ದಿದ್ದಾರೆ. ಈ ಮೂಲಕ ಈ ಆಡಿಯೋ ಕ್ಲಿಪ್ ನಕಲಿ ಎಂದು ಕುಮಾರಸ್ವಾಮಿ ರವರಿಗೆ ತಿಳಿದು ಬಂದಿದೆ ಎನ್ನಲಾಗಿದೆ. ನಕಲಿ ಎಂದು ತಿಳಿದು ಬಂದ ತಕ್ಷಣ ಶಿವನಗೌಡ ನಾಯಕ್ ರವರಿಗೆ ಕರೆ ಮಾಡಿ ಕುಮಾರಸ್ವಾಮಿ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೇವಲ ಆಡಿಯೋ ಕ್ಲಿಪ್ ಕೇಳಿ ದೇಶದ ಪ್ರಧಾನಿ ಇಂದ ಹಿಡಿದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ವರೆಗೂ ಆರೋಪಗಳ ಮೇಲೆ ಆರೋಪಗಳನ್ನು ಹೊರಿಸಿ ಟೀಕೆ ಮಾಡಿದ ಕುಮಾರಸ್ವಾಮಿ ಅವರು ಈಗ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ರಾಜಕೀಯದಲ್ಲಿ ಈಗ  ರಾಜಕೀಯ  ನಾಯಕರಿಗೆ  ಅಭ್ಯಾಸವಾಗಿಬಿಟ್ಟಿದೆ. ಕೇವಲ ಒಂದು ಆಡಿಯೋ ಕ್ಲಿಪ್  ಮುಂದಿಟ್ಟುಕೊಂಡು ದೇಶದ ಪ್ರಧಾನಿಯನ್ನು ಟೀಕಿಸಿದ ಕುಮಾರಸ್ವಾಮಿ ರವರ ನಡೆಗೆ  ಬಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಸತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ ಕುಮಾರಸ್ವಾಮಿ ಅವರು ಮತ್ತೊಮ್ಮೆ ಯಡಿಯೂರಪ್ಪನವರ ಮುಂದೆ ಮಂಡಿಯೂರಿ ದಂತಾಗಿದೆ ಸತ್ಯ ಹೊರ ಬಂದ ಕಾರಣ ಕುಮಾರಸ್ವಾಮಿ ರವರು ಕ್ಷಮೆ ಕೇಳದೆ ಬೇರೆ ದಾರಿಯಿಲ್ಲ ಇಲ್ಲವಾದಲ್ಲಿ ಮತ್ತಷ್ಟು ಜನರ ಕೆಂಗಣ್ಣಿಗೆ ಕುಮಾರಸ್ವಾಮಿ ರವರು ಗುರಿಯಾಗಲಿದ್ದಾರೆ. ನಿನ್ನೆಯಷ್ಟೇ ಸ್ಪೀಕರ್ ಅವರು ಸಹ ಇದು ಕುಮಾರ ಯಡಿಯೂರಪ್ಪನವರ ಧ್ವನಿಯಲ್ಲ ಎಂದು ಸತ್ಯದ ಪರವಾಗಿ ತೀರ್ಪು ನೀಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.