ದೋಸ್ತಿ ಸರ್ಕಾರಕ್ಕೆ ಆಡಿಯೋ ಶಾಕ್ ಕೊಟ್ಟ ಕೈ ಶಾಸಕ: ಏರುತ್ತಿದೆ ಅತೃಪ್ತರ ಸಂಖ್ಯೆ

ದೋಸ್ತಿ ಸರ್ಕಾರಕ್ಕೆ ಆಡಿಯೋ ಶಾಕ್ ಕೊಟ್ಟ ಕೈ ಶಾಸಕ: ಏರುತ್ತಿದೆ ಅತೃಪ್ತರ ಸಂಖ್ಯೆ

ರಾಜ್ಯ ರಾಜಕಾರಣವು ಯಾವ ಕ್ಷಣದಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಪ್ರತಿಬಾರಿಯೂ ಸಾಮಾನ್ಯ ಜನರು ಊಹಿಸಿದಂತೆ ಏನು ನಡೆಯುತ್ತಿಲ್ಲ ಬದಲಾಗಿ ಪ್ರತಿ ಬಾರಿಯೂ ಹೊಸ ತಿರುವನ್ನು ಪಡೆದುಕೊಂಡು ರಾಜ್ಯ ರಾಜಕಾರಣವು ಮತ್ತಷ್ಟು ಕುತೂಹಲವನ್ನು ಕೆರಳಿಸುತ್ತ ಮುಂದೆ ಸಾಗಿದೆ. ನಿನ್ನೆಯಷ್ಟೇ ಕುಮಾರಸ್ವಾಮಿ ರವರು ಆಪರೇಷನ್ ಕಮಲದ ಆಡಿಯೋ ಕ್ಲಿಪ್ ರಿಲೀಸ್ ಮಾಡಿದ್ದರು ಆದರೆ ಸ್ಪೀಕರ್ ರವರು ಇದು ಯಡಿಯೂರಪ್ಪನವರ ಧ್ವನಿ ಅಲ್ಲ ಎಂದು ಕುಮಾರಸ್ವಾಮಿ ರವರ ಅರ್ಜಿಯನ್ನು ತಿರಸ್ಕರಿಸಿ ಮುಖಭಂಗ ಉಂಟು ಮಾಡಿದ್ದರು.

ಆದರೆ ಇದೀಗ ಮತ್ತೊಂದು ಆಡಿಯೋ ಕ್ಲಿಪ್ ರಿಲೀಸ್ ಆಗಿದ್ದು , ಬಿಜೆಪಿ ಪಕ್ಷಕ್ಕೆ ಶಾಕ್ ನೀಡುವ ಬದಲಾಗಿ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದೆ. ಇದರಿಂದ ಅತೃಪ್ತರ ಸಂಖ್ಯೆ ಯು ಮತ್ತಷ್ಟು ಏರಿಕೆಯಾಗುತ್ತಿರುವ ಅಂಶ ಬಯಲಾಗಿದ್ದು ದೋಸ್ತಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಫೆಬ್ರವರಿ 15ನೇ ತಾರೀಖಿನಂದು ರಾಜ್ಯಸರ್ಕಾರ ಮಂಡಿಸಿದ ಬಜೆಟ್ ಅನುಮೋದನೆ ಪಡೆಯಲು ಪ್ರತಿಯೊಬ್ಬ ಶಾಸಕರು ಮತ ನೀಡಬೇಕಾ ಗುತ್ತದೆ. ಇಂತಹ ಸಮಯದಲ್ಲಿ ಈ ಆಡಿಯೋ ಕ್ಲಿಪ್ ವೈರಲ್ ಆಗಿದ್ದು ಕೈ ಶಾಸಕರಾಗಿರುವ ಮಹೇಶ್ ಕುಮಟಳ್ಳಿ ರವರು ಮಾತನಾಡಿರುವ ಈ ಮಾತುಗಳು ರಾಜ್ಯರಾಜಕಾರಣದಲ್ಲಿ ತಲ್ಲಣಗಳನ್ನು ಸೃಷ್ಟಿಸಿವೆ.

ಅಥಣಿ ಕ್ಷೇತ್ರದ ಶಾಸಕರಾಗಿರುವ ಮಹೇಶ್ ರವರು ತಮ್ಮ ಆಪ್ತರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುವಾಗ ಪಕ್ಷದ ನಿಷ್ಠೆ ಗಿಂತ ಸ್ವಾಮಿ ರವರ ನಿಷ್ಠೆ ದೊಡ್ಡದು ತಾನು ಶಾಸಕನಾಗಲು ರಮೇಶ್ ಜಾರಕಿಹೊಳಿ ರವರು ಕಾರಣ. ಅವರು ತುಂಬಾ ಒಳ್ಳೆಯವರು ತಾನು ಕೇವಲ ಎಂಟು ತಿಂಗಳು ಶಾಸಕನಾಗಿ ಇದ್ದರೂ ಪರವಾಗಿಲ್ಲ ಏನು ಬೇಕಾದರೂ ಆಗಲಿ ನಾನು ಜಾರಕಿಹೊಳಿ ಅವರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ಆಡಿದ್ದಾರೆ.

ಈ ಮಾತನ್ನು ಕೇಳಿಸಿಕೊಂಡು ಇರುವ ದೋಸ್ತಿ ಸರಕಾರಕ್ಕೆ ಬಿಗ್ ಶಾಕ್ ಎದುರಾಗಿದ್ದು ದಿನೇದಿನೇ ಅತೃಪ್ತರು ಕೈಮೀರಿ ಹೋಗುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ ಒಂದು ವೇಳೆ ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ಗೆ ಅನುಮೋದನೆ ಸಿಗದೇ ಇದ್ದಲ್ಲಿ, ಮುಂದೇನು ಕಥೆ ಎಂಬ ಪ್ರಶ್ನೆ ಎದುರಾಗುತ್ತದೆ.