ಉಗ್ರರ ಬೇಟೆಯಾಡಲು ಪ್ರತ್ಯೇಕ ಬ್ರಹ್ಮಾಸ್ತ್ರ: ಮತ್ತಷ್ಟು ಬಲಗೊಂಡಿತು ಭಾರತೀಯ ಸೇನೆ

ಉಗ್ರರ ಬೇಟೆಯಾಡಲು ಪ್ರತ್ಯೇಕ ಬ್ರಹ್ಮಾಸ್ತ್ರ: ಮತ್ತಷ್ಟು ಬಲಗೊಂಡಿತು ಭಾರತೀಯ ಸೇನೆ

ಭಾರತ ದೇಶವು ನೆರೆಹೊರೆಯ ದೇಶಗಳಿಂದ ಹಲವಾರು ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಭಾರತದ ನೆರೆಹೊರೆಯ ಎರಡು ರಾಷ್ಟ್ರಗಳು ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುತ್ತಾರೆ. ಇನ್ನು ನೆರೆಯ ಪಾಕಿಸ್ತಾನ ದೇಶ ಸದಾ ಕಾಲ್ಕೆರೆದು ಜಗಳಕ್ಕೆ ನಿಂತಿರುತ್ತದೆ. ನೇರವಾಗಿ ಹೋರಾಡಲು ಸಾಧ್ಯವಾಗದೆ ನುಸುಳುಕೋರರಾಗಿ ಉಗ್ರರು ಭಾರತ ಪ್ರವೇಶಿಸಿ ಶಾಂತಿ ಕದಡಲು ಪ್ರಯತ್ನ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅದೃಷ್ಟವಶಾತ್ ಯಾವುದೇ ನುಸುಳುಕೋರರು ಭಾರತದ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಆದರೆ ಗಡಿಯಲ್ಲಿ ಇಂದಿಗೂ ಸಹ ಗುಂಡಿನ ಸದ್ದು ಕಡಿಮೆಯಾಗಿಲ್ಲ. ಸದಾ ಪಾಕ್ ನುಸುಳು ಕೋರರು ಅನ್ನು ತಡೆಗಟ್ಟಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿದ್ದ ಸೈನಿಕರಿಗೆ ಮತ್ತೊಂದು ಅಸ್ತ್ರ ಸೇರಿಕೊಂಡಿದ್ದು, ಉಗ್ರರ ಬೇಟೆ ಮತ್ತಷ್ಟು ಸುಲಭವಾಗಲಿದೆ.

ಭಾರತೀಯ ಸೈನಿಕರು ಹಳೆಯ ತಂತ್ರಜ್ಞಾನ ಬಳಸಿ ಉಗ್ರರ ನ್ನು ತಡೆಗಟ್ಟುವುದು ಬಹಳ ಕ್ಲಿಷ್ಟಕರವಾದ ಸಂಗತಿಯಾಗಿತ್ತು. ಆದ ಕಾರಣ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ ಪ್ರತ್ಯೇಕವಾಗಿ ಬಳಸಲು ಸ್ನೈಪರ್ ರೈಫಲ್ ಬಳಕೆ ಮಾಡಲು ನಿರ್ಧರಿಸಿ ಕಳೆದ ಜನವರಿ ತಿಂಗಳಲ್ಲಿ ಖರೀದಿಸಲು ಟೆಂಡರ್ ಕರೆದಿತ್ತು. ಇದಕ್ಕೆ ನರೇಂದ್ರ ಮೋದಿ ರವರ ಸರ್ಕಾರ ಅಸ್ತು ಎಂದಿತ್ತು.

ಇದೀಗ ಒಂದು ತಿಂಗಳ ನಂತರ ಭಾರತೀಯ ಸೇನೆಗೆ ಸ್ನೈಪರ್ ರೈಫಲ್ಗಳು ಸೇರಿಕೊಂಡಿದ್ದು ಭಾರತೀಯ ಸೈನಿಕರು ಪಾಕಿಸ್ತಾನದ ಜತೆಗಿನ ಗಡಿಯಲ್ಲಿ ಹೊಸ ಬದುಕು ಗಳನ್ನು ಬಳಸಿ ನುಸುಳುಕೋರರ ತಡೆಗಟ್ಟುವ ಕೆಲಸ ಮಾಡಲಿದ್ದಾರೆ. ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿರುವ ಈ ಬಂದೂಕುಗಳು ಭಾರತೀಯ ಸೇನೆಗೆ ಸೇರ್ಪಡೆಗೊಂಡಿರುವುದು ಸೇನೆಗೆ ಮತ್ತಷ್ಟು ಬಲ ತಂದಿದೆ ಹಾಗೂ ಉಗ್ರರ ಬೇಟೆಯಾಡಲು ಸಹಕಾರಿಯಾಗಲಿದೆ.