ಬಿಗ್ ಬ್ರೇಕಿಂಗ್: ಉಮೇಶ್ ಜಾದವ್ ರಾಜೀನಾಮೆ ಖಚಿತ ಪಡಿಸಿದ ಬಿಜೆಪಿ ಮುಖಂಡ- ಆಪರೇಷನ್ ಕಮಲ ಅಲ್ಲ

ಬಿಗ್ ಬ್ರೇಕಿಂಗ್: ಉಮೇಶ್ ಜಾದವ್ ರಾಜೀನಾಮೆ ಖಚಿತ ಪಡಿಸಿದ ಬಿಜೆಪಿ ಮುಖಂಡ- ಆಪರೇಷನ್ ಕಮಲ ಅಲ್ಲ

ಹಲವಾರು ದಿನಗಳಿಂದ ಕೈ ಶಾಸಕರಾಗಿರುವ ಉಮೇಶ್ ಜಾದವ್ ರವರು ಕಾಂಗ್ರೆಸ್ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ತಿರುಗಿ ಬಿದ್ದಿರುವ ಉಮೇಶ್ ಯಾದವ್ ಅವರು ಕೇವಲ ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಉಳಿದವರನ್ನು ಮಲ್ಲಿಕಾರ್ಜುನ ಖರ್ಗೆ ರವರು ಬೆಳೆಯಲು ಬಿಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ಕಳೆದ ಬಾರಿಯೂ ಸಹ ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ರವರೆ ಕಾರಣ. ಪ್ರತಿಬಾರಿಯೂ ಮಲ್ಲಿಕಾರ್ಜುನ ಖರ್ಗೆ ರವರು ತಮ್ಮ ಮಗನಾದ ಪ್ರಿಯಾಂಕ ಖರ್ಗೆ ರವರನ್ನು ರಕ್ಷಿಸಲು ನಮ್ಮನ್ನು ಗಾಳವಾಗಿ ಬಳಸಿಕೊಳ್ಳುತ್ತಾರೆ. ಒಂದು ವೇಳೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದರೆ ಬೆಳೆಯಲು ಸಾಧ್ಯವಿಲ್ಲ ಎಂದು ಆರೋಪ ಮಾಡುತ್ತಾ ಬಂದಿದ್ದರು.

ಇನ್ನು ಕೆಲವು ದಿನಗಳಿಂದ ಉಮೇಶ್ ಜಾದವ್ ರವರು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಇದಕ್ಕೆ ಪೂರಕವಾಗಿ ಇಂದು ಬಿಜೆಪಿ ಪಕ್ಷದ ಮುಖಂಡರು ಉಮೇಶ್ ಜಾದವ್ ರವರು ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರ ಹಾಕಿದ್ದಾರೆ. ಇನ್ನು ಇದು ಆಪರೇಷನ್ ಕಮಲ ಎಂದು ಸಾಬೀತು ಗೊಂಡಿದೆ ಯಾಕೆಂದರೆ ಸ್ವತಹ ಉಮೇಶ್ ಯಾದವ್ ಅವರು ಮುಂದಿನ ಲೋಕಸಭಾ ಚುನಾವಣೆಯನ್ನು ಮನದಲ್ಲಿ ಇಟ್ಟುಕೊಂಡು ಬಿಜೆಪಿ ಪಕ್ಷ ಸೇರಿಕೊಳ್ಳುವುದಾಗಿ ಹೇಳಿದ್ದಾರೆ ಇದಕ್ಕೂ ದೋಸ್ತಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖಚಿತಗೊಂಡಿದೆ.

ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವರಾಗಿದ್ದ ಬಾಬುರಾವ್ ಚಿಂಚನಸೂರು ರವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಉಮೇಶ್ ಜಾದವ್ ರವರು ಬಿಜೆಪಿ ಪಕ್ಷ ಸೇರಿ ಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ರವರನ್ನು ಎದುರಿಸಲು ಸಿದ್ಧರಾಗಿದ್ದಾರೆ ಫೆಬ್ರವರಿ 17ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.