ಕುಮಾರಸ್ವಾಮಿ ಗೆ ಭಾರೀ ಮುಖಭಂಗ ಬಿ ಎಸ್ ವೈ ಪರ ನಿಂತ ಸ್ಪೀಕರ್

ಕುಮಾರಸ್ವಾಮಿ ಗೆ ಭಾರೀ ಮುಖಭಂಗ ಬಿ ಎಸ್ ವೈ ಪರ ನಿಂತ ಸ್ಪೀಕರ್

ಇಂದು ರಾಜ್ಯದೆಲ್ಲೆಡೆ ಬಜೆಟ್ ಸದ್ದು ಮಾಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಬಜೆಟ್ ಅಧಿವೇಶನಕ್ಕೂ ಮುನ್ನ ಪತ್ರಿಕಾಗೋಷ್ಠಿ ಕರೆದು ಕುಮಾರಸ್ವಾಮಿ ರವರು ಯಾವುದೋ ಒಂದು ಆಡಿಯೋ ರಿಲೀಸ್ ಮಾಡಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಶಾಸಕರನ್ನು ಬಿಜೆಪಿ ಪಕ್ಷದತ್ತ ಸೆಳೆಯಲು ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಆರೋಪ ಕೇಳಿದ ತಕ್ಷಣ ರಾಜ್ಯರಾಜಕಾರಣದಲ್ಲಿ ತಲ್ಲಣ ವೇ ಸೃಷ್ಟಿಯಾಯಿತು. ಒಂದು ಕಡೆ ಬಿಜೆಪಿ ಬೆಂಬಲಿಗರು ಇದು ಸುಳ್ಳು ಆಡಿಯೋ ಕ್ಲಿಪ್ ಎಂದು ವಾದಿಸುತ್ತಿದ್ದರೆ ಇನ್ನೊಂದು ಕಡೆ ಯಡಿಯೂರಪ್ಪನವರನ್ನು ಜೆಡಿಎಸ್ ಬೆಂಬಲಿಗರು ತೇಜೋವಧೆ ನಡೆಸಿದ್ದರು. ಈ ಎಲ್ಲಾ ವಿದ್ಯಮಾನಗಳಿಗೆ ಬಿ ಎಸ್ ಯಡಿಯೂರಪ್ಪ ನವರು ಸಹ ಸರಿಯಾದ ತಿರು ಗೇಟನ್ನು ಕುಮಾರಸ್ವಾಮಿ ರವರಿಗೆ ನೀಡಿದರು.

ಒಂದು ವೇಳೆ ಆಡಿಯೋ ಕ್ಲಿಪ್ ನಲ್ಲಿ ಮಾತನಾಡಿರುವುದು ನಾನು ಎಂದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ನೇರವಾಗಿ ಬಿ ಎಸ್ ಯಡಿಯೂರಪ್ಪನವರು ಸವಾಲನ್ನು ಹೆಸರು. ಇನ್ನು ಆಡಿಯೋ ಕ್ಲಿಪ್ ಹೇಳಿದ ಯಾರಿಗೂ ಇದು ಯಡಿಯೂರಪ್ಪನವರ ಧ್ವನಿ ಎಂದು ಅನಿಸಿರಲಿಲ್ಲ ಬದಲಾಗಿ ಮಿಮಿಕ್ರಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಇಷ್ಟೆಲ್ಲಾ ನಡೆದರೂ ಸುಮ್ಮನಾಗದ ಕುಮಾರಸ್ವಾಮಿ ಅವರು ನೇರವಾಗಿ ಸ್ಪೀಕರ್ ಬಳಿ ದೂರನ್ನು ದಾಖಲಿಸಿದ್ದರು. ಸ್ಪೀಕರ್ ಅವರು ವಿಚಾರಣೆಗಾಗಿ ಆಡಿಯೋ ಕ್ಲಿಪ್ಪನ್ನು ಕೇಳಿದ ನಂತರ ಕುಮಾರಸ್ವಾಮಿ ರವರಿಗೆ ಭಾರಿ ಮುಖಭಂಗ ವಾಗುವ ತೀರ್ಪನ್ನು ನೀಡಿದ್ದಾರೆ ಹಾಗೂ ಈ ಆಡಿಯೋ ಕ್ಲಿಪ್ ನಲ್ಲಿ ಇರುವುದು ಯಡಿಯೂರಪ್ಪನವರ ಧ್ವನಿ ಖಂಡಿತ ಅಲ್ಲ ಎಂದು ಬಿಎಸ್ ಯಡಿಯೂರಪ್ಪ ನವರ ಪರವಾಗಿ ನಿಂತು ತಮ್ಮದೇ ಮೈತ್ರಿಯ ಮುಖ್ಯಮಂತ್ರಿಗಳಿಗೆ ಭಾರಿ ಮುಖಭಂಗ ಉಂಟು ಮಾಡಿದ್ದಾರೆ.

ಪಕ್ಷಭೇದ ಮರೆತು ಜನತೆಗೆ ಸತ್ಯವನ್ನು ತಿಳಿಸಿದ ಸ್ಪೀಕರ್ ಅವರಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಪೀಕರ್ ರಮೇಶ್ ಕುಮಾರ್ ರವರ ಈ ನಡೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು ಕುಮಾರಸ್ವಾಮಿ ರವರಿಗೆ ಭಾರಿ ಮುಖಭಂಗ ಉಂಟಾಗಿದೆ.