ಅಖಾಡಕ್ಕೆ ದೈತ್ಯ ಸ್ವಾಮಿ: ಚುನಾವಣೆಗೂ ಮುನ್ನ ಗಾಂಧಿ ಕುಟುಂಬಕ್ಕೆ ಶಾಕ್ ನೀಡಲು ತಯಾರಿ

ಅಖಾಡಕ್ಕೆ ಸ್ವಾಮಿ: ಚುನಾವಣೆಗೂ ಮುನ್ನ ಗಾಂಧಿ ಕುಟುಂಬಕ್ಕೆ ಶಾಕ್ ನೀಡಲು ತಯಾರಿ

ನರೇಂದ್ರ ಮೋದಿ ರವರು ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಭ್ರಷ್ಟರನ್ನು ಹೊರಗೆಳೆದಿದ್ದಾರೆ. ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಕಳೆದ ಐದು ವರ್ಷಗಳಲ್ಲಿ ಭಾರತದ ಇತಿಹಾಸದಲ್ಲಿ ಕಂಡು ಕೇಳರಿಯದ ಹಲವಾರು ಮಹತ್ವದ ನಿರ್ಧಾರಗಳನ್ನು ನರೇಂದ್ರ ಮೋದಿ ಅವರು ತೆಗೆದುಕೊಂಡಿದ್ದಾರೆ. ಯಾವುದೇ ಮತಗಳ ಬಗ್ಗೆ ಯೋಚಿಸದೆ ಕೇವಲ ದೇಶದ ಹಿತಕ್ಕಾಗಿ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿರುವ ನರೇಂದ್ರ ಮೋದಿ ಅವರಿಗೆ ಮೊದಲಿನಿಂದಲೂ ಸಾತ್ ನೀಡುತ್ತಾ ಬಂದಿರುವುದು ಸುಬ್ರಹ್ಮಣ್ಯಂ ಸ್ವಾಮಿ.

ಈ ಹೆಸರು ಕೇಳಿದರೆ ಸಾಕು ಕಾಂಗ್ರೆಸ್ ಪಾಳಯದಲ್ಲಿ ನಡುಕ ಉಂಟಾಗುತ್ತದೆ. ಪ್ರತಿಬಾರಿಯೂ ಒಂದು ಆರೋಪವನ್ನು ಮಾಡುವ ಮುನ್ನ ಸಾವಿರ ಬಾರಿ ಯೋಚಿಸಿ ಸಾಕ್ಷಿಗಳನ್ನು ಕಲೆ ಹಾಕಿ ಮಾತನಾಡುವ ಸುಬ್ರಹ್ಮಣ್ಯಂ ಸ್ವಾಮಿ ಅವರು ನಿಜವಾಗಲೂ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ನರೇಂದ್ರ ಮೋದಿ ರವರ ಜೊತೆ ಕೈಜೋಡಿಸಿರುವ ಸುಬ್ರಹ್ಮಣ್ಯಂ ಸ್ವಾಮಿ ಅವರು ಪ್ರತಿಯೊಂದು ಪ್ರಕರಣದಲ್ಲಿ ಭ್ರಷ್ಟರನ್ನು ಹೊರಗೆಳೆಯುವ ಸತ ಪ್ರಯತ್ನವನ್ನು ಮಾಡುತ್ತ ಬಂದಿದ್ದಾರೆ.

ಇನ್ನು ಇವರ ಈ ಪ್ರಯತ್ನಗಳಿಗೆ ಫಲವಾಗಿ ಈಗಾಗಲೇ ಹಲವಾರು ಕಾಂಗ್ರೆಸ್ಸಿಗರು ಸೇರಿದಂತೆ ಇನ್ನೂ ಹಲವು ಭ್ರಷ್ಟ ರಾಜಕಾರಣಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಇಷ್ಟು ದಿವಸ ರಾಜಾರೋಷವಾಗಿ ತಿರುಗಾಡುತ್ತಿದ್ದ ಭ್ರಷ್ಟ ನಾಯಕರನ್ನು ಪ್ರಕರಣ ದಾಖಲಿಸಿ ಕಂಬಿಯ ಹಿಂದೆ ಕಳಿಸಲು ಸುಬ್ರಹ್ಮಣ್ಯಂ ಸ್ವಾಮಿ ಅವರು ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ. ಆದರೆ ಭಾರತೀಯ ಕಾನೂನಿನಲ್ಲಿ ಜಾಮೀನು ಎಂಬ ತೊಡಕು ಇರುವುದರಿಂದ ಇಂದು ಹಲವಾರು ನಾಯಕರು ಹೊರಗಿದ್ದಾರೆ ಆದರೆ ಇವರೆಲ್ಲರೂ ಕಂಬಿಯ ಹಿಂದೆ ಹೋಗುವ ದಿನ ದೂರವಿಲ್ಲ.

ಇನ್ನು ಇದರ ಬಗ್ಗೆ ಮಾತನಾಡಿರುವ ಸುಬ್ರಹ್ಮಣ್ಯಂ ಸ್ವಾಮಿ ರವರು ಟೈಮ್ಸ್ ನೌ ನ್ಯೂಸ್ ಸಂಸ್ಥೆಗೆ ಜೊತೆ ಮಾತನಾಡುವಾಗ ಕಾಂಗ್ರೆಸ್ ಪಕ್ಷಕ್ಕೆ ನಡುಕ ಹುಟ್ಟಿಸುವಂತಹ ತಮ್ಮ ನಿರ್ಧಾರಗಳನ್ನು ಹೊರಹಾಕಿದ್ದಾರೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತ ನೀಡಲು ಸುಬ್ರಹ್ಮಣ್ಯ ಸ್ವಾಮಿ ರವರು ತಯಾರಿ ನಡೆಸಿದ್ದಾರೆ. ಇದರಿಂದ ಸಾಮಾನ್ಯವಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ನಡುಕ ಉಂಟಾಗಿದ್ದು ಮುಂದೇನು ಎಂಬ ಚಿಂತೆ ಕಾಡತೊಡಗಿದೆ ಅಷ್ಟಕ್ಕೂ ಸುಬ್ರಹ್ಮಣ್ಯ ಸ್ವಾಮಿ ರವರ ಹೇಳಿರುವುದಾದರೂ ಏನು ಗೊತ್ತಾ??

ನರೇಂದ್ರ ಮೋದಿ ರವರ ಭ್ರಷ್ಟಾಚಾರ ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿರುವ ಸುಬ್ರಹ್ಮಣ್ಯ ಸ್ವಾಮಿ ರವರು ನರೇಂದ್ರ ಮೋದಿ ರವರ ಜೊತೆ ನಾನು ಕೈಜೋಡಿಸಿದ ಕಾರಣ ಹಿಂದೂ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹಾಗೂ ಇನ್ನೂ ಅನೇಕರು ಜಾಮೀನಿನ ಮೇಲೆ ನಡೆದಂತೆ ಮಾಡಿದ್ದೇನೆ. ಒಂದು ವೇಳೆ ನಾನು ಪ್ರಕರಣ ದಾಖಲಿಸಿದ ಇದ್ದಲ್ಲಿ ಇವರೆಲ್ಲರೂ ರಾಜಾರೋಷವಾಗಿ ಪ್ರಕರಣ ವಿಲ್ಲದೆ ತಿರುಗಾಡುತ್ತಿದ್ದರು.

ನನ್ನ ಸತತ ಪ್ರಯತ್ನಗಳಿಂದ ಇಂದು ಗಾಂಧಿ ಕುಟುಂಬ ಬೇಲ್ ಗಾಡಿ ಎಂದು ಹೆಸರು ಪಡೆದಿದೆ ಅದು ಜೈಲ್ ಗಾಡಿ ಆಗಿ ಬದಲಾಗುವ ದಿನಗಳು ದೂರವಿಲ್ಲ ಪಿ ಚಿದಂಬರಂ ಅವರಂತಹ ನಾಯಕರು ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣ ಹಾಗೂ ಐ ಎನ್ ಎಕ್ಸ್ ಮೀಡಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಾರಣ ನಾನು ಸಲ್ಲಿಸಿದ ಅರ್ಜಿ ಆಧಾರದಲ್ಲಿ ವಿಚಾರಣೆಯನ್ನು ಎದುರಿಸುತ್ತ ಬಂದಿದ್ದಾರೆ ಹಾಗೂ ಸದ್ಯ ಅವರು ಜಾಮೀನಿನ ಮೇಲೆ ಹೊರಗಡೆ ತಿರುಗುತ್ತಿದ್ದಾರೆ.

ವಿಚಾರಣೆ ಮತ್ತು ಭ್ರಷ್ಟರನ್ನು ಹಿಡಿಯುವ ಕೆಲಸ ವೇಗವಾಗಿ ಸುಧಾರಣೆಯಾಗಿದೆ ಪ್ರತಿಯೊಂದು ಪ್ರಕರಣಗಳು ಚುರುಕಾಗಿವೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಕೆಲವು ಪ್ರಕರಣಗಳು ಚುರುಕು ಪಡೆದಿಲ್ಲ ಆದರೆ ಇನ್ನು ಕೆಲವೇ ಕೆಲವು ವಾರಗಳಲ್ಲಿ ಅನೇಕ ಕಾಂಗ್ರೆಸ್ಸಿಗರು ಜೈಲಿಗೆ ಹೋಗುವುದನ್ನು ನೀವು ನೋಡುತ್ತೀರಿ ಅದನ್ನು ಬಹಳ ಬೇಗ ಮಾಡುತ್ತೇನೆ ಎಂದು ಕಾಂಗ್ರೆಸ್ಸಿಗರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.