ಅಖಾಡಕ್ಕೆ ಡ್ಯಾಶಿಂಗ್ ಓಪನರ್ ಮೋದಿಗೆ ಆನೆ ಬಲ !

ಅಖಾಡಕ್ಕೆ ಡ್ಯಾಶಿಂಗ್ ಓಪನರ್ ಮೋದಿಗೆ ಆನೆ ಬಲ !

ಮುಂದಿನ ಲೋಕಸಭಾ ಚುನಾವಣೆ ಪ್ರತಿದಿನವೂ ಇಲ್ಲದ ಕುತೂಹಲವನ್ನು ಕೆರಳಿಸುತ್ತಿದೆ. ಒಂದಲ್ಲ ಒಂದು ವಿದ್ಯಮಾನಗಳಿಂದ ಭಾರಿ ಸದ್ದು ಮಾಡುತ್ತಿರುವ ಮುಂದಿನ ಚುನಾವಣೆ ದೇಶದ ಇತಿಹಾಸದಲ್ಲಿಯೇ ಅತಿ ಪ್ರತಿಷ್ಠಿತ ಚುನಾವಣೆ ಎಂದು ಹೆಸರು ಪಡೆದಿದೆ. ಇನ್ನು ಕೆಲವರು ಇದನ್ನು ಮೂರನೇ ಪಾಣಿಪತ್ ಕದನ ಎಂದೇ ಬಿಂಬಿತ ಮಾಡುತ್ತಿದ್ದಾರೆ ಒಂದು ವೇಳೆ ಬಿಜೆಪಿ ಪಕ್ಷ ಗೆದ್ದರೆ ದೇಶ ಉಳಿಯುತ್ತದೆ ಇಲ್ಲವಾದರೆ ಮತ್ತೊಮ್ಮೆ ಪ್ರಗತಿಯ ಹಾದಿಯನ್ನು ಮರೆಯಬೇಕಾಗುತ್ತದೆ ಎಂದು ಬಿಜೆಪಿಗರು ತಮ್ಮ ತಂತ್ರಗಳನ್ನು ಬಳಸುತ್ತಿದ್ದಾರೆ.

ಮೋದಿ ಅಲೆಯು ಪ್ರತಿದಿನವೂ ಸುನಾಮಿಯಂತೆ ಬದಲಾಗುತ್ತಿರುವುದು ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಆದ ಕಾರಣ ಎಲ್ಲರೂ ಒಗ್ಗೂಡಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರು ಮೋದಿ ರವರ ವರ್ಚಸ್ಸು ಕಡಿಮೆಯಾಗಿಲ್ಲ ಎಂಬುದು ವಿರೋಧ ಪಕ್ಷಗಳ ಗೋಳು.

ಇಷ್ಟೆಲ್ಲಾ ರಾಜಕೀಯ ವಿದ್ಯಮಾನಗಳು ಸದ್ದು ಮಾಡುತ್ತಿರುವಾಗ ಭಾರತದ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ರವರು ವಿರೋಧ ಪಕ್ಷಗಳಿಗೆ ಸಡ್ಡು ಹೊಡೆದು ಶಾಕ್ ನೀಡಿದ್ದಾರೆ. ಪ್ರತಿ ಇನಿಂಗ್ಸಲ್ಲಿ ಯು ವಿರೋಧಿಗಳಿಗೆ ಬೆಂಕಿಯ ಉಂಡೆಯಂತೆ ಕಂಡುಬರುತ್ತಿದ್ದ ವೀರೇಂದ್ರ ಸೆಹ್ವಾಗ್ ರವರು ಇಂದು ವಿರೋಧ ಪಕ್ಷಗಳ ಕಣ್ಣಿಗೆ ಆ ರೀತಿ ಕಾಣುತ್ತಿದ್ದಾರೆ.  ಈ ಮೂಲಕ ಮೋದಿ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಮೊದಲಿನಿಂದಲೂ ಮೋದಿ ಅವರ ಪರವಾಗಿ ಧ್ವನಿ ಎತ್ತಿರುವ ವೀರೇಂದ್ರ ಸೆಹ್ವಾಗ್ ರವರು ತಮ್ಮನ್ನು ತಾವು ಹಿಂದೂ ಪರ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಎಷ್ಟೋ ಬಾರಿ ಹಿಂದೂ ಧರ್ಮದ ಕುರಿತು ಧ್ವನಿ ಎತ್ತಿರುವ ವೀರೇಂದ್ರ ಸೆಹ್ವಾಗ್ ರವರು ದಶಕಗಳ ಕಾಲ ಭಾರತೀಯರನ್ನು ಕ್ರಿಕೆಟ್ ನಲ್ಲಿ ರಂಜಿಸಿದ ನಂತರ ಈಗ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಲು ತಾವೇ ಸ್ವತಹ ಅಖಾಡಕ್ಕಿಳಿದಿದ್ದಾರೆ. ಇದು ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಹಾಗೂ ಈ ಮೂಲಕ ಬಿಜೆಪಿ ಪಕ್ಷದ ವರ್ಚಸ್ಸು ಮತ್ತಷ್ಟು ಹೆಚ್ಚಲಿದೆ ಎಂದರೆ ತಪ್ಪಾಗಲಾರದು.

ಅಷ್ಟಕ್ಕೂ ವಿಷಯದ ಮೂಲವೇನು??

ಭಾರತ ತಂಡದ ಖ್ಯಾತ ಕ್ರಿಕೆಟಿಗರ ಆಗಿರುವ ವೀರೇಂದ್ರ ಸೆಹ್ವಾಗ್ ರವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಈ ಸುದ್ದಿ ಹಲವು ಮಾಧ್ಯಮಗಳಲ್ಲಿ ಈಗಾಗಲೇ ಪ್ರಸಾರಗೊಳ್ಳುತ್ತಿದೆ‌. ಇಷ್ಟು ದಿವಸ ತೆರೆಯ ಹಿಂದೆ ನಿಂತುಕೊಂಡು ಮೋದಿ ರವರ ಪರವಾಗಿ ಧ್ವನಿ ಎತ್ತಿದ್ದ ಸೆಹ್ವಾಗ್ ರವರು ಈಗ ಸ್ವತಃ ತಾವೇ ಅಖಾಡಕ್ಕೆ ಇಳಿದಿದ್ದಾರೆ. ಎಡಪಂಥೀಯರಿಗೆ ಹಾಗೂ ವಿಚಾರಧಾರೆ ಯರಿಗೆ ಈಗಾಗಲೇ ಹಲವಾರು ಬಾರಿ ಅವರು ತಿಳಿಸಿರುವ ವೀರೇಂದ್ರ ಸೇವಾಗ್ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಹರಿಯಾಣದಲ್ಲಿ ಈಗಾಗಲೇ ಬಿಜೆಪಿ ಪಕ್ಷ ಭದ್ರವಾಗಿ ನೆಲೆಯೂರಿದೆ, ಇನ್ನು ವೀರೇಂದ್ರ ಸೆಹ್ವಾಗ್ ರವರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡರೆ ಜಾಟ್ ಸಮುದಾಯ ಬಿಜೆಪಿ ಪರ ನಿಲ್ಲಲಿದೆ ಇದರಿಂದ ಹರಿಯಾಣದಲ್ಲಿ ಬಿಜೆಪಿ ಪಕ್ಷವು ಮತ್ತಷ್ಟು ಪ್ರಬಲವಾಗಲಿದೆ ಎಂದು ಹರಿಯಾಣದ ಪಕ್ಷದ ಪ್ರಮುಖ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ ಈ ಮೂಲಕ ಲೋಕಸಭಾ ಕ್ಷೇತ್ರವನ್ನು ಮೋದಿ ಅವರಿಗೆ ಉಡುಗೊರೆಯನ್ನಾಗಿ ನೀಡಲು ಸೆಹ್ವಾಗ್ ರವರು ನಿರ್ಧರಿಸಿದ್ದಾರೆ. ಆದರೆ ಸೆಹ್ವಾಗ್ ರವರನ್ನು ಮತ್ತಷ್ಟು ಬಳಸಿಕೊಳ್ಳಬೇಕು ಎಂಬುದು ಹರಿಯಾಣ ಬಿಜೆಪಿಯ ತಂತ್ರವಾಗಿದೆ.

ಇತರ ಕ್ಷೇತ್ರಗಳಲ್ಲಿಯೂ ಸಹ ಮೋದಿ ರವರ ಪರವಾಗಿ ವೀರೇಂದ್ರ ಸೆಹ್ವಾಗ್ ರವರು  ಪ್ರಚಾರ ಮಾಡುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ಮೂಲಕ ಮತ್ತಷ್ಟು ಮತಗಳನ್ನು ಬೇಟೆಯಾಡುವುದು ಬಿಜೆಪಿ ಪಕ್ಷದ ತಂತ್ರವಾಗಿದೆ. ಕೇವಲ ಒಬ್ಬರು ಸೆಹ್ವಾಗ್ ರವರು ಮಾತ್ರವಲ್ಲದೆ  ಬಿಜೆಪಿ ಇನ್ನು ಹಲವಾರು ಕ್ರೀಡಾಪಟುಗಳು ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿದ್ದು, ಮಹೇಂದ್ರ ಸಿಂಗ್ ಧೋನಿ ಹಾಗೂ ಗೌತಮ್ ಗಂಭೀರ್ ಅವರು ಪ್ರಮುಖರಾಗಿ ಕಂಡುಬರುತ್ತಿದ್ದಾರೆ. ರಾಂಚಿಯಿಂದ ಮಹೇಂದ್ರ ಸಿಂಗ್ ಧೋನಿ ಹಾಗೂ ದೆಹಲಿಯಿಂದ ಗೌತಮ್ ಗಂಭಿರ್ ಅವರು ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳಿವೆ.