ದೀದಿಗೆ ಸುಪ್ರೀಂ ಗುದ್ದು, ಉಲ್ಟಾ ಹೊಡೆದ ಮಮತಾ.

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿವಾದಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಸುಪ್ರೀಂ ಕೋರ್ಟ್ ಪಕ್ಷಿಮ ಬಂಗಾಳದ ಮುಖ್ಯಮಂತ್ರಿಗಳಿಗೆ ಛೀಮಾರಿ ಹಾಕಿದರು ಸಹ ಉಲ್ಟಾ ಹೊಡೆದಿರುವ ಮಮತಾ ರವರು ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಗೆ ತಕ್ಕಂತೆ ನಡೆದುಕೊಂಡಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು??

ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಇಂದು ತೀರ್ಪು ಪ್ರಕಟಿಸಿದೆ. ತೀರ್ಪಿನ ಪ್ರಕಾರ ಪಕ್ಷಿಮ ಬಂಗಾಳದ ಪೊಲೀಸ್ ಕಮಿಷನರ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಈ ಮೂಲಕ ಪಕ್ಷದ ಬಂಗಾಳ ಸರ್ಕಾರಕ್ಕೆ ಪರೋಕ್ಷವಾಗಿ ಚೀಮಾರಿ ಹಾಕಿದೆ. ಒಂದು ಕಡೆ ಸಿಬಿಐ ಅಧಿಕಾರಿಗಳು ತಮ್ಮ ಗೆಲುವನ್ನು ಸಂಭ್ರಮಿಸುತ್ತಿದ್ದರೆ, ಮತ್ತೊಂದು ಕಡೆ ಅವರು ಸಹ ಸಂಭ್ರಮ ಪಡುತ್ತಿದ್ದಾರೆ ಅಲ್ಲ ಸಂಭ್ರಮಪಡುವಂತೆ ನಾಟಕ ಮಾಡುತ್ತಿದ್ದಾರೆ.

ಇತ್ತ ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರಾಗಲು ಏನು ತೊಂದರೆ ಎಂದು ಪ್ರಶ್ನಿಸಿ, ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಮಮತಾ ಅವರಿಗೆ ಸಾಮಾನ್ಯವಾಗಿ ಮುಖಭಂಗ ಎದುರಾಯಿತು, ಆದರೆ ಸಿಬಿಐ ಅಧಿಕಾರಿಗಳ ಉದ್ದೇಶವನ್ನು ತಿರುಚಿದ ಮಮತಾ ರವರು ಹೊಸ ನಾಟಕ ಆರಂಭಿಸಿದ್ದಾರೆ.

ಸಿಬಿಐ ಅಧಿಕಾರಿಗಳು ವಿಚಾರಣೆಗೆ ಪಶ್ಚಿಮ ಬಂಗಾಳಕ್ಕೆ ಬಂದ ತಕ್ಷಣ ಅವರನ್ನು ತಡೆಗಟ್ಟಿ ಬಂಧಿಸಿದ್ದ , ಮಮತಾ ರವರು ಸಿಬಿಐ ಅಧಿಕಾರಿಗಳು ಪಕ್ಷಿಮ ಬಂಗಾಳಕ್ಕೆ ಬಂದಿದ್ದು ಅಧಿಕಾರಿಗಳನ್ನು ಬಂಧಿಸಲು, ಅವರನ್ನು ತಡೆದು ನಾವು ಇಂದು ಸುಪ್ರೀಂ ಕೋರ್ಟ್ ನಲ್ಲಿ ಯು ಸಹ ಜಯ ಗಳಿಸಿದ್ದೇವೆ ಎಂದು ಉಲ್ಟಾ ಹೊಡೆದಿದ್ದಾರೆ.

ನಮಗೆ ವಿಚಾರಣೆಗೆ ಹಾಜರಾಗಲು ಯಾವುದೇ ತೊಂದರೆ ಇಲ್ಲ ಸುಪ್ರೀಂ ಕೋರ್ಟ್ ತೀರ್ಪಿನಂತೆ ನಾವು ವಿಚಾರಣೆಗೆ ಹಾಜರಾಗಲು ಸಿದ್ದರಿದ್ದೇವೆ ಎಂದು ಮಮತಾ ಪದಾಧಿಕಾರಿಗಳು ಹಾಗೂ ಮಮತಾ ಅವರು ತಿಳಿಸಿದ್ದಾರೆ. ಆದರೆ ಎರಡು ದಿಸ ಹೋರಾಟ ಮಾಡಿದ್ದು ಯಾವ ಕಾರಣಕ್ಕೆ ಎಂಬುದನ್ನು ಮರೆತಿರುವ ಮಮತಾ ರವರು ನಾವು ಹೋರಾಟ ಮಾಡಿದ್ದು ಇದೇ ಕಾರಣಕ್ಕೆ, ಬಂಧಿಸದೆ ವಿಚಾರಣೆ ಮಾಡಿದರೆ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಯು ಟರ್ನ್ ಹೊಡೆದಿದ್ದಾರೆ.

Post Author: Ravi Yadav