ಮೋದಿ ಗೆ ಬೆಂಬಲ ಘೋಷಿಸಿದ ಎರಡು ದೊಡ್ಡ ಪಕ್ಷಗಳು

ಮೋದಿ ಗೆ ಬೆಂಬಲ ಘೋಷಿಸಿದ ಎರಡು ದೊಡ್ಡ ಪಕ್ಷಗಳು

ನರೇಂದ್ರ ಮೋದಿ ಎಂಬ ಹೆಸರು ಕೇಳಿದರೆ ಸಾಕು ವಿರೋಧ ಪಕ್ಷಗಳಲ್ಲಿ ನಡುಕ ಆರಂಭವಾಗುತ್ತದೆ. ಸತತ ಹತ್ತು ವರ್ಷಗಳ ಕಾಂಗ್ರೆಸ್ ಅಧಿಕಾರವನ್ನು ಅಂದು ಮೋದಿ ಅಲೆ ಕೊಚ್ಚಿಕೊಂಡು ಹೋಗುವಂತೆ ಮಾಡಿತ್ತು, ಅಂದುಕೊಂಡಂತೆ ಮೋದಿ ಅಧಿಕಾರದ ಗದ್ದುಗೆ ಏರಿದ್ದರು. ಬಿ ಜೆ ಪಿ ಪಕ್ಷವೂ ಬಹುಮತ ಪಡೆದು ಕಾಂಗ್ರೆಸ್ ಪಕ್ಷ ನೆಲಕಚ್ಚಿತ್ತು. ದೇಶದಲ್ಲಿ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು, ಬಿ ಜೆ ಪಿ ಬೆಂಬಲಿಗರು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು. ಇಷ್ಟು ಸಾಲದು ಎಂಬಂತೆ ನರೇಂದ್ರ ಮೋದಿ ರವರ ನಾಯಕತ್ವಕ್ಕೆ ಹಲವಾರು ಪ್ರಾದೇಶಿಕ ಪಕ್ಷಗಳು ಕೈ ಜೋಡಿಸಿ, ಬೆಂಬಲಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು.

ತದ ನಂತರ ನಡೆದದೆಲ್ಲವು ಮೋದಿ ಮಯಾ, ಎಲ್ಲ ಚುನಾವಣೆಯಲ್ಲಿಯೂ ಕೇಸರಿ ಪಕ್ಷ ಗೆದ್ದು ಬೀಗಿತು, ನರೇಂದ್ರ ಮೋದಿ ರವರ ಅಲೆ ಸುನಾಮಿ ಯಾಗಿ ಉತ್ತರ ಪ್ರದೇಶದ ಜನರನ್ನು ಆಕರ್ಷಿಸಿ, ಎಂದು ಕಾಣದಂತೆ ಸೀಟು ಗಳನ್ನೂ ಬಿ ಜೆ ಪಿ ಪಕ್ಷ ಗೆದ್ದು ಬೀಗಿತ್ತು.ಅಧಿಕಾರಕ್ಕೆ ಬಂದಮೇಲೆ ಹಲವು ಕಠಿಣ ನಿರ್ಧಾರದ ಮೂಲಕ ಭ್ರಷ್ಟರ ನಿದ್ದೆಗೆಡಿಸಿ, ತನ್ನೆ ಬೆಂಬಲಿಗರು ಎಂಬುದನ್ನೂ ನೋಡದೇ ಹಲವು  ಭ್ರಷ್ಟ ರಾಜಕಾರಣಿಗಳ ಮೇಲೆ ಕೇಂದ್ರ ಸರ್ಕಾರ ಮುಗಿ ಬಿದ್ದಿತ್ತು.

ಇದೆ ರೀತಿಯ ಕಠಿಣ ನಿರ್ಧಾರಗಳಿಂದ ಮೋದಿ ರವರು ವಿರೋಧ ಪಕ್ಷಗಳ ನಿದ್ದೆ ಗೆಡಿಸಿದ್ದಾರೆ, ಆದ ಕಾರಣದಿಂದ ಮೋದಿ ರವರ ಅಲೆ ಅಲ್ಲ ಅಲ್ಲ ಸುನಾಮಿಯನ್ನು ತಡೆಯಲು, ಗೋಡೆಯಂತೆ ತಾವೇ ೨೨ ಪಕ್ಷದ ನಾಯಕರು ನಿಂತು ಕೊಂಡಿದ್ದಾರೆ. ಇಷ್ಟು ಸಾಲದು ಎಂಬಂತೆ ಇತ್ತೀಚಿಗೆ ಬಿ ಜೆ ಪಿ ಪಕ್ಷದ ಜೊತೆ ಹಲವು ಪಕ್ಷಗಳು ಮೈತ್ರಿಯನ್ನು ತೊರೆದುಕೊಂಡಿದ್ದವು, ಆದರೆ ಮೋದಿ ರವರ ನಾಯಕತ್ವವನ್ನು ಮೆಚ್ಚಿ ಇನ್ನಷ್ಟು ಪಕ್ಷಗಳು ಬಿ ಜೆ ಪಿ ಜೊತೆ ಕೈಜೋಡಿಸಲು ಮುಂದಾಗಿವೆ.ಪಕ್ಷಗಳು ಹಾಗೂ ಖ್ಯಾತ ಸೆಲೆಬ್ರೆಟಿ ಗಳು ಬಿ ಜೆ ಪಿ ಪಕ್ಷದ ಕಡೆ ತಿರುಗಿರುವುದು ವಿರೋಧ ಪಕ್ಷಗಳ ಕಣ್ಣು ಕೆಂಗಾಗುವಂತೆ ಮಾಡಿವೆ.

ಅಷ್ಟಕ್ಕೂ ಆ ಪಕ್ಷಗಳು ಯಾವುವು ಗೊತ್ತಾ?

ಇಡೀ ದೇಶದವನ್ನು ಕೇಸರಿ ಮಯವನ್ನಾಗಿ ಮಾಡಿರುವ ಅಮಿತ್ ಷಾ ಹಾಗು ಮೋದಿ ಜೋಡಿ, ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಅಷ್ಟಾಗಿ ತನ್ನ ಪ್ರಭಾವವನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ, ಇನ್ನು ಮಹಾ ಚುನಾವಣೆಯಲ್ಲಿ ಪ್ರತಿಯೊಂದು ಕ್ಷೇತ್ರಗಳು ಮುಖ್ಯವಾಗಿರುವುದರಿಂದ ಸಾಮಾನ್ಯವಾಗಿ ದಕ್ಷಿಣ ಭರವನ್ನು ವಶಕ್ಕೆ ಪಡೆಯುವುದು ಮೋದಿ ರವರಿಗೆ ಅನಿವಾರ್ಯವಾಗಿತ್ತು. ಅಷ್ಟೇ ಅಲ್ಲದೆ ಹಲವಾರು ಪಕ್ಷಗಳು ಮೈತ್ರಿ ತೊರೆಯುತ್ತಿರುವ ಕಾರಣ ಹೊಸ ತಲೆ ನೋವು ಎದುರಾಗಿತ್ತು ಆದರೆ ಈಗೀಗ ಮೋದಿ ರವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹಾಗು ಮೋದಿ ರವರಿಗೆ ಕನಿಷ್ಠ 50 ಸೀಟುಗಳು ಉಡುಗೊರೆಯಾಗಿ ಸಿಗುವುದು ಬಹುತೇಕ ಖಚಿತವಾಗಿದೆ.

narendra-modi-full-hd-wallpaper

ಆಂಧ್ರ ಪ್ರದೇಶದಲ್ಲಿ ಮೋದಿ ರವರನ್ನು ಬದ್ದ ಶತ್ರುವಂತೆ ಕಾಣುತ್ತಿರುವ ಚಂದ್ರ ಬಾಬು ನಾಯ್ಡು ರವರಿಗೆ ಮರ್ಮಗಾಥವಾಗಿದ್ದು ದಿವಂಗತ ವೈ ಸ್ ರ್ ರವರ ಮಗ ಜಗ ಮೋಹನ್ ರೆಡ್ಡಿ ರವರು ಬಿ ಜೆ ಪಿ ಪಕ್ಷದ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡು ಕಣ್ಣಕ್ಕಿಳಿಯಲಿದ್ದಾರೆ.ಹೀಗಾಗಲೇ ಎಲ್ಲ ಸಮೀಕ್ಷೆಗಳಲ್ಲಿಯೂ ನಾಯ್ಡು ರವರನ್ನು ಮಣ್ಣು ಮುಕ್ಕಿಸಿ ಮುನ್ನುಗಿಟ್ಟಿರುವ ಜಗ ಮೋಹನ್ ರೆಡ್ಡಿ ರವರಿಗೆ ಮೋದಿ ರವರ ವರ್ಚಸ್ಸು ಸೇರಿದಲ್ಲಿ ಇಡೀ ಆಂಧ್ರ ಪ್ರದೇಶ ಕೇಸರಿ ಮಯವಾಗುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ತಮಿಳುನಾಡಿದಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(AIADMK) ರವರು ಮೋದಿ ರವರ ಜೊತೆ ಕೈಜೋಡಿಸಲು ಸಿದ್ಧರಾಗಿದ್ದು ಕಳೆದ ಬಾರಿ 37 ಸೀಟು ಗೆದ್ದು ಬೀಗಿದ್ದ AIADMK ರವರು ಈ ಬಾರಿ ಮೋದಿ ಎಂಬ ಬ್ರಹ್ಮಸ್ತ್ರ ದೊಂದಿಗೆ ಕಣ್ಣಕ್ಕಿಳಿದು ವಿರೋಧ ಪಕ್ಷಗಳಿಗೆ ನಡುಕ ಹುಟ್ಟಿಸಿದ್ದಾರೆ.

ಇಷ್ಟೆಲ್ಲ ರಾಜಕೀಯ ವಿದ್ಯಮಾನಗಳ ಜೊತೆ ನರೇಂದ್ರ ಮೋದಿ ರವರ ಬೆಂಬಲಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ರವರು ನಿಲ್ಲುವುದು ಬಹುತೇಕ ಖಚಿತವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ತಲೈವಾ ಅಭಿಮಾನಿಗಳು ಒಮ್ಮೆ ನಮೋ ಎಂದಲ್ಲಿ ಇಡೀ ತಮಿಳ್ನಾಡು ಕೇಸರಿ ಮಯವಾಗಲಿದೆ. ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಬಿ ಜೆ ಪಿ ಪಕ್ಷ ಭದ್ರವಾಗಿ ನೆಲೆಯೂರುವತ್ತ  ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಚಿಕ್ಕ ಪಕ್ಷಗಳು ಮೋದಿ ರವರ ಕೈಯನ್ನು ಬಿಟ್ಟರೆ, ಕೆಲವು ದೊಡ್ಡ ಪಕ್ಷಗಳು ಮೋದಿ ರವರ ಕೈ ಹಿಡಿದಿವೆ.ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ, ಮೋದಿ ರವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದು ಖಚಿತವಾದಂತೆ ಕಾಣುತ್ತಿದೆ.