ಮಮತಾಗೆ ಮತ್ತೊಂದು ಶಾಕ್, ಮೋದಿ ಗೆ ಷಾಕಿಂಗ್ ವರದಿ ಕಳುಹಿಸಿದ ರಾಜ್ಯಪಾಲ

ದೇಶ ರಾಜಕಾರಣ ಎತ್ತ ಸಾಗುತ್ತಿದೆ ಎಂಬ ಚಿಂತೆಯನ್ನು ಮಮತಾ ರವರು ಇಡೀ ದೇಶದ ಜನರಲ್ಲಿ ಮೂಡುವಂತೆ ಕೇವಲ ಮೋದಿ ರವರನ್ನು ಧೂಷಿಸುವ ಉದ್ದೇಶದಿಂದ ಸಂಬಂಧವೇ ಇಲ್ಲದ ವಿಷಯಗಳಲ್ಲಿ ಮೋದಿ ರವರನ್ನು ಎಳೆದು ತಂದು ಇಂದು ಪಕ್ಷಿಮ ಬಂಗಾಳದಲ್ಲಿ ಅಶಾಂತಿ ನೆಲೆಸುವಂತೆ ರಾಜಕಾರಣ ಮಾಡುತ್ತಿದ್ದಾರೆ. ಇಡೀ ದೇಶವೇ ಇಂದು ಪಕ್ಷಿಮ ಬಂಗಾಳದತ್ತ ತಿರುಗಿ ನೋಡುವಂತೆ ವಿವಾದ ಸೃಷ್ಟಿಸಿ ಜನರಲ್ಲಿ ಅಶಾಂತ ಮನೋಭಾವನೆ ಉಂಟು ಮಾಡಿದ್ದಾರೆ.

ಮೋದಿ ಅಧಿಕಾರಕ್ಕೆ ಬರುವ ಮುನ್ನವೇ ಈ ಶಾರದಾ ಚಿಟ್ ಫಂಡ್ ಹಗರಣ ತನಿಖೆಯನ್ನು ಸಿಬಿಐ ಅಧಿಕಾರಿಗಳು ನಡೆಸುತ್ತಿದ್ದಾರೆ. ಆದರೂ ಈ ಪ್ರಕರಣದಲ್ಲಿ ಮೋದಿ ರವರನ್ನು ಎಳೆದು ತಂದು ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಮಮತಾ ರವರು ಪ್ರಯತ್ನ ಮಾಡುತ್ತಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಸಿಬಿಐ ಅಧಿಕಾರಿಗಳ ರಕ್ಷಣೆಗೆ ಯೋಧರು ಧಾವಿಸಿದ್ದರೆ ಎಂದರೆ ನೀವೇ ಊಹಿಸಿಕೊಳ್ಳಿ ಎಷ್ಟರ ಮಟ್ಟಿಗೆ ಅಶಾಂತಿ ತುಂಬಿ ತುಳುಕುತ್ತಿದೆ ಎಂದು.

ಇಷ್ಟೆಲ್ಲ ವಿದ್ಯಮಾನಗಳ ನಡುವೆ ಸುಪ್ರೀಂ ಕೋರ್ಟ್ ಈ ಪ್ರಕರಣದ ತುರ್ತು ವಿಚಾರಣೆಯನ್ನು ಇಂದು ನಡೆಸಲಿದೆ. ಈ ಪ್ರಕರಣದ ತೀರ್ಪು ಹೊರಬರುವ ಮುನ್ನವೇ ಮಮತಾ ರವರ ವಿರುದ್ದ ಪಕ್ಷಿಮ ಬಂಗಾಳದ ರಾಜ್ಯಪಾಲರು ತಿರುಗಿಬಿದ್ದಿದ್ದು ಮಮತಾ ರವರಿಗೆ ನುಂಗಾಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಮಮತಾ ರವರ ನಡುವಳಿಕೆಯನ್ನು ದೇಶ ವಿರೋಧಿ ಚಟುವಟಿಕೆ ಎಂದು ಅಭಿಪ್ರಾಯ ಪಟ್ಟಿರಿವ ರಾಜ್ಯಪಾಲರು ನರೇಂದ್ರ ಮೋದಿರವರಿಗೆ ಸಂಪೂರ್ಣ ವರದಿಯನ್ನು ಕಳುಹಿಸಿದ್ದಾರೆ.

ಕೆಲವು ಮೂಲ ಅಂಶಗಳ ಪ್ರಕಾರ, ರಾಜ್ಯಪಾಲರು ಸಿಬಿಐ ಸಂಸ್ಥೆಯ ಪರ ಬ್ಯಾಟಿಂಗ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಾಗು ಈ ಮೂಲಕ ದೇಶದ ಪ್ರತಿಷ್ಠಿತ ಸಂಸ್ಥೆಯನ್ನು ಬಂಧಿಸಿ ಮಮತಾ ರವರು ಸರ್ವಾಧಿಕಾರಿ ಧೋರಣೆಯನ್ನು ನಡೆಸಿದ್ದಾರೆ, ಸುಪ್ರೀಂ ಕೋರ್ಟ್ ಆದೇಶಕ್ಕೂ ಕ್ಯಾರೇ ಎನ್ನದೆದೇಶದ ರಕ್ಷಣಾ ಭಾವನೆಗೆ ಧಕ್ಕೆ ತಂದಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಕೇಂದ್ರಕ್ಕೆ ಮಧ್ಯ ಪ್ರವೇಶಿಸುವ ಅಧಿಕಾರವಿದೆ, ಈ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಒತ್ತಾಯಿಸಿದ್ದಾರೆ ಎಂಬ ಅಂಶ ಬಯಲಾಗಿದ್ದು, ಮಮತಾ ರವರು ಸಿಎಮ್ ಕುರ್ಚಿ ಕಳೆದುಕೊಳ್ಳುವುದು ಬಹುತೇಕ ಖಚಿತ ವಾದಂತೆ ಕಾಣುತ್ತಿದೆ

Post Author: Ravi Yadav