ಪ್ರಿಯಾಂಕಾ ವಾದ್ರಾ ಗೆ ಶಾಕ್, ಪತಿ ಜೈಲಿಗೆ?? ಜಾಮೀನು ಪಕ್ಷಕ್ಕೆ ಹೊಸ ಸೇರ್ಪಡೆ !!

ಪ್ರಿಯಾಂಕಾ ವಾದ್ರಾ ಗೆ ಶಾಕ್, ಪತಿ ಜೈಲಿಗೆ?? ಜಾಮೀನು ಪಕ್ಷಕ್ಕೆ ಹೊಸ ಸೇರ್ಪಡೆ !!

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೋನಿಯಾ ಗಾಂಧಿ ರವರ ಕುಟುಂಬಕ್ಕೆ ಬೇಲ್ ಮೇಲೆ ಇರುವ ಕುಟುಂಬ ಎಂಬ ಟೀಕೆ ಮೊದಲಿನಿಂದಲೂ ಕಾಡುತ್ತಿದೆ. ಇಡೀ ಕಾಂಗ್ರೆಸ್ ಪಕ್ಷವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ದೇಶದ ರಾಜಕೀಯವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಕುಟುಂಬಕ್ಕೆ ಈಗ ಮತ್ತೊಂದು ಶಾಕ್ ಎದುರಾಗಿದೆ ಸೋನಿಯಾ ಗಾಂಧಿ ಅಳಿಯ ಬಂಧನವಾಗುವ ಸಾಧ್ಯತೆ ಎದುರಾಗಿದೆ.

ಇತ್ತೀಚೆಗಷ್ಟೇ ಪ್ರಿಯಾಂಕ ಗಾಂಧಿ ಅವರು ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದರು. ರಾಹುಲ್ ಗಾಂಧಿ ರವರು ವಿಫಲವಾದ ಮೇಲೆ ಅವರ ಸ್ಥಾನವನ್ನು ಪ್ರಿಯಾಂಕ ಗಾಂಧಿ ರವರು ತುಂಬಲಿದ್ದಾರೆ ಹಾಗೂ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಬಲ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ಆದರೆ ಪ್ರಿಯಾಂಕ ಗಾಂಧಿ ರವರಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಪ್ರಿಯಾಂಕ ಗಾಂಧಿ ಅವರ ಪತಿ ರಾಬರ್ಟ್ ವಾದ್ರ ರವರು ಬಂಧನವಾಗುವ ಸಾಧ್ಯತೆ ಎದುರಾಗಿದೆ. ರಾಬರ್ಟ್ ವಾದ್ರಾ ರವರಿಗೆ ಸಂಬಂಧಿಸಿದ ಕಂಪನಿ ಲಂಡನ್‌ನ ಬ್ರಿಯಾನ್ಟನ್ ಸ್ಕ್ವೇರ್‌ನಲ್ಲಿ  17 ಕೋಟಿ ರೂ ಮೊತ್ತದ ಆಸ್ತಿ ಖರೀದಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಜನವರಿ 7ರಂದು ಹೊಸ ಪ್ರಕರಣ ದಾಖಲಿಸಿಕೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ್ರಾ ಆಪ್ತರಾಗಿರುವ ಮನೋಜ್ ಅರೋರ ರವರು ಫೆಬ್ರವರಿ 6 ರವರೆಗೆ, ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಇನ್ನು ವಾದ್ರಾ ರವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ಗೆ ಶನಿವಾರ ಸಲ್ಲಿಸಿದ್ದು ಒಂದು ವೇಳೆ ಜಾಮೀನು ಸಿಕ್ಕರೆ ಜಾಮೀನಿನ ಮೇಲೆ ಹೊರ ಓಡಾಡುತ್ತಿರುವ ಗಾಂಧಿ ಕುಟುಂಬದವರ ಸಾಲಿಗೆ ಮತ್ತೊಬ್ಬರ ಸೇರ್ಪಡೆಯಾಗಲಿದ್ದು ರಾಷ್ಟ್ರ ರಾಜಕಾರಣದಲ್ಲಿ ಮತ್ತಷ್ಟು  ತಿರುವು ಕಾಣುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತವೆ. ಈ ಆರೋಪ ಪ್ರಿಯಾಂಕ ವಾದ್ರಾ ರವರ ನಿದ್ದೆಗೆಡಿಸಿದೆ.