ನಮೋ ಹವಾ: ಗಾಂಧಿ ಉತ್ತಮರೋ ಅಥವಾ ನೆಹರು ಉತ್ತಮರೋ ಎಂಬ ಪ್ರಶ್ನೆಗೆ ಬಾಲಕಿ ನೀಡಿದ ಉತ್ತರ ಏನು ಗೊತ್ತಾ??

ನಮೋ ಹವಾ: ಗಾಂಧಿ ಉತ್ತಮರೋ ಅಥವಾ ನೆಹರು ಉತ್ತಮರೋ ಎಂಬ ಪ್ರಶ್ನೆಗೆ ಬಾಲಕಿ ನೀಡಿದ ಉತ್ತರ ಏನು ಗೊತ್ತಾ??

ನರೇಂದ್ರ ಮೋದಿ ರವರು ಅಧಿಕಾರದ ಗದ್ದುಗೆ ಏರಿದ ಕ್ಷಣದಿಂದಲೂ ವಿರೋಧ ಪಕ್ಷಗಳಿಗೆ ನರೇಂದ್ರ ಮೋದಿ ಅವರು ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ನರೇಂದ್ರ ಮೋದಿ ಅವರು ಯಾವುದೇ ಮತಗಳನ್ನು ಗುರಿ ಮಾಡದೆ ಕೇವಲ ದೇಶಕ್ಕಾಗಿ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಇಡೀ ವಿಶ್ವವೇ ನರೇಂದ್ರ ಮೋದಿ ರವರ ಆಡಳಿತವನ್ನು ಕೊಂಡಾಡುವಂತೆ ಮಾಡಿದ್ದಾರೆ.

ಇಡೀ ವಿಶ್ವದಲ್ಲಿ ನರೇಂದ್ರ ಮೋದಿ ಅವರಿಗೆ ಅಭಿಮಾನಿಗಳು ಇದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ ಆದರೆ ಈ ಬಾರಿ ವಿಶ್ವದ ದೊಡ್ಡಣ್ಣ ಎಂದೇ ಹೆಸರಾಗಿರುವ ಅಮೆರಿಕಾ ದೇಶದಲ್ಲಿ  ಬಾಲಕಿಯು ನರೇಂದ್ರ ಮೋದಿ ರವರ ಅಧಿಕಾರದ ವೈಖರಿ ನೋಡಿ ಅವರ ಬಗ್ಗೆ ಆಡಿರುವ ಮಾತು ಕೇಳಿದರೆ ಶಹಭಾಷ್ ಎನ್ನುತ್ತೀರಾ.

ಈ ಬಾಲಕಿಯ ಮೂಲ ಭಾರತೀಯಲಾಗಿದ್ದು ಶಾಲೆಯೊಂದರಲ್ಲಿ ತನಗೆ ಎದುರಾದ ಪ್ರಶ್ನೆಗೆ ನರೇಂದ್ರ ಮೋದಿ ರವರ ಕುರಿತು ಉತ್ತರ ನೀಡಿದ್ದಾರೆ. ಈ ಬಾಲಕಿಯ ಉತ್ತರ ಕೇಳಿದ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಹಾಗೂ ಉತ್ತರ ಕೇಳಿದ ನೆರೆದಿದ್ದ ಜನ ಒಂದು ಕ್ಷಣ ದಂಗಾಗಿದ್ದಾರೆ ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಈ ಬಾಲಕಿಗೆ ಶಾಲೆಯೊಂದರಲ್ಲಿ ಭಾರತದಲ್ಲಿ ಗಾಂಧಿ ಉತ್ತಮರೋ ಅಥವಾ ನೆಹರು ಉತ್ತಮರೋ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಪ್ರಶ್ನೆಗೆ ಈ ಬಾಲಕಿ ಯು ಇಬ್ಬರೂ ನಾಯಕರಿಗಿಂತ ಭಾರತದ ಇಂದಿನ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಉತ್ತಮರು ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿದ ನೆರೆದಿದ್ದ ಜನರು ಒಂದು ಕ್ಷಣ ಬೆರಗಾಗಿದ್ದು, ಅಮೆರಿಕದಲ್ಲಿಯೂ ಸಹ ಮೋದಿ ರವರ ಹವಾ ಮತ್ತಷ್ಟು ಹೆಚ್ಚುತ್ತಿದೆ ಎಂದಿದ್ದಾರೆ.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು ನರೇಂದ್ರ ಮೋದಿ ಅವರ ಕಾರ್ಯವೈಖರಿ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.