ಕೊನೆಗೂ ಬಿಜೆಪಿ ಬೆಲೆ ಅರ್ಥ ಮಾಡಿಕೊಂಡ ಜೆಡಿಎಸ್: ಮೈತ್ರಿಯಲ್ಲಿ ಮತ್ತೊಂದು ಬಿರುಕು

ಕೊನೆಗೂ ಬಿಜೆಪಿ ಬೆಲೆ ಅರ್ಥ ಮಾಡಿಕೊಂಡ ಜೆಡಿಎಸ್: ಮೈತ್ರಿಯಲ್ಲಿ ಮತ್ತೊಂದು ಬಿರುಕು

ಇತ್ತೀಚೆಗೆ ಮೈತ್ರಿ ಸರ್ಕಾರದ ನಡುವಿನ ಹಗ್ಗಜಗ್ಗಾಟ ಗಳು ಹೆಚ್ಚಾಗುತ್ತಿವೆ. ಮೈತ್ರಿ ಸರ್ಕಾರಕ್ಕೆ ಯಾವ ವಿರೋಧಿಗಳು ಅವಶ್ಯಕತೆ ಈಗ ಇಲ್ಲ ಯಾಕೆಂದರೆ ತನ್ನ ಸ್ವ ಪಕ್ಷದಲ್ಲಿಯೇ ಹಲವಾರು ಶಾಸಕರು ಮೈತ್ರಿಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಗೊಂದಲಗಳಿಂದ ಬಳಲುತ್ತಿರುವ ಮೈತ್ರಿಯು ಯಾವ ಕ್ಷಣದಲ್ಲಿ ಬೇಕಾದರೂ ಕೊನೆಗೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇತ್ತೀಚಿಗೆ ಹಲವಾರು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ರವರೆ ನಮ್ಮ ಮುಖ್ಯಮಂತ್ರಿ ಎಂಬ ಮಾತುಗಳನ್ನು ಆಡುವ ಮೂಲಕ ಕುಮಾರ ಸ್ವಾಮಿ ರವರನ್ನು ಕೆಣಕಿ ರಾಜೀನಾಮೆ ಮಾತನ್ನು ಕುಮಾರಸ್ವಾಮಿ ಅವರು ಹಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇಬ್ಬರ ನಡುವೆ ಬಂದು ಸಮಾಧಾನ ಪಡಿಸಿ ಸುಮ್ಮನಾಗಿತ್ತು. ಈ ನಡುವೆ ಇನ್ನೂ ಹಲವಾರು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ರವರ ವಿರುದ್ಧ ಮಾತನಾಡಿದ್ದಾರೆ ಇಷ್ಟು ಸಾಲದು ಎಂಬಂತೆ ಈಗ ಜೆಡಿಎಸ್ ಸಚಿವರಾಗಿರುವ ಪುಟ್ಟರಾಜು ರವರು ಬಿಜೆಪಿ ಪಕ್ಷದ ಬೆಲೆಯನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹತ್ತು ವರ್ಷಗಳ ಹಿಂದೆ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಪಕ್ಷವು 20 ತಿಂಗಳ ಅಧಿಕಾರ ನಡೆಸಿತ್ತು. ಆಗಲೂ ಸಹ ಕುಮಾರಸ್ವಾಮಿ ರವರು ಮುಖ್ಯಮಂತ್ರಿಗಳಾಗಿದ್ದರು. ಆದರೆ ಮೈತ್ರಿ ಧರ್ಮ ಪಾಲನೆಯಲ್ಲಿ ಬಿಜೆಪಿ ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಬಿಜೆಪಿ ಪಕ್ಷದಿಂದ ಸಂಪೂರ್ಣ ಬೆಂಬಲವನ್ನು ತೆಗೆದುಕೊಂಡು ರಾಜ್ಯಕ್ಕೆ ಸುಗಮ ಆಡಳಿತವನ್ನು ನೀಡಿತ್ತು.

ಇದರ ಬಗ್ಗೆ ಪ್ರಸ್ತಾಪಿಸಿರುವ ಜೆಡಿಎಸ್ ಸಚಿವರಾಗಿರುವ ಪುಟ್ಟರಾಜು ರವರು ಹತ್ತು ವರ್ಷಗಳ ಹಿಂದೆ ಬಿಜೆಪಿ ಜೊತೆಗೆ ಇದ್ದ ಮೈತ್ರಿ ಬಹಳ ಸುಗಮವಾಗಿ ಸಾಗಿತ್ತು ಈಗಿನ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ನವರು ಪ್ರತಿಯೊಂದು ವಿಷಯದಲ್ಲಿ ಕ್ಯಾತೆ ತೆಗೆಯುತ್ತಿದ್ದಾರೆ. ನಾವಂತೂ ಮೈತ್ರಿ ಧರ್ಮ ಪಾಲನೆ ಮಾಡುತ್ತಿದ್ದೇವೆ ಆದರೆ ಕಾಂಗ್ರೆಸ್ ನವರು ಬೀದಿ ಬೀದಿಯಲ್ಲಿ ನಿಂತು ಮಾತನಾಡುತ್ತಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸಹ ಎಷ್ಟು ಅಂತ ಸಹಿಸಿಕೊಳ್ಳಲು ಸಾಧ್ಯ ಅವರು ರಾಜೀನಾಮೆ ನೀಡುತ್ತೇನೆ ಎಂಬ ಮಟ್ಟಕ್ಕೆ ಮಾತನಾಡಿರಬೇಕು ಎಂದರೆ ಅವರಿಗೆ ಬೇಸರವಾಗಿ ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.