ಹನುಮಂತಪ್ಪನಿಗೆ ಭರ್ಜರಿ ಆಫರ್ ನೀಡಿದ ಚಾಲೆಂಜಿಂಗ್ ಸ್ಟಾರ್

ಕೆಲವೇ ಕೆಲವು ತಿಂಗಳುಗಳ ಹಿಂದೆ ಸರಿಗಮಪ ರಿಯಾಲಿಟಿ ಶೋನ ಪರದೆಯಲ್ಲಿ ಕುರಿ ಕಾಯುವ ಹುಡುಗನೊಬ್ಬ ಕಾಣಿಸಿಕೊಂಡು ಇಡೀ ಕರ್ನಾಟಕದ ಜನರ ಹೃದಯ ಗೆದ್ದಿದ್ದರು ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವೀಡಿಯೊವನ್ನು ಸ ರಿ ಗ ಮ ಪ ವೇದಿಕೆಯ ಮೇಲೆ ತಂದು ನಿಲ್ಲಿಸಿತ್ತು. ಅಂದು ಇಡೀ ಕರ್ನಾಟಕದ ಜನ ಜೀ ಕನ್ನಡ ವಾಹಿನಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ಈತನ ಸಂಗೀತ ಕಲೆಯನ್ನು ನೋಡಿ ಎಲ್ಲರೂ ಮನಸೋತಿದ್ದರು.

ತನ್ನ ಕುಟುಂಬ ತನ್ನ ಸಂಗೀತ ಕಲೆಯನ್ನು ಬೆಂಬಲಿಸುವ ಯಾವುದೇ ಅವಕಾಶ ಇಲ್ಲದೆ ಇದ್ದರೂ ತನ್ನ ಸ್ವಂತ ಕಲೆಯಿಂದ ಹನುಮಂತಪ್ಪನವರು ಇಲ್ಲಿಯವರೆಗೂ ಬೆಳೆದು ಬಂದಿದ್ದಾರೆ. ಸರಿಗಮಪ ವೇದಿಕೆಯಲ್ಲಿ ಹಾಡಲು ಅವಕಾಶ ಸಿಕ್ಕ ನಂತರ ಇವರ ಜೀವನವೇ ಬದಲಾಗಿ ಹೋಗಿದೆ. ಒಂದು ಹಾಡಿಗೆ ಬರೋಬರಿ ಹದಿನೈದು ಸಾವಿರ ರೂಗಳನ್ನು ಗಳಿಸುತ್ತಿದ್ದರು ಸಹ ಈತನಿಗೆ ಇನ್ನೂ ತನ್ನ ಕುರಿಗಳ ವ್ಯಾಮೋಹ ಬಿಟ್ಟಿಲ್ಲ ತಾನು ನಡೆದು ಬಂದ ಹಾದಿಯನ್ನು ಈ ಹುಡುಗ ಇನ್ನೂ ಮರೆತಿಲ್ಲ ಹಾಗೂ ಮರೆಯುವುದಿಲ್ಲ ಎಂಬುದನ್ನು ಸಾರಿ ಸಾರಿ ಹೇಳಿದ್ದಾನೆ.

ಈ ಎಲ್ಲದರ ನಡುವೆ ಹನುಮಂತಪ್ಪ ನವರಿಗೆ ಈಗ ಮತ್ತೊಂದು ಬಂಪರ್ ಆಫರ್ ದೊರಕಿದೆ ಇತ್ತೀಚೆಗಷ್ಟೇ ಯೋಗರಾಜ್ ಭಟ್ ರವರು ಸಹ ಈತನ ಹಾಡು ಕೇಳಿ ಸಿನಿಮಾದಲ್ಲಿ ಹಾಡಲು ಅವಕಾಶ ನೀಡುವುದಾಗಿ ಘೋಷಿಸಿದ್ದರು ಈಗ ಹನುಮಂತಪ್ಪನವರ ಹಾಡನ್ನು ಕೇಳಿರುವ ಕರ್ನಾಟಕದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಫಿದಾ ಆಗಿದ್ದು ಮತ್ತೊಂದು ಬಂಪರ್ ಆಫರ್ ಘೋಷಿಸುವ ಮೂಲಕ ಹನುಮಂತಪ್ಪನನಿಗೆ ಇನ್ನಿಲ್ಲದ ಸಂತೋಷವನ್ನು ನೀಡಿದ್ದಾರೆ ಹಾಗೂ ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ನಡೆಯ ಮೂಲಕ ಜನರ ಮನ ಕದ್ದಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಒಳ್ಳೆಯ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬುದು ದರ್ಶನ್ ರವರ ವಾದವಾಗಿದೆ ಅದರಂತೆಯೇ ಅವರು ಸಹ ನಡೆದುಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಯಾರ ಬದುಕಿನಲ್ಲೂ ಕಷ್ಟ ಕಾಣಬಾರದು ಎಂಬುದು ಚಾಲೆಂಜಿಂಗ್ ಸ್ಟಾರ್ ರವರ ಕನಸು.

ಇಂತಹ ಸಮಯದಲ್ಲಿ ಕುರಿ ಕಾಯುವ ಹುಡುಗನೊಬ್ಬ ಸರಿಗಮಪ ವೇದಿಕೆಯಲ್ಲಿ ಇಡೀ ಕರ್ನಾಟಕದ ಜನರ ಮನವನ್ನು ತಟ್ಟುತ್ತಿದ್ದಾರೆ ಇದನ್ನು ಕಂಡ ದರ್ಶನ್ ರವರು ತಮ್ಮ ಬಹು ನಿರೀಕ್ಷಿತ ಸಿನಿಮಾ ವಾಗಿರುವ ರಾಬರ್ಟ್ ಚಿತ್ರದ ಶೂಟಿಂಗ್ ನಲ್ಲಿ ನಿರತವಾಗಿರುವ ಸಮಯದಲ್ಲಿ ಬಿಡುವು ಮಾಡಿಕೊಂಡು ಅರ್ಜುನ್ ಜನ್ಯ ರವರಿಗೆ ಕರೆ ಮಾಡಿ ಒಂದು ಬೇಡಿಕೆಯನ್ನು ಮುಂದೆ ಇಡುತ್ತಾರೆ.

ಅದುವೇ ಹನುಮಂತಪ್ಪ ಅವರನ್ನು ಕರೆದುಕೊಂಡು ಬನ್ನಿ ನಾನು ನನ್ನ ಮುಂದಿನ ಚಿತ್ರವಾದ ರಾಬರ್ಟ್ ಚಿತ್ರದಲ್ಲಿ ಹನುಮಂತಪ್ಪ ನವರಿಗೆ ಒಂದು ಹಾಡನ್ನು ಹಾಡಲು ಅವಕಾಶ ನೀಡಬೇಕಾಗಿದೆ ಹೇಗಿದ್ದರೂ ನೀವೇ ಅದರ ಸಂಗೀತ ಸಂಯೋಜನೆ ಮಾಡಲಿದ್ದೀರಿ, ಆದ ಕಾರಣ ನೀವು ಹೇಗಾದರೂ ಮಾಡಿ ಹನುಮಂತಪ್ಪ ನವರ ಮನವೊಲಿಸಿ ನನ್ನ ಸಿನಿಮಾದಲ್ಲಿ ಹಾಡುವಂತೆ ಮಾಡಿ ಎಂದು ಹೇಳಿದ್ದಾರೆ.

ಇದನ್ನು ಕೇಳಿದ ಅರ್ಜುನ್ ಜನ್ಯ ರವರು ಒಂದು ಕ್ಷಣ ದಂಗಾಗಿ, ಹುಡುಗನ ಮನವೊಲಿಸುವ ಯಾವುದೇ ಅವಕಾಶ ಬೇಕಾಗಿಲ್ಲ ಬದಲಾಗಿ ನೀವು ಹೇಳಿದರೆ ಸಾಕು ಆತ ಬಂದು ನಿಮ್ಮ ಮುಂದೆ ಹಾಡುತ್ತಾನೆ ಎಂದು ಹನುಮಂತಪ್ಪನವರ ಸಾಮಾನ್ಯ ಗುಣ ಏನೆಂಬುದನ್ನು ದರ್ಶನ್ ರವರಿಗೆ ತಿಳಿಸಿದ್ದಾರೆ. ಈ ಮೂಲಕ ಹನುಮಂತಪ್ಪನವರು ರಾಬರ್ಟ್ ಚಿತ್ರದಲ್ಲಿ ಹಾಡೊಂದನ್ನು ಹಾಡುವುದು ಖಚಿತವಾಗಿದ್ದು ಹಾಡಿನ ಬಿಡುಗಡೆಗಾಗಿ ದರ್ಶನ್ ಹಾಗೂ ಹನುಮಂತಪ್ಪನವರ ಅಭಿಮಾನಿಗಳು ಕಾಯುತ್ತಾ ಕುಳಿತಿದ್ದಾರೆ.

ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪೇಜನ್ನು ಲೈಕ್ ಮಾಡುವ ಮೂಲಕ ಬೆಂಬಲಿಸಿ ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಚ್ ಅನ್ನು ಬೆಂಬಲಿಸುವ ಮೂಲಕ ಸಹಕರಿಸಿ.

Post Author: Ravi Yadav